ಧೋನಿಯನ್ನೇ ಯಾಮಾರಿಸಿದ ಕಳ್ಳರು
news
By Suvarna Web Desk | 11:12 AM Sunday, 19 March 2017

ಧೋನಿ ಪ್ರಸ್ತುತ ಜಾರ್ಖಂಡ್ ಕ್ರಿಕೆಟ್ ತಂಡದ ನಾಯಕನಾಗಿ ವಿಜಯ್ ಹಜಾರೆ ಟೂರ್ನ'ಮೆಂಟ್'ನಲ್ಲಿ ಆಡುತ್ತಿದ್ದಾರೆ.2 ದಿನಗಳ ಹಿಂದೆ ತಮ್ಮ ತಂಡದ ಆಟಗಾರರ ಜೊತೆ ದೆಹಲಿಯ ದ್ವಾರಕಾ ಹೋಟೆಲ್'ನಲ್ಲಿ ಉಳಿದುಕೊಂಡಿದ್ದರು.

ನವದೆಹಲಿ(ಮಾ.19): ಮೈದಾನದಲ್ಲಿ ಇತರ ದೇಶದ ಆಟಗಾರರಿಗೆ ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿ ತಮ್ಮ ಬ್ಯಾಟಿಂಗ್ ಹಾಗೂ ಕೀಪಿಂಗ್ ಮೂಲಕ ಚಮತ್ಕಾರ ತೋರಿಸುತ್ತಿದ್ದರು. ಈಗ ಕಳ್ಳರು ಧೋನಿಯನ್ನೇ ಯಾಮಾರಿಸಿದ್ದಾರೆ.

ಖ್ಯಾತ ಆಟಗಾರನ ಮೂರು ಮೊಬೈಲ್'ಗಳನ್ನು ಕಳ್ಳರು ಕದ್ದಿದ್ದು, ಈ ಬಗ್ಗೆ ಧೋನಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಧೋನಿ ಪ್ರಸ್ತುತ ಜಾರ್ಖಂಡ್ ಕ್ರಿಕೆಟ್ ತಂಡದ ನಾಯಕನಾಗಿ ವಿಜಯ್ ಹಜಾರೆ ಟೂರ್ನ'ಮೆಂಟ್'ನಲ್ಲಿ ಆಡುತ್ತಿದ್ದಾರೆ.2 ದಿನಗಳ ಹಿಂದೆ ತಮ್ಮ ತಂಡದ ಆಟಗಾರರ ಜೊತೆ ದೆಹಲಿಯ ದ್ವಾರಕಾ ಹೋಟೆಲ್'ನಲ್ಲಿ ಉಳಿದುಕೊಂಡಿದ್ದರು.

ಆಕಸ್ಮಿಕವಾಗಿ ಹೋಟೆಲ್'ನ ಒಂದು ಭಾಗಕ್ಕೆ ಬೆಂಕಿ ತಗುಲಿತ್ತು. ಆ ನಂತರ ಧೋನಿಯನ್ನು ಒಳಗೊಂಡು ತಂಡದ ಆಟಗಾರರನ್ನು ಹೋಟಲ್'ನಿಂದ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಧೋನಿಯ 3 ಮೊಬೈಲ್'ಗಳು ಕಳುವಾಗಿವೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Show Full Article
COMMENTS

Currently displaying comments and replies