Asianet Suvarna News Asianet Suvarna News

ಪ್ರಧಾನಿಯನ್ನು 'ಕತ್ತೆ' ಎನ್ನುವುದಕ್ಕಿಂತ ದೊಡ್ಡ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತೊಂದಿಲ್ಲ

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಜನರ ವಾಕ್ ಸ್ವಾತಂತ್ರವನ್ನು ಹತ್ತಿಕ್ಕಿದ್ದ ಪಕ್ಷ ಇಂದು ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಉಪದೇಶ ನೀಡುತ್ತಿದೆ. ನಿಮ್ಮ ಪ್ರಧಾನ ಮಂತ್ರಿಯನ್ನೇ ಕತ್ತೆ ಎಂದು ಹೇಳುವ ಸ್ವಾತಂತ್ರ ನಿಮಗಿದೆ.  ಅಭಿವ್ಯಕ್ತಿ ಸ್ವಾತಂತ್ರಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾಗಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಕಟುಕಿದ್ದಾರೆ.

No Bigger Example Of Freedom Of Expression than Calling your own Pm Donkey says Venkaiah Naidu

ನವದೆಹಲಿ ( ಫೆ.27): ದೆಹಲಿ ವಿವಿಯ ರಾಮ್ ಜಾಸ್ ಕಾಲೇಜಿನಲ್ಲಿ ನಡೆದ ಹಿಂಸಾಚಾರ ಹಿನ್ನೆಲೆಯಲ್ಲಿ ಬಿಜೆಪಿ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ವೆಂಕಯ್ಯ ನಾಯ್ಡು ಪ್ರತಿಕ್ರಿಯಿಸಿದ್ದಾರೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಜನರ ವಾಕ್ ಸ್ವಾತಂತ್ರವನ್ನು ಹತ್ತಿಕ್ಕಿದ್ದ ಪಕ್ಷ ಇಂದು ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಉಪದೇಶ ನೀಡುತ್ತಿದೆ. ನಿಮ್ಮ ಪ್ರಧಾನ ಮಂತ್ರಿಯನ್ನೇ ಕತ್ತೆ ಎಂದು ಹೇಳುವ ಸ್ವಾತಂತ್ರ ನಿಮಗಿದೆ.  ಅಭಿವ್ಯಕ್ತಿ ಸ್ವಾತಂತ್ರಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾಗಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಕಟುಕಿದ್ದಾರೆ.

ದೇಶದ ಪ್ರಧಾನ ಮಂತ್ರಿಯನ್ನು ಕತ್ತೆಗೆ ಹೋಲಿಸುವ ದೇಶದಲ್ಲಿ ನೀವು ಬದುಕುತ್ತಿದ್ದೀರಿ. ಹಾಗಿರುವಾಗ  ಅಭಿವ್ಯಕ್ತಿ ಸ್ವಾತಂತ್ರ ಇಲ್ಲ ಎಂದು ಹೇಳಲು ಹೇಗೆ ಸಾಧ್ಯ? ಬೇರೆಯವರ ಅಭಿಪ್ರಾಯಗಳನ್ನು ಗೌರವಿಸುವುದು. ಆದರೆ ಕಾಂಗ್ರೆಸ್ ಗೆ ಜನರ ಮೂಲಭೂತ ಹಕ್ಕುಗಳ ಬಗ್ಗೆಯೇ ಗೌರವವಿಲ್ಲ. ಅಂತದ್ದರಲ್ಲಿ  ಜನರ ಮನಸ್ಸಿನಲ್ಲಿ ವಿಷವನ್ನು ತುಂಬಲು ಯತ್ನಿಸುತ್ತಿದ್ದಾರೆ ಎಂದು ವೆಂಕಯ್ಯ ನಾಯ್ಡು ಆರೋಪಿಸಿದ್ದಾರೆ.  

Follow Us:
Download App:
  • android
  • ios