Asianet Suvarna News Asianet Suvarna News

ತಂದೆ ಪಾಲಿನ ಆಸ್ತಿ ಕೇಳಿದ್ದಕ್ಕೆ ಗ್ರಾಮದಿಂದ ಬಹಿಷ್ಕಾರ..!: ದಯಾಮರಣ ಕೋರಿ ಕುಟುಂಬಸ್ಥರಿಂದ ಮೋದಿಗೆ ಪತ್ರ

ಸಾಮಾನ್ಯವಾಗಿ ಸವರ್ಣೀಯರು ದಲಿತರನ್ನು ಬಹಿಷ್ಕಾರ ಹಾಕಿದ ಪ್ರಕರಣಗಳನ್ನು ನೋಡುತ್ತೇವೆ. ಆದರೆ ತನ್ನ ತಂದೆ ಪಾಲಿನ ಆಸ್ತಿ ಕೇಳಿದ್ದಕ್ಕೆ ಆತನ ಕುಟುಂಬವನ್ನೇ ಗ್ರಾಮಹದಿಂದ ಬಹಿಷ್ಕಾರ ಹಾಕಲಾಗಿದೆ. ಇದರಿಂದ ಬೇಸತ್ತಿರುವ ಆ ಕುಟುಂಬ ದಯಾಮರಣ ಕೋರಿ ಪ್ರಧಾನಿ ಪತ್ರ ಬರೆದಿದೆ. ಅಷ್ಟಕ್ಕೂ ಏನಿದು ಈ ಪ್ರಕರಣ ಅಂತೀರಾ? ಇಲ್ಲಿದೆ ವಿವರ.

Person Throwout From The Village For Asking His Property

ವಿಜಯಪುರ(ಜೂ.22): ಸಾಮಾನ್ಯವಾಗಿ ಸವರ್ಣೀಯರು ದಲಿತರನ್ನು ಬಹಿಷ್ಕಾರ ಹಾಕಿದ ಪ್ರಕರಣಗಳನ್ನು ನೋಡುತ್ತೇವೆ. ಆದರೆ ತನ್ನ ತಂದೆ ಪಾಲಿನ ಆಸ್ತಿ ಕೇಳಿದ್ದಕ್ಕೆ ಆತನ ಕುಟುಂಬವನ್ನೇ ಗ್ರಾಮಹದಿಂದ ಬಹಿಷ್ಕಾರ ಹಾಕಲಾಗಿದೆ. ಇದರಿಂದ ಬೇಸತ್ತಿರುವ ಆ ಕುಟುಂಬ ದಯಾಮರಣ ಕೋರಿ ಪ್ರಧಾನಿ ಪತ್ರ ಬರೆದಿದೆ. ಅಷ್ಟಕ್ಕೂ ಏನಿದು ಈ ಪ್ರಕರಣ ಅಂತೀರಾ? ಇಲ್ಲಿದೆ ವಿವರ.

ಚಂದು ಚೌವ್ಹಾಣ್ ಎಂಬಾತ ತನ್ನ ತಂದೆಯ ಪಾಲಿನ ಆಸ್ತಿ ನೀಡುವಂತೆ ತನ್ನ ಚಿಕ್ಕಪ್ಪ ಹಾಗೂ ದೊಡ್ಡಪ್ಪನನ್ನು ಕೇಳಿದ್ದೇ ತಪ್ಪಾಗಿದೆ. ಯಾಕೆಂದರೆ  ಆತನ ಪಾಲಿಗೆ ಬರಬೇಕಿದ್ದ 1.20 ಎಕರೆ ಜಮೀನು ನೀಡದೆ ತಾವಷ್ಟೇ ಹಂಚಿಕೊಂಡು ಮೋಸ ಮಾಡಿದ್ದಾರೆ. ಜೊತೆಗೆ ಈತನನ್ನು ಗ್ರಾಮದಿಂದ ಬಹಿಷ್ಕಾರ ಹಾಕಿಸಿದ್ದಾರೆ.

