Asianet Suvarna News Asianet Suvarna News

ವೃದ್ಧೆಯರನ್ನೂ ಬಿಡಲ್ಲ ಈ ವಿಕೃತಕಾಮಿ!: ವೃದ್ಧೆಯರನ್ನು ರೇಪ್ ಮಾಡಿ ಚಿನ್ನಾಭರಣ ದೋಚುವ ಕಾಮುಕ

ಲಿಫ್ಟ್‌ ಕೊಡುವ ನೆಪದಲ್ಲಿ ವೃದ್ಧೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿ ಚಿನ್ನಾಭರಣ ದೋಚುತ್ತಿದ್ದ ವಿಕೃತ ಕಾಮಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

man Who Rapes Old Ladies

ವಿಜಯಪುರ(ಜು.13): ಲಿಫ್ಟ್‌ ಕೊಡುವ ನೆಪದಲ್ಲಿ ವೃದ್ಧೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿ ಚಿನ್ನಾಭರಣ ದೋಚುತ್ತಿದ್ದ ವಿಕೃತ ಕಾಮಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ಅಶೋಕ ನಾಯ್ಕೊಡಿ ಎಂಬಾತ ವೃದ್ಧೆಯರನ್ನೇ ಟಾರ್ಗೆಟ್​ ಮಾಡಿಕೊಂಡು ಇಂಥಾ ಕೃತ್ಯವೆಸಗುತ್ತಿದ್ದ. ಬಸ್‌ ನಿಲ್ದಾಣದ ಸಮೀಪ ವೃದ್ಧೆಯರಿಗೆ ತನ್ನ ಕಾರಿನಲ್ಲಿ ಡ್ರಾಪ್​ ನೀಡುವ ನೆಪದಲ್ಲಿ ವಿಕೃತಿ ಮೆರೆಯುತ್ತಿದ್ದ. ಬಂಧಿತ ಆಶೋಕ್‌  ವಿಜಯಪುರ ‌ನಗರದ ಗಾಂಧಿಚೌಕ, ಜಲನಗರ, ವಿಜಯಪುರ ಜಿಲ್ಲೆಯ ಮನಗೂಳಿ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 25 ಅತ್ಯಾಚಾರ ಹಾಗೂ ದರೋಡೆ ನಡೆಸಿದ್ದಾನೆ.

ಜೂಜಿನ ಹಣಕ್ಕಾಗಿ ಹೀಗೆ ವೃದ್ಧೆಯರನ್ನು ಪೀಡಿಸುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. 

 

Follow Us:
Download App:
  • android
  • ios