ಎದುರಾಳಿಗಳ ಚಲನವಲನ ಗಮನಿಸಲು ಬರುತ್ತಿದೆ ನೂತನ ಟೆಕ್ನಾಲಜಿ ಕ್ಯಾಮೆರಾ
news
By Suvarna Web Desk | 01:47 AM February 17, 2017

ಭಾರತದ ಗಡಿಯಲ್ಲಿ ಎದುರಾಳಿಗಳ ಚಲನ ವಲನ ಕಂಡು ಹಿಡಿಯುವುದು ಸಾಮಾನ್ಯವಲ್ಲ. ಹೀಗಾಗಿ ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನೋಲಾಜಿ ಕಂಪನಿಯವರು ಹಗಲು ಮತ್ತು ರಾತ್ರಿ ವೇಳೆ ಶತ್ರುಗಳ ಚಲನ ವಲನ  ಕಂಡುಹಿಡಿಯುವ ನ್ಯೂ ಟೆಕ್ನಾಲಜಿಯ ಕ್ಯಾಮೆರಾವನ್ನ ತಯಾರಿಸಿದ್ದಾರೆ. ಇದರಿಂದ ರಾತ್ರಿಹೊತ್ತು ಶತ್ರುಗಳನ್ನು ಈ ಕ್ಯಾಮರಾಗಳು ಸ್ಪಷ್ಟವಾಗಿ ಗುರುತಿಸುತ್ತೇವೆ. ಇದರ ಇನ್ನೊಂದು ವಿಶೇಷತೆ ಅಂದರೆ ಇವು ವೈರ್'ಲೆಸ್ ಕ್ಯಾಮರಾಗಳು, ಇವುಗಳನ್ನ ಎಲ್ಲಿ ಬೇಕಾದ್ರೂ ಫಿಟ್ ಮಾಡಿ ಮಾನಿಟರ್ ಮಾಡಬಹುದು.

ಬೆಂಗಳೂರು (ಫೆ. 17): ಭಾರತದ ಗಡಿಯಲ್ಲಿ ಎದುರಾಳಿಗಳ ಚಲನ ವಲನ ಕಂಡು ಹಿಡಿಯುವುದು ಸಾಮಾನ್ಯವಲ್ಲ. ಹೀಗಾಗಿ ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನೋಲಾಜಿ ಕಂಪನಿಯವರು ಹಗಲು ಮತ್ತು ರಾತ್ರಿ ವೇಳೆ ಶತ್ರುಗಳ ಚಲನ ವಲನ  ಕಂಡುಹಿಡಿಯುವ ನ್ಯೂ ಟೆಕ್ನಾಲಜಿಯ ಕ್ಯಾಮೆರಾವನ್ನ ತಯಾರಿಸಿದ್ದಾರೆ. ಇದರಿಂದ ರಾತ್ರಿಹೊತ್ತು ಶತ್ರುಗಳನ್ನು ಈ ಕ್ಯಾಮರಾಗಳು ಸ್ಪಷ್ಟವಾಗಿ ಗುರುತಿಸುತ್ತೇವೆ. ಇದರ ಇನ್ನೊಂದು ವಿಶೇಷತೆ ಅಂದರೆ ಇವು ವೈರ್'ಲೆಸ್ ಕ್ಯಾಮರಾಗಳು, ಇವುಗಳನ್ನ ಎಲ್ಲಿ ಬೇಕಾದ್ರೂ ಫಿಟ್ ಮಾಡಿ ಮಾನಿಟರ್ ಮಾಡಬಹುದು.

