ಚೆಕ್ ಬೌನ್ಸ್ ಪ್ರಕರಣ: ಸಂಕಷ್ಟದಲ್ಲಿ ಸಿಲುಕಿರುವ ಸಚಿವ ಸಂತೋಷ್ ಲಾಡ್
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ನೀಡಿದ್ದ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಸಂತೋಷ್ ಲಾಡ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು (ಜೂ.19): ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ನೀಡಿದ್ದ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಸಂತೋಷ್ ಲಾಡ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಕ್ಲೈನ್ ವೆಂಕಟೇಶ್ ಸಲ್ಲಿಸಿದ್ದ ದೂರಿನ ತೀರ್ಪು ನೀಡಿದ 42 ಎಸಿಎಂಎಂ ಕೋರ್ಟ್ 7.25 ಕೋಟಿ ರೂಪಾಯಿ ನೀಡುವಂತೆ ಆದೇಶಿಸಿದೆ. 2014ರಲ್ಲಿ ಸಂತೋಷ್ ಲಾಡ್ ವೈಯಕ್ತಿಕ ಸಮಸ್ಯೆಗಾಗಿ 6 ಕೋಟಿ ರೂಪಾಯಿ ಸಾಲವಾಗಿ ಪಡೆದಿದ್ದರು. ಅದಕ್ಕೆ ಸಂತೋಷ್ ಲಾಡ್ ನೀಡಿದ್ದ 6 ಕೋಟಿ ರೂಪಾಯಿ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ರಾಕ್ಲೈನ್ ಸಲ್ಲಿಸಿದ್ದ ದೂರಿನಲ್ಲಿ ಹಲವು ಬಾರಿ ನೋಟಿಸ್ ನೀಡಿದ್ರು, ಸಂತೋಷ್ ಲಾಡ್ ಕೊರ್ಟ್ಗೆ ಹಾಜರಾಗಿರಲಿಲ್ಲ. ಇಂದು ತೀರ್ಪು ನೀಡಿದ ಕೋರ್ಟ್ ಹಣ ನೀಡದಿದ್ದಲ್ಲಿ 6 ತಿಂಗಳು ಸೆರೆವಾಸ ನೀಡುವುದಾಗಿ ಎಚ್ಚರಿಸಿದೆ. ಇದೇ ವೇಳೆ ಸಂತೋಷ್ ಲಾಡ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿ ಕೋರ್ಟ್ ಒಂದು ತಿಂಗಳ ಕಾಲ ಜಾಮೀನು ನೀಡಿದೆ.