ಮಹಾರಾಣಿ ಕಾಲೇಜು ಹಾಸ್ಟೆಲ್ ಬಳಿ ಸೈಕೋ ಕಾಟ..! ಎಕ್ಸ್'ಕ್ಲೂಸಿವ್ ವಿಡಿಯೋ
news
By Suvarna Web Desk | 06:45 PM Monday, 20 March 2017

ಮಹಾರಾಣಿ ಕಾಲೇಜು ಹಾಸ್ಟೆಲ್'ನಲ್ಲಿ ಅಡುಗೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಇದ್ದರೂ ಅವರ ಕಣ್ತಪ್ಪಿಸಿ ಈತ ಹೇಗೆ ಒಳನುಸುಳುತ್ತಾನೆ ಎಂಬುದು ಗೊತ್ತಿಲ್ಲ.

ಬೆಂಗಳೂರು(ಮಾ. 20): ಮಹಾರಾಣಿ ಕಾಲೇಜಿನ ಹಾಸ್ಟೆಲ್'ನಲ್ಲಿ ವಿಕೃತ ಕಾಮಿಯ ಕಾಟ ನಡೆದಿದೆ. ಈತ ಹಾಸ್ಟೆಲ್'ನಲ್ಲಿ ಮಾಡುವ ಅವಾಂತರಗಳ ದೃಶ್ಯ ಸುವರ್ಣನ್ಯೂಸ್'ಗೆ ಲಭಿಸಿದೆ. ರಾತ್ರಿ ಆದರೆ ಸಾಕು ಹಾಸ್ಟೆಲ್'ಗೆ ನುಗ್ಗುವ ಈ ವ್ಯಕ್ತಿ ಹೆಣ್ಮಕ್ಕಳ ಒಳ ಉಡುಪುಗಳನ್ನು ಕದಿಯುತ್ತಾನೆ. ಈತ ಹುಡುಗಿಯರ ಒಳ ಉಡುಪು ತೊಟ್ಟು ಹಾಸ್ಟೆಲ್ ಪ್ರವೇಶಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಸ್ಟೆಲ್'ನ ಕೊಠಡಿಯಲ್ಲಿ ಮಲಗಿರುವ ಹುಡುಗಿಯರನ್ನು ಈತ ಕಿಟಕಿಯಿಂದ ಕದ್ದುನೋಡುತ್ತಾನೆ. ಈತ ತನ್ನ ಕೈಯಲ್ಲಿ ಆ್ಯಸಿಡ್ ಇಟ್ಟುಕೊಂಡಿರುತ್ತಾನೆ ಅಥವಾ ಚಾಕು ಇಟ್ಟುಕೊಂಡಿರುತ್ತಾನೆ ಎಂಬುದು ತಿಳಿದುಬಂದಿದೆ. ಈತನನ್ನು ಹಿಡಿಯುವ ಪ್ರಯತ್ನವನ್ನೂ ಹಾಸ್ಟೆಲ್ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಮಾಡಿದ್ದರು. ಆದರೆ, ಗೋಡೆ ಹಾರುವುದರಲ್ಲಿ ನಿಸ್ಸೀಮನಾದ ಈತ ಸುಲಭವಾಗಿ ತಪ್ಪಿಸಿಕೊಂಡಿದ್ದಾನೆ.

ಮಹಾರಾಣಿ ಕಾಲೇಜು ಹಾಸ್ಟೆಲ್'ನಲ್ಲಿ ಅಡುಗೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಇದ್ದರೂ ಅವರ ಕಣ್ತಪ್ಪಿಸಿ ಈತ ಹೇಗೆ ಒಳನುಸುಳುತ್ತಾನೆ ಎಂಬುದು ಗೊತ್ತಿಲ್ಲ. ಮಹಾರಾಣಿ ಕಾಲೇಜಿನ ಆಡಳಿತವರ್ಗವು ಈಗಾಗಲೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದೆ. ಪೊಲೀಸರು ತನಿಖೆಯನ್ನೂ ನಡೆಸುತ್ತಿದ್ದಾರೆ.

Show Full Article
COMMENTS

Currently displaying comments and replies