Asianet Suvarna News Asianet Suvarna News

ತರಾತುರಿಯಲ್ಲಿ ರಾತ್ರಿ 1.30ಕ್ಕೆ ಪನ್ನೀರ್ ಸೆಲ್ವಂ ಪ್ರಮಾಣವಚನ ಸ್ವೀಕರಿಸಿದ್ದು ಏಕೆ ಗೊತ್ತಾ..?

ಡಿಸೆಂಬರ್ 5ರ ರಾತ್ರಿ 12ರ ಸುಮಾರಿಗೆ ಜಯಲಲಿತಾ ನಿಧನರಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಲಾಯ್ತು. ಆದರೆ. ಅದಾದ ಕೆಲವೇ ಗಂಟೆಗಳಲ್ಲಿ ಪನ್ನೀರ್ ಸೆಲ್ವಂ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಷ್ಟು ತರಾತುರಿ ಏಕೆ..? ಅಮ್ಮನ ಸಾವಿನ ಶೋಕದ ಸಂದರ್ಭದಲ್ಲೇ ಪ್ರಮಾಣವಚನದ ಅಗತ್ಯತೆ ಏನಿತ್ತು ಎಂಬ ಲಕ್ಷಾಂತರ ಮಂದಿ ಅಮ್ಮನ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

pannir selvam midinight oath secrets

ಚೆನ್ನೈ(ಡಿ.07): ದೇಶ ಕಂಡ ಪ್ರಭಾವಿ ಮಹಿಳೆಯೊಬ್ಬರಾದ ತಮಿಳುನಾಡು ಸಿಎಂ ಜಯಲಲಿತಾ 75 ದಿನಗಳ ಜೀವನ್ಮರಣದ ಹೋರಾಟದಲ್ಲಿ ಅಸುನೀಗಿದರು. ದುರಂತದ ವಿಷಯವೆಂದರೆ ಜಯಲಲಿತಾ ಸಾವಿಗೀಡಾದ ಕೊನೆ ಕ್ಷಣಗಳಲ್ಲಿ ಅಣ್ಣಾಡಿಎಂಕೆ ಪಕ್ಷದಲ್ಲಿ ರಾಜಕೀಯ ಮೇಲಾಟಗಳು ನಡೆದಿದ್ದವು. ಅಮ್ಮ ಡೆತ್ ಬೆಡ್`ನಲ್ಲಿದ್ದಾಗ ಆಪ್ತವಲಯದಲ್ಲೇ ಅಧಿಕಾರದ ಕಿತ್ತಾಟ ನಡೆದಿತ್ತು ಎಂಬುದನ್ನ ಪುಷ್ಠೀಕರಿಸುತ್ತಿವೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾತುಗಳು.

ಹೌದು, ಡಿಸೆಂಬರ್ 5ರ ರಾತ್ರಿ 12ರ ಸುಮಾರಿಗೆ ಜಯಲಲಿತಾ ನಿಧನರಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಲಾಯ್ತು. ಆದರೆ. ಅದಾದ ಕೆಲವೇ ಗಂಟೆಗಳಲ್ಲಿ ಪನ್ನೀರ್ ಸೆಲ್ವಂ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಷ್ಟು ತರಾತುರಿ ಏಕೆ..? ಅಮ್ಮನ ಸಾವಿನ ಶೋಕದ ಸಂದರ್ಭದಲ್ಲೇ ಪ್ರಮಾಣವಚನದ ಅಗತ್ಯತೆ ಏನಿತ್ತು ಎಂಬ ಲಕ್ಷಾಂತರ ಮಂದಿ ಅಮ್ಮನ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

CLICK HERE.. ಜಿಯೋ ಗ್ರಾಹಕರಿಗೆ ನೀಡುತ್ತಿದೆ ಬೆಚ್ಚಿಬೀಳಿಸುವ ಆಫರ್..!

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ಧಿಗಳೇ ಬೇರೆ. ಜಯಲಲಿತಾ ಸಾವಿನ ನಂತರ ಜಯಲಲಿತಾರ ಆತ್ಮಸಖಿ ಶಶಿಕಲಾ ಅವರ ಮನ್ನಾರ್ ಗುಡಿ ಕುಟುಂಬ ಅಧಿಕಾರದ ಗದ್ದುಗೆಗೆ ತಂತ್ರ ನಡೆಸಿತ್ತು. ಶಶಿಕಲಾರ ಸಹೋದರನೊಬ್ಬ ಶಾಸಕರ ದಂಡು ಕಟ್ಟಿಕೊಂಡು ಬೆಂಬಲ ಗಿಟ್ಟಿಸಲು ಪ್ರಯತ್ನ ನಡೆಸಿದ್ದ. ಶಶಿಕಲಾ ಅಥವಾ ತಮ್ಮ ಕುಟುಂಬದವರಲ್ಲೊಬ್ಬರನ್ನ ಸಿಎಂ ಪಟಟ್ಕ್ಕೇರಿಸಲು ಯತ್ನ ನಡೆಸಿದ್ದ. ಾದರೆ, ಶಾಸಕರ ಹೆಚ್ಚಿನ ಬಲ ಪನ್ನೀರ್ ಸೆಲ್ವಂ ಜೊತೆಗಿತ್ತು. ಆದರೂ, ಇವರ ತೆರೆಮರೆಯ ಯತ್ನ ಮುಂದುವರೆದಿದ್ದರಿಂದ ಬೇರೊಂದು ಪ್ರಹಸನಕ್ಕೆ ಆಸ್ಪದ ಕೊಡುವುದು ಬೇಡವೆಂದೇ ಮಧ್ಯರಾತ್ರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರೂ ಎನ್ನಲಾಗಿದೆ.