Asianet Suvarna News Asianet Suvarna News

ಶಾಶ್ವತ ನೀರಾವರಿ ಯೋಜನೆ ಆಗ್ರಹಿಸಿ ರೈತರಿಂದ ವಿಧಾನಸೌಧ ಮುತ್ತಿಗೆ ಯತ್ನ

ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲೇಬೇಕು ಎಂದು ಆಗ್ರಹಿಸಿದ ರೈತರ ಜೊತೆ, ಕನ್ನಡಪರ ಸಂಘಟನೆ, ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಸೇರಿ ವಿಧಾನ ಸೌಧ ಮುತ್ತಿಗೆ ಚಳುವಳಿ ನಡೆಸಿದವು.

Protestors Attempt to Gherao Vidhana Soudha

ಬೆಂಗಳೂರು (ಫೆ.27): ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ, ಬಯಲುಸೀಮೆ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲೇಬೇಕು ಎಂದು ಆಗ್ರಹಿಸಿದ ರೈತರ ಜೊತೆ, ಕನ್ನಡಪರ ಸಂಘಟನೆ, ಶಾಶ್ವತ ನೀರಾವರಿ ಹೋರಾಟ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಸೇರಿ ವಿಧಾನ ಸೌಧ ಮುತ್ತಿಗೆ ಚಳುವಳಿ ನಡೆಸಿದವು.

ರೇಸ್’ಕೋರ್ಸ್ ರಸ್ತೆಯಿಂದ ವಿಧಾನ ಸೌಧವರೆಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾರಗಾಜ್, ಸಾ.ರಾ.ಗೋವಿಂದ್, ಕರವೇ ಪ್ರವೀಣ್ ಶೆಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ರ್ಯಾಲಿ ನಡೆಸಿದರು.

ನಂತರ ವಿಧಾನ ಸೌಧಕ್ಕೆ ಮುತ್ತಿಗೆ ಹಾಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಇದೇ ವೇಳೆ ಮಾತನಾಡಿದ ವಾಟಾಳ್​ ನಾಗರಾಜ್. ರಾಜ್ಯ ಸರ್ಕಾರ ಈವರೆಗೂ ಶಾಶ್ವತ ನೀರಾವರಿ ಬಗ್ಗೆ ಯಾವುದೆ ಕ್ರಮವನ್ನು ತೆಗೆದುಕೊಂಡಿಲ್ಲ, ಇದರ ವಿರುದ್ಧ ನ್ಯಾಯ ಸಿಗುವರೆಗೂ ಹೋರಾಟ ನಡೆಸುತ್ತೆವೆ ಜೊತೆಗೆ ಕರ್ನಾಟಕ ಬಂದ್​ ಕೂಡಾ ಮಾಡುತ್ತೇವೆ ಎಂ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Follow Us:
Download App:
  • android
  • ios