Asianet Suvarna News Asianet Suvarna News

ದೆಹಲಿಯ ಬ್ಯಾಂಕ್ ಮೇಲೆ ಐಟಿ ದಾಳಿ: 100 ಕೋಟಿ ಕಪ್ಪುಹಣವಿದ್ದ 44 ಅಕೌಂಟ್ ಪತ್ತೆ

ಇದೊಂದೇ ಶಾಖೆಯಲ್ಲಿ ಬರೋಬ್ಬರಿ 450 ಕೋಟಿ ರೂಪಾಯಿಯಷ್ಟು ಹಳೆಯ ನೋಟುಗಳು ಡೆಪಾಸಿಟ್ ಆಗಿವೆ. 44 ನಕಲಿ ಅಕೌಂಟ್`ಗಳನ್ನ ನಕಲಿ ದಾಖಲೆಗಳನ್ನ ಬಳಸಿ ಸೃಷ್ಟಿಸಲಾಗಿದೆ. ಈ ಹಣವನ್ನ ಬಂಗಾರ ಖರೀದಿಗೆ ಬಳಸಲು ಯೋಜಿಸಲಾಗಿತ್ತು ಎಂಬ ಮಾಹಿತಿಯೂ ತನಿಖೆ ವೇಳೆ ಧೃಡಪಟ್ಟಿದೆ.

newdelhi axis bank raid by it

ನವದೆಹಲಿ(ಡಿ.09): ದೆಹಲಿಯ ಚಾಂದ್ನಿ ಚೌಕ್`ನ ಆಕ್ಸಿಸ್ ಬ್ಯಾಂಕ್ ಶಾಖೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 100 ಕೋಟಿಯಷ್ಟು  ಹಳೆಯ ನೋಟುಗಳನ್ನ ಡೆಪಾಸಿಟ್ ಮಾಡಲಾಗಿದ್ದ 44 ನಕಲಿ ಅಕೌಂಟ್`ಗಳನ್ನ ಪತ್ತೆ ಹಚ್ಚಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರಮೋದಿ ನೋಟ್ ಬ್ಯಾನ್ ಮಾಡಿದ ಬಳಿಕ 500 ಮತ್ತು 1000 ರೂಪಾಯಿಯ 100 ಕೋಟಿಯಷ್ಟು ಹಳೆಯ ನೋಟುಗಳು ಈ ಖಾತೆಗಳಿವೆ ಡೆಪಾಸಿಟ್ ಆಗಿವೆ ಎಂದು ತಿಳಿದುಬಂದಿದೆ.