ತಂತ್ರಜ್ಞಾನ ಈಗ ಆಂಬ್ಯುಲೆನ್ಸ್'ಗೂ ಕಾಲಿಟ್ಟಿದೆ. ಈಗೇನಿದ್ದರೂ ಏರ್ ಅಂಬ್ಯಲೆನ್ಸ್  ಜಮಾನ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಏರ್ ಆಂಬ್ಯುಲೆನ್ಸ್ ನಲ್ಲಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವ ಯೋಜನೆ ಇಲ್ಲಿದೆ. ಏರೋ ಇಂಡಿಯಾದಲ್ಲಿ ಈ ಏರ್ ಆಂಬ್ಯುಲೆನ್ಸ್ ಪ್ರದರ್ಶನ ಕಂಡು ಎಲ್ಲರ ಗಮನ ಸೆಳೆದಿದೆ. ಏರ್ ಬಸ್ ಕಂಪನಿ ನಿರ್ಮಾಣ ಮಾಡಿರುವ ಈ ಹೆಲಿಕಾಫ್ಟರ್ ಅನ್ನು ಬೆಂಗಳೂರಿನ ಏವಿಯೇಟರ್ಸ್ ಏರ್ ರೆಸ್ಕ್ಯೂ ಕಂಪನಿ ಖರೀದಿಸಿ ಆಂಬ್ಯುಲೆನ್ಸ್ ಆಗಿ ಬಳಸುತ್ತಿದೆ. ಒಂದು ಗಂಟೆಗೆ 1.30 ಲಕ್ಷ ಬೆಲೆ ನಿಗದಿ ಮಾಡಲಾಗಿದೆ.

ಬ್ರಹ್ಮೋಸ್ ಶಕ್ತಿ

ಭಾರತೀಯ ಸೈನ್ಯದ ಶಕ್ತಿ ಅಂದ್ರೆ ಅದು ಬ್ರಹ್ಮೋಸ್. ಇದು ನಮ್ಮ ದೇಶದ ಪಾಲಿಗೆ ನಿಜಕ್ಕೂ ಬ್ರಹ್ಮಾಸ್ತ್ರ. ಕಾಲು ಕೆರೆದು ಜಗಳಕ್ಕೆ ನಿಲ್ಲುವ ಚೀನಾ ಮತ್ತು ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲು ಇರುವ ಕ್ಷಿಪಣಿ ಎಂದ್ರೆ ಅದು ಬ್ರಹ್ಮೋಸ್​.  ಸದ್ಯ 290 ಕಿಮೀ ದೂರದ ಗುರಿಯಲ್ಲಿಟ್ಟರೂ ಶತ್ರು ಪಾಳಯವನ್ನ ಉಡಾಯಿಸಬಲ್ಲ ಸಾಮರ್ಥ್ಯ ಈ ಬ್ರಹ್ಮೋಸ್​'ಗಿದೆ. ಸಮುದ್ರದ ಮೇಲೆ ಹಡಗಿನಲ್ಲಿ, ನೀರಿನಾಳದ ಜಲಾಂತರ್ಗಾಮಿ ಮೂಲಕ, ಹಾಗೂ ಯುದ್ಧ ಭೂಮಿಯಲ್ಲೂ ಈ ಬ್ರಹ್ಮೋಸ್​'ನ್ನು ಉಡಾಯಿಸಬಹುದು. ಭಾರತ ಮತ್ತು ರಷ್ಯಾ ಜಂಟಿಯಾಗಿ ಈ ಬ್ರಹ್ಮೋಸ್ ಕ್ಷಿಪಣಿಯನ್ನ ಅಭಿವೃದ್ಧಿಪಡಿಸಿದೆ. ಈ ಕ್ಷಿಪಣಿಯ ಗುರಿಯನ್ನ 450 ಕಿಮೀ ನಿಂದ, 800 ಕಿಮೀ ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಹಾಗಾದಲ್ಲಿ ಮುಂದೆ ಈ ಬ್ರಹ್ಮೋಸ್ ಇಡೀ ಪಾಕಿಸ್ತಾನವನ್ನೇ ತಲುಪುವ ಸಾಮರ್ಥ್ಯ ಹೊಂದಲಿದೆ.

 

Show Full Article