Asianet Suvarna News Asianet Suvarna News

ಡೈರಿ ಪ್ರಕರಣ: ಕಪ್ಪದ ಸತ್ಯ ಒಪ್ಪಿಕೊಂಡ ಎಂಎಲ್ಸಿ ಗೋವಿಂದರಾಜು !

ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಕೈ ನಾಯಕರ ಹೆಸರು ಕೋಡ್ ರೀತಿಯಲ್ಲಿ ಉಲ್ಲೇಖವಾಗಿದ್ದರ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದು, ಐಟಿ ಅಧಿಕಾರಿಗಳ ಮುಂದೆ ಕೋಡ್ ವರ್ಡ್ ಗಳಲ್ಲಿದ್ದ ಹೆಸರು ಕಾಂಗ್ರೆಸ್ ನಾಯಕರದ್ದಾಗಿದ್ದು, ತನ್ನ ವೈಯಕ್ತಿಕ ಲೆಕ್ಕಾಚಾರಗಳಿಗೆ ಬರೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

MLC Govindaraju dairy case

ಬೆಂಗಳೂರು(ಜೂ.22): ಕಾಂಗ್ರೆಸ್ ಹೈಕಮಾಂಡ್'ಗೆ ಕಪ್ಪ ನೀಡಿದ ಡೈರಿ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸತ್ಯ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಕೈ ನಾಯಕರ ಹೆಸರು ಕೋಡ್ ರೀತಿಯಲ್ಲಿ ಉಲ್ಲೇಖವಾಗಿದ್ದರ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದು, ಐಟಿ ಅಧಿಕಾರಿಗಳ ಮುಂದೆ ಕೋಡ್ ವರ್ಡ್ ಗಳಲ್ಲಿದ್ದ ಹೆಸರು ಕಾಂಗ್ರೆಸ್ ನಾಯಕರದ್ದಾಗಿದ್ದು, ತನ್ನ ವೈಯಕ್ತಿಕ ಲೆಕ್ಕಾಚಾರಗಳಿಗೆ ಬರೆದುಕೊಂಡಿದ್ದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್'ಗೆ ಕಪ್ಪ ನೀಡಿರುವ ಬಗ್ಗೆ SG ಅಂದರೆ SONIA GANDHI, RG ಅಂದರೆ RAHUL GANDHI ಸೇರಿದಂತೆ ಹಲವು ನಾಯಕರ ಹೆಸರುಗಳನ್ನು ಮತ್ತು ಅವರಿಗೆ ನೀಡಿರುವ ಹಣದ ಬಗ್ಗೆ ಡೈರಿಯಲ್ಲಿ ಬರೆದುಕೊಂಡಿದ್ದು ಎನ್ನಲಾಗಿದ್ದು, ಇದನ್ನು ಐಟಿ ಅಧಿಕಾರ ವಶಪಡಿಸಿಕೊಂಡಿದ್ದರು.

ಕಪ್ಪದ ಡೈರಿ

ಗೋವಿಂದರಾಜು ಅವರ ಮನೆ ಮೇಲೆ ನಡೆದ ದಾಳಿಯಲ್ಲಿ ಸಿಕ್ಕಿದ್ದ ಡೈರಿಯಲ್ಲಿನ ಕೆಲ ಅಂಶಗಳು ಕಳೆದ ಫೆಬ್ರವರಿಯಲ್ಲಿ ಮಾಧ್ಯಮಗಳಿಗೆ ಲಭ್ಯವಾದಾಗ ಪಕ್ಷದ ವರಿಷ್ಠ ಮುಖಂಡರಿಗೆ ಸುಮಾರು 600 ಕೋಟಿ ರು. ಕಪ್ಪ ಸಂದಾಯವಾದ ಬಗ್ಗೆ ಉಲ್ಲೇಖವಾಗಿತ್ತು. ಎಂ.ವೋರಾ, ಎಸ್‌ಜಿ ಆಫೀಸ್, ಆರ್‌ಜಿ ಆಫೀಸ್, ಡಿಜಿಎಸ್.. ಎಂಬ ಇತ್ಯಾದಿ ಗೂಢಾಕ್ಷರಗಳಲ್ಲಿ ಹಣ ನಮೂದಾದ ಬಗ್ಗೆ ಮಾಹಿತಿ ಇತ್ತು. ಇನ್ನು ಮಾಧ್ಯಮಗಳಿಗೆ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ 7 ಕೋಟಿ ನೀಡಿದ ಹಾಗೂ ಸ್ಟೀಲ್ ಬ್ರಿಜ್‌ನಿಂದ ೬೫ ಕೋಟಿ ಕೋಟಿ ಸ್ವೀಕರಿಸಿದ ಬಗ್ಗೆ ಮಾಹಿತಿ ಇತ್ತು.

ಈ ಸಂಬಂಧ ಫೆಬ್ರವರಿ 11, 2017ರಂದು ಆದಾಯ ತೆರಿಗೆ ಇಲಾಖೆಯು ಗೋವಿಂದರಾಜು ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ವೇಳೆ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಅದರಲ್ಲಿ ಕೆಲವಕ್ಕೆ ಅವರು ಉತ್ತರ ನೀಡಿದ್ದು, ಇನ್ನು ಕೆಲವು ಪ್ರಶ್ನೆಗಳಿಗೆ ನೆನಪಿಲ್ಲ ಎಂದು ಉತ್ತರಿಸಿದ್ದಾರೆ.

ಆದರೆ ಈ ಪೈಕಿ ಮುಖ್ಯವಾಗಿ ಅವರು ನೀಡಿರುವ ಎರಡು ಉತ್ತರಗಳು ಇದೀಗ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಡೈರಿಯ ಪುಟ ೩ರಲ್ಲಿ ನಮೂದಾಗಿರುವ ಕೆಲ ಹೆಸರುಗಳು ಕಾಂಗ್ರೆಸ್ ನಾಯಕರ ಹೆಸರನ್ನು ಸೂಚಿಸುವ ರೀತಿಯಲ್ಲಿ ಸಂಕ್ಷಿಪ್ತ ಮಾದರಿಯಲ್ಲಿದ್ದವು. ಈ ಬಗ್ಗೆ ಆದಾಯ ತೆರಿಗೆ ಕೇಳಿದ ಪ್ರಶ್ನೆಗೆ, ಹೌದು, ಇದು ಕಾಂಗ್ರೆಸ್ ನಾಯಕರ ಹೆಸರುಗಳು ಎಂದು ಗೋವಿಂದರಾಜು ಒಪ್ಪಿಕೊಂಡಿದ್ದಾರೆ ಎಂದು ದಾಖಲೆಗಳನ್ನು ಆಧರಿಸಿ ಟೈಮ್ಸ್ ನೌ ಸುದ್ದಿ ವಾಹಿನಿ ವರದಿ ಮಾಡಿದೆ.

Follow Us:
Download App:
  • android
  • ios