Asianet Suvarna News Asianet Suvarna News

ಉ.ಪ್ರ.ದಲ್ಲಿ ಭ್ರಷ್ಟರ ಬೆವರಿಳಿಸಿದ ಮಹಿಳಾ ಅಧಿಕಾರಿಗೆ ತಮ್ಮ ಡ್ರೀಮ್ ಟೀಮ್'ನಲ್ಲಿ ಸ್ಥಾನ ಕೊಟ್ಟ ಮೋದಿ

ಉತ್ತರ ಪ್ರದೇಶದಲ್ಲಿ ಗುತ್ತಿಗೆದಾರರು ದರ್ಪದಿಂದ ಗರ್ಜಿಸುತ್ತಿದ್ದರು. ಆ ಗುತ್ತಿದಾರರಿಗೆ ಒಬ್ಬ ಮಹಿಳಾ ಅಧಿಕಾರಿ ನಿಂತಲ್ಲೇ ನಿಲ್ಲಿಸಿ ನೀರು ಇಳಿಸಿದ್ದಾಳೆ. ಯಾರು ಆ ಅಧಿಕಾರಿ? ಈಗ ಆ ಅಧಿಕಾರಿಗೆ ಪ್ರಧಾನಿ ಮೋದಿ ಕೊಟ್ಟ ಗಿಫ್ಟ್ ಏನು? ಈ ಸ್ಟೋರಿ ನೋಡಿ...

modi rewards ias officer chandrakala with key assignment

ನವದೆಹಲಿ(ಮಾ. 23): ಇತ್ತೀಚೆಗೆ ಮಹಿಳಾ ಅಧಿಕಾರಿಯೊಬ್ಬರು ಗುತ್ತಿಗೆದಾರರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಈ ವಿಡಿಯೋವನ್ನು ನೀವೂ ಕೂಡ ವಾಟ್ಸ್'ಅಪ್​ ಮತ್ತು ಫೇಸ್'​ಬುಕ್'​ನಲ್ಲಿ ನೋಡಿರಬಹುದು. ಈ ಅಧಿಕಾರಿ ಬೇರಾರೂ ಅಲ್ಲ, ಉತ್ತರ ಪ್ರದೇಶದ ಬುಲಂದಶಹರ್‌ ಜಿಲ್ಲಾಧಿಕಾರಿ ಚಂದ್ರಕಲಾ.

2008ರ ಉತ್ತರ ಪ್ರದೇಶ ಬ್ಯಾಚಿನ ಈ ಅಧಿಕಾರಿಯನ್ನ ಕಂಡ್ರೆ ಭ್ರಷ್ಟರು ಕಾಲಿಗೆ ಬುದ್ಧಿ ಹೇಳ್ತಾರೆ.  2014ರಲ್ಲಿ ರಸ್ತೆ ಕಾಮಗಾರಿ ಸಂಬಂಧ ಕಳಪೆ ಕಾಮಗಾರಿ ಮಾಡಿದ್ದ ಗುತ್ತಿಗೆದಾರರಿಗೆ ನಡುರಸ್ತೆಯಲ್ಲೇ ನೀರಿಳಿಸಿದ್ದರು.

ಈ ಘಟನೆ ನಂತರ ಚಂದ್ರಕಲಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋ ರಾತ್ರಿ ಖ್ಯಾತಿ ಗಳಿಸಿದ್ದರು. ಬಳಿಕ ತಮ್ಮ ಪ್ರಾಮಾಣಿಕ ಕೆಲಸಗಳಿಂದಲೇ ಉತ್ತರ ಪ್ರದೇಶದಲ್ಲಿ ಫೈರ್'ಬ್ರಾಂಡ್ ಎಂದು ಖ್ಯಾತಿ ಗಳಿಸಿದ್ದ ಚಂದ್ರಕಲಾ ಅವರು ಬಿಜ್ನೋರ್ ಪ್ರದೇಶವನ್ನು "ಬಯಲು ಶೌಚ ಮುಕ್ತ" ಪ್ರದೇಶವನ್ನಾಗಿಸಿದ್ದರು.

ಡಿಸಿ ಚಂದ್ರಕಲಾ ಆಡುವ ಪ್ರತಿ ಮಾತಿನಲ್ಲಿಯೂ ಪ್ರಾಮಾಣಿಕ ಸೇವೆ, ಸಾಮಾಜಿಕ ಕಳಕಳಿ ಇದ್ದೇ ಇರುತ್ತೆ. ಇಂಥಾ DC ಚಂದ್ರಕಲಾ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಚಂದ್ರಕಲಾ ಅವರಿಗೆ ಕೇಂದ್ರ ಸರ್ಕಾರ ಬಡ್ತಿ ನೀಡಿ ಮೋದಿಯವರ ಕನಸಿನ ತಂಡದ ಭಾಗವಾಗಿಸಿದೆ.

ಪ್ರಧಾನಿ ಮೋದಿಯವರ ಕನಸಿನ "ಸ್ವಚ್ಛ ಭಾರತ" ಯೋಜನೆಯ ನಿರ್ದೇಶಕಿ ಹಾಗೂ ಕುಡಿಯುವ ನೀರು ಮತ್ತು ಒಳಚರಂಡಿ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ಚಂದ್ರಕಲಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

ಒಟ್ಟಿನಲ್ಲಿ ಖಡಕ್​ ಮಾತಿನಿಂದ ಭ್ರಷ್ಟರ ಸಿಂಹಸ್ವಪ್ನವಾಗಿರೋ ಡಿಸಿ ಚಂದ್ರಕಲಾ ಈಗ ಡೆಲ್ಲಿಗೆ ಶಿಫ್ಟ್ ಆಗಿದ್ದಾರೆ. ಚಂದ್ರಕಲಾ ಇಡೀ ದೇಶದ ಸ್ವಚ್ಛ ಭಾರತ ಅಭಿಯಾನದ ನಿರ್ದೇಶಕರಾಗಿದ್ದು, ಭ್ರಷ್ಟ ಗುತ್ತಿಗೆದಾರರಲ್ಲಿ ಹಾಗೂ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.

ಜೆ. ಎಸ್​. ಪೂಜಾರ್​, ನ್ಯೂಸ್​ ಡ್ಕೆಸ್​, ಸುವರ್ಣನ್ಯೂಸ್​

Follow Us:
Download App:
  • android
  • ios