Asianet Suvarna News Asianet Suvarna News

ಹೂಡಿಕೆ ಅವಕಾಶದ ರಾಜ್ಯಗಳು: ಕರ್ನಾಟಕದ ಸ್ಥಾನ 9ಕ್ಕೆ ಕುಸಿತ; ಗುಜರಾತ್ ಈಗಲೂ ನಂ.1

ಕಾರ್ಮಿಕ, ಮೂಲಸೌಕರ್ಯ, ಆರ್ಥಿಕ ಪರಿಸ್ಥಿತಿ, ಆಡಳಿತ, ರಾಜಕೀಯ ಸ್ಥಿರತೆ, ರಾಜ್ಯದ ಬಗ್ಗೆ ಇರುವ ಅಭಿಪ್ರಾಯ ಎಂಬ ಆರು ಮುಖ್ಯ ಅಂಶ ಹಾಗೂ 51 ಉಪಸೂಚ್ಯಂಕಗಳನ್ನು ಇಟ್ಟುಕೊಂಡು ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ (ಎನ್‌ಸಿಎಇಆರ್) ಈ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಿದೆ.

list of states with potential investment opportunity karnataka in 9th place

ನವದೆಹಲಿ: ಹೂಡಿಕೆ ಅವಕಾಶಗಳು ಹೆಚ್ಚಿರುವ ದೇಶದ 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ ಕರ್ನಾಟಕ 6ರಿಂದ 9ನೇ ಸ್ಥಾನಕ್ಕೆ ಜಾರಿದೆ. ಆದಾಗ್ಯೂ ಟಾಪ್-10ರಲ್ಲಿ ಸ್ಥಾನ ಉಳಿಸಿಕೊಂಡಿದೆ.

ಕಾರ್ಮಿಕ, ಮೂಲಸೌಕರ್ಯ, ಆರ್ಥಿಕ ಪರಿಸ್ಥಿತಿ, ಆಡಳಿತ, ರಾಜಕೀಯ ಸ್ಥಿರತೆ, ರಾಜ್ಯದ ಬಗ್ಗೆ ಇರುವ ಅಭಿಪ್ರಾಯ ಎಂಬ ಆರು ಮುಖ್ಯ ಅಂಶ ಹಾಗೂ 51 ಉಪಸೂಚ್ಯಂಕಗಳನ್ನು ಇಟ್ಟುಕೊಂಡು ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ (ಎನ್‌ಸಿಎಇಆರ್) ಈ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಿದೆ. ಗುಜರಾತ್ ಪ್ರಥಮ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ದೆಹಲಿ, 3ರಲ್ಲಿ ಆಂಧ್ರಪ್ರದೇಶ ಇದೆ. ನಂತರ ಹರ್ಯಾಣ (4), ತೆಲಂಗಾಣ (5), ತಮಿಳುನಾಡು (6), ಕೇರಳ (7), ಮಹಾರಾಷ್ಟ್ರ (8), ಕರ್ನಾಟಕ (9) ಹಾಗೂ ಮಧ್ಯಪ್ರದೇಶ (10) ಬರುತ್ತವೆ.

2016ರಲ್ಲಿ ಗುಜರಾತ್, ದೆಹಲಿ ಪ್ರಥಮ, ದ್ವಿತೀಯ ಸ್ಥಾನದಲ್ಲೇ ಇದ್ದವು. ಟಾಪ್ 10ರಲ್ಲೂ ಇರದ ಹರ್ಯಾಣ ಹಾಗೂ ತೆಲಂಗಾಣ ಈ ಬಾರಿ 10ರ ಪಟ್ಟಿಯೊಳಕ್ಕೆ ಸೇರ್ಪಡೆಗೊಂಡಿರುವುದರಿಂದ ಕರ್ನಾಟಕದಂತಹ ರಾಜ್ಯಗಳ ರ್ಯಾಂಕಿಂಗ್‌'ನಲ್ಲಿ ಏರುಪೇರಾಗಿದೆ.

ಬಿಹಾರ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಪಟ್ಟಿಯಲ್ಲಿ ಹೂಡಿಕೆ ಅವಕಾಶಗಳು ಹೆಚ್ಚಿರುವ ರಾಜ್ಯಗಳ ಪಟ್ಟಿಯಲ್ಲಿ ಕಳಪೆ ಸಾಧನೆ ತೋರಿವೆ.

ಇದೇ ವೇಳೆ ಭ್ರಷ್ಟಾಚಾರ ಈಗಲೂ ಉದ್ಯಮಿಗಳಿಗೆ ನಂ.1 ಅಡ್ಡಗಾಲಾಗಿದೆ. ಉದ್ಯಮ ಸ್ಥಾಪಿಸಲು ಅನುಮತಿ ಪಡೆಯಲು ಪಡಬೇಕಾದ ಸಾಹಸ ಎರಡನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

epaperkannadaprabha.com

Follow Us:
Download App:
  • android
  • ios