ಕುಲಭೂಷಣ್ ಜಾಧವ್ ಪ್ರಕರಣ: ಐಸಿಜೆಯಲ್ಲಿ ಹೋರಾಡಲು ನೂತನ ವಕೀಲರ ತಂಡ ನೇಮಕ
news
By Suvarna Web Desk | 04:27 PM May 19, 2017

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾದ ಪಾಕಿಸ್ತಾನ ಎಂದಿನಂತೆ ತನ್ನ ಮೊಂಡುತನವನ್ನು ಪ್ರದರ್ಶಿಸಲು ಮುಂದಾಗಿದೆ. ಐಸಿಜೆಯಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ವಿರುದ್ಧ ಪ್ರಬಲವಾಗಿ ಹೋರಾಡಲು ಹೊಸ ವಕೀಲರ ತಂಡವನ್ನು ನೇಮಿಸಲು ಪ್ಲಾನ್ ಮಾಡುತ್ತಿದೆ.

ನವದೆಹಲಿ (ಮೇ.19): ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾದ ಪಾಕಿಸ್ತಾನ ಎಂದಿನಂತೆ ತನ್ನ ಮೊಂಡುತನವನ್ನು ಪ್ರದರ್ಶಿಸಲು ಮುಂದಾಗಿದೆ. ಐಸಿಜೆಯಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ವಿರುದ್ಧ ಪ್ರಬಲವಾಗಿ ಹೋರಾಡಲು ಹೊಸ ವಕೀಲರ ತಂಡವನ್ನು ನೇಮಿಸಲು ಪ್ಲಾನ್ ಮಾಡುತ್ತಿದೆ.

ಜಾಧವ್ ಪ್ರಕರಣದಲ್ಲಿ ವಾದ ಮಾಡಿದ ವಕೀಲರ ತಂಡಕ್ಕೆ ಇಂತಹ ಜಟಿಲವಾದ ವಿಚಾರದ ಬಗ್ಗೆ ಅನುಭವವಿಲ್ಲ. ಹಾಗಾಗಿ ನಾವು ಹೊಸ ತಂಡವನ್ನು ನೇಮಿಸಲಿದ್ದೇವೆ. ಈ ತಂಡವು  ಐಸಿಜೆಯಲ್ಲಿ ಪಾಕಿಸ್ತಾನದ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಲಿದೆ ಎಂದು ಪಾಕ್ ಪ್ರಧಾನ ಮಂತ್ರಿಯ ಸಲಹೆಗಾರ ಸರ್ತಾಜ್ ಆಜಿಜ್ ಹೇಳಿದ್ದಾರೆ.

ಪಾಕಿಸ್ತಾನ ಮಿಲಿಟರಿ ಕೋರ್ಟ್ ಕುಲಭೂಷಣ್ ಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ  ಐಸಿಜೆ ನಿನ್ನೆ ತಡೆ ನೀಡಿತ್ತು. ಇದರಿಂದಾಗಿ ಬಾರೀ ಭರವಸೆ ಇಟ್ಟುಕೊಂಡಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಅಲ್ಲಿನ ಪ್ರತಿಪಕ್ಷಗಳು, ಕಾನೂನು ಪಂಡಿತರು ನವಾಜ್ ಶರೀಫ್ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಹಾಗಾಗಿ ವಾದವನ್ನು ಇನ್ನಷ್ಟು ಪ್ರಬಲಗೊಳಿಸಲು ಹೊಸ ವಕೀಲರ ತಂಡವನ್ನು ನೇಮಿಸಲಿದೆ.   

Show Full Article