ಹಸುಗೂಸು ಸಾವು: ವೈದ್ಯರ ಮೇಲೆ ಪೋಷಕರ ಹಲ್ಲೆ
news
By Suvarna Web Desk | 02:51 PM January 11, 2017

ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ ರಾತ್ರಿ ಚಿಕಿತ್ಸೆಗೆ ಆವರೆಗೆರೆ ಮೂಲದ ಮಾಲತೇಶ್ ಅವರು ತಮ್ಮ ನಾಲ್ಕು ತಿಂಗಳ ಅರುಣಾ ಎಂಬ ಮಗುವನ್ನ ದಾಖಲಿಸಿದ್ದರು. ದುರದೃಷ್ಟವಶಾತ್ ಮಗು ಉಸಿರಾಟದ ತೊಂದರೆ ಹಾಗೂ ಹೃದಯಾಘಾತದಿಂದ ಮೃತಪಟ್ಟಿದೆ.

ತಮ್ಮ ಮುಗುವಿನ ಸಾವಿಗೆ ವೈದ್ಯರೇ ಕಾರಣ ಅಂತ ಪೋಷಕರು ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ ರಾತ್ರಿ ಚಿಕಿತ್ಸೆಗೆ ಆವರೆಗೆರೆ ಮೂಲದ ಮಾಲತೇಶ್ ಅವರು ತಮ್ಮ ನಾಲ್ಕು ತಿಂಗಳ ಅರುಣಾ ಎಂಬ ಮಗುವನ್ನ ದಾಖಲಿಸಿದ್ದರು. ದುರದೃಷ್ಟವಶಾತ್ ಮಗು ಉಸಿರಾಟದ ತೊಂದರೆ ಹಾಗೂ ಹೃದಯಾಘಾತದಿಂದ ಮೃತಪಟ್ಟಿದೆ. ಈ ದುರಂತಕ್ಕೆ ವೈದ್ಯರಾದ ಡಾ ಹರ್ಷ,  ಡಾ ಕಾರ್ತಿಕ್, ಡಾ ಶಾಲಿನಿ ಅವರೆ ಕಾರಣವೆಂದು ಆರೋಪಿಸಿರುವ ಪೋಷಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆ ಖಂಡಿಸಿ ಪ್ರತಿಭಟನೆ

ವೈದ್ಯರ ಮೇಲಿನ ಅಮಾನುಷ ಹಲ್ಲೆ ಖಂಡಿಸಿ ವೈದ್ಯಕೀಯ ವಿದ್ಯಾರ್ಥಿ ಸಂಘ ಹಾಗೂ ಸರ್ಕಾರಿ ವೈದ್ಯಕೀಯ ಸಂಘ ಜಿಲ್ಲಾಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದೆ. ರಕ್ಷಣೆ ಕೋರಿ ಎಸ್ಪಿ, ಡಿಸಿ  ಹಾಗೂ ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಮಗುವಿನ ಮರಣೋತ್ತರ ಪರೀಕ್ಷೆಗೂ ಆಸ್ಪದ ನೀಡದೆ ಶವಸಂಸ್ಕಾರ ಮಾಡಿರುವ ಪೋಷಕರು, ಈ ಬಗ್ಗೆ  ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ. ಒಟ್ಟಿನಲ್ಲಿ 4 ತಿಂಗಳ ಕಂದಮ್ಮನನ್ನ ಕಳೆದುಕೊಂಡ ನೋವಿನಲ್ಲಿ, ಮಾಡಿದ ಹಲ್ಲೆಯು ಪೋಷಕರ ನೆಮ್ಮದಿ ಕೆಡಿಸಿದೆ.     

Show Full Article