Asianet Suvarna News Asianet Suvarna News

ಕಾಶ್ಮೀರ ಬೇಕಂದ್ರೆ ಬಿಹಾರ ಕೂಡಾ ತಗೊಳ್ಳಿ ಎಂದ ಸುಪ್ರೀಂ ಮಾಜಿ ನ್ಯಾಯಾಧೀಶ

Markandey Katju booked for sedition

ಪಾಟ್ನಾ (ಸೆ. 28): ನಿಮಗೆ ಕಾಶ್ಮೀರವನ್ನು ಬಿಟ್ಟುಕೊಡುತ್ತೇವೆ, ಆದರೆ ಒಂದು ಷರತ್ತು, ಅದರ ಜತೆ ಬಿಹಾರವನ್ನೂ ತೆಗೆದುಕೊಳ್ಳಬೇಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಮಾರ್ಕಂಡೇಯ ಕಾಟ್ಜು ಅವರು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವ ಈ ಪೋಸ್ಟ್ ವಿರುದ್ಧ ಬಿಹಾರ ಜೆಡಿಯು ಶಾಸಕ ಎಫ್ ಐ ಆರ್ ದಾಖಲಿಸಿದ್ದಾರೆ.  ಕಾಟ್ಜು ಅವರ ಈ ಹೇಳಿಕೆ ರಾಜ್ಯ, ದೇಶ ಮತ್ತು ಹೊರ ದೇಶದಲ್ಲಿರುವ ಸುಮಾರು 10.5 ಕೋಟಿ ಬಿಹಾರಿಗರಿಗೆ ನೋವುಂಟು ಮಾಡಿದೆ ಎಂದು ಶಾಸಕ ನೀರಜ್ ಕುಮಾರ್ ತಿಳಿಸಿದ್ದಾರೆ.

ಇದೊಂದು ಪ್ಯಾಕೇಜ್ ಡೀಲ್ ಆಗಿದ್ದು, ಕಾಶ್ಮೀರ ಬೇಕಾದರೇ ಬಿಹಾರವನ್ನು ಜೊತೆಗೆ ತೆಗೆದುಕೊಳ್ಳಬೇಕು; ಕಾಶ್ಮೀರ ಒಂದನ್ನೇ ನೀಡಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಜಸ್ಟಿಸ್ ಕಾಟ್ಜು ಪೋಸ್ಟ್ ಹಾಕಿದ್ದರು.

Follow Us:
Download App:
  • android
  • ios