ತನ್ನ ಪಾಲಿಗೆ ಬರಬೇಕಾದ ಜಮೀನು ಕೊಡದ ಹಿನ್ನೆಲೆಯಲ್ಲಿ ಚಿಕ್ಕಪ್ಪ- ದೊಡ್ಡಪ್ಪ ವಿರುದ್ಧ  ಈ ಸಂಬಂಧ ಚಂದು ಚೌವ್ಹಾಣ್ ಕೋರ್ಟ್ ಮೆಟ್ಟಿಲೇರಿದ. ಇದ್ರಿಂದ ಆಕ್ರೋಶಗೊಂಡ, ಈತನ ಚಿಕ್ಕಪ್ಪ-ದೊಡ್ಡಪ್ಪ, ಗ್ರಾಮಸ್ಥರಿಗೆ ಹೇಳ್ಸಿ ಈತನ  ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರ ಹಾಕ್ಸಿದ್ದಾರೆ. ಒಂದ್ ವೇಳೆ ಈತನ ಕುಟುಂಬಸ್ಥರನ್ನು ಮಾತಾಡಿಸಿದರೆ  50 ಸಾವಿರ ದಂಡವನ್ನೂ ವಿಧಿಸುವ ಆದೇಶವನ್ನು ಗ್ರಾಮದ ಪಂಚರಿಂದ ಹೊರಡಿಸಿದ್ದಾರಂತೆ. 

 ಬಹಿಷ್ಕಾರ ಹಾಕಿರುವುದರಿಂದ ಈತನ ಕುಟುಂಬಸ್ಥರನ್ನು ಯಾರೂ ಮಾತಾಡಿಸುತ್ತಿಲ್ಲ. ಕುಡಿಯಲು ಹನಿ ನೀರನ್ನೂ ಕೊಡುತ್ತಿಲ್ಲ. ಇದ್ರಿಂದ ನೊಂದಿರುವ ಇವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ನ್ಯಾಯ ಕೊಡಿಸಿ ಅಂತಾ ಮನವಿ ಮಾಡಿತ್ತು. ಇದಕ್ಕೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿ, ಸೂಕ್ತ ತನಿಖೆ ನಡೆಸಿ ಅಂತ ಪತ್ರ ರವಾನಿಸಿದೆ. ಆದರೆ ಪೋಲೀಸ್ ಇಲಾಖೆಯಾಗಲೀ, ಜಿಲ್ಲಾಡಳಿತವಾಗಲೀ ಇವರ ನೋವಿಗೆ ಸ್ಪಂಧಿಸಿಲ್ಲ. ಇದೀಗ ಬೇರೆ ದಾರಿ ಕಾಣದೆ ಇಡೀ ಕುಟುಂಬ ಪ್ರಧಾನಿಗೆ ಮತ್ತೊಂದು ಪತ್ರ ಬರೆದು ದಯಾಮರಣ ನೀಡಬೇಕು ಅಂತ ಕೇಳಿಕೊಂಡಿದೆ. ಆದರೆ ಚಂದುವಿನ ಚಿಕ್ಕಪ್ಪ ರವಿ ಚವ್ಹಾಣ್ ಮಾತ್ರ ತಾವು ಆತನಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎನ್ನುತ್ತಾರೆ.

ಇನ್ನಾದರೂ ಜಿಲ್ಲಾಡಳಿತ ಇವರ ನೋವಿಗೆ ಸ್ಪಂದಿಸಬೇಕಾಗಿದೆ. ಕಾನೂನು ಬಾಹಿರವಾಗಿ ಬಹಿಷ್ಕಾರ ಹಾಕಿರುವವರ ವಿರುದ್ಧ ಕ್ರಮಕೈಗೊಂಡು, ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ.

Follow Us:
Download App:
  • android
  • ios