Asianet Suvarna News Asianet Suvarna News

ಇನ್ಮುಂದೆ ವೈದ್ಯರು ಜೆನರಿಕ್ ಔಷಧ ಬರೆಯುವುದು ಕಡ್ಡಾಯ

ಆ ಜೆನರಿಕ್ ಔಷಧಿಗಳು ಕೈಗೆಟಕುವ ದರದಲ್ಲಿರಬೇಕೆಂದೂ, ಹಾಗೂ ಅವುಗಳನ್ನು ಸ್ಪಷ್ಟವಾಗಿ ಇಂಗ್ಲಿಷ್ ಭಾಷೆಯ ಕ್ಯಾಪಿಟಲ್ ಅಕ್ಷರಗಳಲ್ಲೇ ಬರೆಯಬೇಕೆಂದು ಮಂಡಳಿ ಸೂಚಿಸಿದೆ.

MCI makes prescription of generic drugs mandatory

ನವದೆಹಲಿ (ಏ.23): ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಕೆಲವು ಹೊಸ ನಿಯಮಗಳನ್ನು ಹೊರಡಿಸಿದ್ದು, ಜೆನರಿಕ್ ಔಷಧಿಗಳನ್ನು ಕಡ್ಡಾಯವಾಗಿ ಬರೆಯುವಂತೆ ವೈದ್ಯರಿಗೆ ಸೂಚಿಸಿದೆ.

ಈ ಕುರಿತು ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಹೊರಡಿಸಿರುವ ಮಂಡಳಿಯು, ಎಲ್ಲಾ ವೈದ್ಯರು ರೋಗಿಗಳಿಗೆ ಔಷಧ-ಚೀಟಿಯಲ್ಲಿ ಅವುಗಳ ಜೆನರಿಕ್ ಹೆಸರನ್ನು ಕಡ್ಡಾಯವಾಗಿ ಬರೆಯಬೇಕೆಂದು ಹೇಳಿದೆ.

ಆ ಜೆನರಿಕ್ ಔಷಧಿಗಳು ಕೈಗೆಟಕುವ ದರದಲ್ಲಿರಬೇಕೆಂದೂ, ಹಾಗೂ ಅವುಗಳನ್ನು ಸ್ಪಷ್ಟವಾಗಿ ಇಂಗ್ಲಿಷ್ ಭಾಷೆಯ ಕ್ಯಾಪಿಟಲ್ ಅಕ್ಷರಗಳಲ್ಲೇ ಬರೆಯಬೇಕೆಂದು ಮಂಡಳಿ ಸೂಚಿಸಿದೆ.

ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಕೂಡಾ ಮಂಡಳಿಯು ಎಚ್ಚರಿಸಿದೆ.

Follow Us:
Download App:
  • android
  • ios