ವೊಡಾಫೋನ್-ಐಡಿಯಾ ವಿಲೀನ: ಹೊಸ ಸಂಸ್ಥೆ ಅಧ್ಯಕ್ಷರಾಗಿ ಕುಮಾರ ಮಂಗಲಂ ಬಿರ್ಲಾ
news
By Suvarna Web Desk | 06:32 PM Monday, 20 March 2017

ಹೊಸ ಸಂಸ್ಥೆಯಲ್ಲಿ ಎರಡೂ ಕಂಪನಿಗಳು ಸಮಾನವಾದ ಪಾಲುಗಳನ್ನು ಹೊಂದಲಿದ್ದು, ಲಂಡನ್ ಮೂಲದ ವೊಡಾಫೋನ್ ಕಂಪನಿಯು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಓ)ಯನ್ನು ನೇಮಿಸಲಿದೆ  ಎಂದು ತಿಳಿದುಬಂದಿದೆ.

ನವದೆಹಲಿ (ಮಾ.20): ಮೊಬೈಲ್ ಸೇವೆ ಒದಗಿಸುತ್ತಿರುವ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ವೊಡಾಫೋನ್ ಹಾಗೂ ಐಡಿಯಾ ಸೆಲ್ಯುಲಾರ್ ಕಂಪನಿಗಳು ವಿಲೀನವಾಗಲಿದ್ದು, ಐಡಿಯಾ ಮಾಲಕ ಹಾಗೂ ಖ್ಯಾತ ಉದ್ಯಮಿಯಾಗಿರುವ ಕುಮಾರ ಮಂಗಲಂ ಬಿರ್ಲಾ ಹೊಸ ಸಂಸ್ಥೆಯ ಅಧ್ಯಕ್ಷರಾಗಲಿದ್ದಾರೆ.

ಹೊಸ ಸಂಸ್ಥೆಯಲ್ಲಿ ಎರಡೂ ಕಂಪನಿಗಳು ಸಮಾನವಾದ ಪಾಲುಗಳನ್ನು ಹೊಂದಲಿದ್ದು, ಲಂಡನ್ ಮೂಲದ ವೊಡಾಫೋನ್ ಕಂಪನಿಯು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಓ)ಯನ್ನು ನೇಮಿಸಲಿದೆ  ಎಂದು ತಿಳಿದುಬಂದಿದೆ.

ತೆರಿಗೆಗೆ ಸಂಬಂಧಿಸಿದಂತೆ ವೊಡಾಫೋನ್ ಕಂಪನಿ ಹಾಗೂ ಸರ್ಕಾರದ ನಡುವೆ ಉಂಟಾಗಿರುವ ವಿವಾದವು ಕಂಪನಿಗಳ ವಿಲೀನಕ್ಕೆ ಯಾವುದೇ ಅಡಚಣೆಯಾಗದೆಂದು  ಅದರ ಸಿಇಓ ವಿಟೊರಿಯೋ ಕೊಲಾವೋ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇವೆರೆಡು ಸಂಸ್ಥೆಗಳು ವಿಲೀನವಾಗಿರುವುದರಿಂದ 40 ಕೋಟಿ ಗ್ರಾಹಕರು 2 ಸಂಸ್ಥೆಗಳಿಗೆ ಚಂದಾದಾರರಾಗುವರು. ಮುಂದಿನ ದಿನಗಳಲ್ಲಿ ಹೊಸ ಸಂಸ್ಥೆಯು ಇನ್ನಷ್ಟು ಉತ್ತಮ ಮೊಬೈಲ್ ಸೇವೆಯನ್ನು ನೀಡುವುದೆಂದು ಕೊಲಾವೋ ಹೇಳಿದ್ದಾರೆ.

Show Full Article