ಸುಳ್ಳು ಸುದ್ದಿ ಉಡಾಯಿಸಿದ ಪಾಕ್?
news
By Suvarna Web Desk | 11:34 PM Tuesday, 10 January 2017

‘‘ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಬಳಸಿಕೊಂಡು ಕ್ಷಿಪಣಿ ಪರೀಕ್ಷೆಯ ವಿಡಿಯೋವನ್ನು ಸಿದ್ಧಪಡಿಸಲಾಗಿದೆ,’’ ಎಂದು ಪಠಾಣ್ಕೋಟ್ ಉಪಗ್ರಹ ಚಿತ್ರ ವಿಶ್ಲೇಷಣೆಯ ತಜ್ಞರು ಮಂಗಳವಾರ ಬೆಳಕು ಚೆಲ್ಲಿದ್ದಾರೆ.

ಇಸ್ಲಾಮಾಬಾದ್(ಜ.10): ಪಾಕಿಸ್ತಾನವು ಸೋಮವಾರ ಉಡಾವಣೆ ಮಾಡಿದ್ದಾಗಿ ಹೇಳಿಕೊಂಡಿರುವ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯದ  ಬಾಬರ್-3 ಕ್ಷಿಪಣಿಯು ನಕಲಿ ಎಂಬ ಅನುಮಾನವನ್ನು ಉಪಗ್ರಹ ಚಿತ್ರ ವಿಶ್ಲೇಷಣೆಯ ತಜ್ಞರು ವ್ಯಕ್ತಪಡಿಸಿದ್ದಾರೆ.

‘‘ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಬಳಸಿಕೊಂಡು ಕ್ಷಿಪಣಿ ಪರೀಕ್ಷೆಯ ವಿಡಿಯೋವನ್ನು ಸಿದ್ಧಪಡಿಸಲಾಗಿದೆ,’’ ಎಂದು ಪಠಾಣ್‌ಕೋಟ್‌ನ ಉಪಗ್ರಹ ಚಿತ್ರ ವಿಶ್ಲೇಷಣೆಯ ತಜ್ಞರು ಮಂಗಳವಾರ ಬೆಳಕು ಚೆಲ್ಲಿದ್ದಾರೆ. ‘‘ಪಾಕಿಸ್ತಾನ ಸೈನ್ಯ ಬಿಡುಗಡೆ ಮಾಡಿರುವ ಕ್ಷಿಪಣಿ ಯಶಸ್ವಿ ವಿಡಿಯೊ ಕಂಪ್ಯೂಟರ್ ತಂತ್ರಜ್ಞಾನದ್ದು ಎಂಬಂತಿದೆ. ಶ್ವೇತ ವರ್ಣದ ಕ್ಷಿಪಣಿ ಅನಿರೀಕ್ಷಿತವಾಗಿ ಕಿತ್ತಳೆ ಹಣ್ಣಿನ ಬಣಕ್ಕೆ ತಿರುಗಿದೆ. ಅಲ್ಲದೆ, ನಂಬಲಾರ್ಹವಾಗದಷ್ಟು ಹೆಚ್ಚಿನ ವೇಗವಾಗಿ ಕ್ಷಿಪಣಿ ಚಲಿಸಿತ್ತು,’’ ಎಂದು ನಿವೃತ್ತ ಕರ್ನಲ್ ಮತ್ತು ಚಿತ್ರ ವಿಶ್ಲೇಷಕ ವಿನಾಯಕ್ ಭಟ್ ಹೇಳಿದ್ದಾರೆ.

450 ಕಿ.ಮೀ. ಗುರಿ ತಲುಪಬಲ್ಲ ಹಾಗೂ ಅಣ್ವಸ ಹೊತ್ತೊಯ್ಯಬಲ್ಲ ಸಾಮರ್ಥ್ಯವು ಈ ಕ್ಷಿಪಣಿಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.

Show Full Article