Asianet Suvarna News Asianet Suvarna News

12ನೇ ಕ್ಲಾಸಿನ ಬಾಲಕ ಮೇಷ್ಟ್ರಾದ ಕತೆ

ಈ ಅಸಾಮಾನ್ಯನ ಹೆಸರು ಆರ್ಯ ಪುದೋಟ. ವಯಸ್ಸು ಹದಿನೇಳು. ಬೆಂಗಳೂರಿನ ಇಂದಿರಾನಗದಲ್ಲಿರುವ ನ್ಯಾಷನಲ್‌ ಪಬ್ಲಿಕ್‌ ಸ್ಕೂಲಿನಲ್ಲಿ 12ನೇ ಗ್ರೇಡ್‌ನಲ್ಲಿ ಕಲಿಯುತ್ತಿರುವ ಬಾಲಕ ಇವನು. ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದ್ದಾನೆ

KP Navarang Page

ಅವನು ಸಾವಯವ ಕೃಷಿಯಲ್ಲಿ ಪರಿಣತ. ತಮ್ಮ ಮನೆಗೆ ಬೇಕಾದ ಹಣ್ಣು, ತರಕಾರಿಗಳನ್ನು ತಾನೇ ಬೆಳೆಯುತ್ತಾನೆ. ಗಿಡಗಳು ಎಂದರೆ ಅವನಿಗಿಷ್ಟ. ರಾಸಾಯನಿಕವನ್ನು ಬಳಸದೆ ಸಾವಯವ ಕೃಷಿ ಮಾಡುತ್ತಾನೆ. ಅದನ್ನು ನೋಡಿ ಸಾವಿರಾರು ಮಂದಿ ಅವನ ಬಳಿಗೆ ಬಂದು ಹೇಗೆ ಸಾಧ್ಯ ಆಯಿತು ಅಂತ ಕೇಳಿದ್ದಕ್ಕೆ ಯೂಟ್ಯೂಬ್‌ನಲ್ಲಿ ಮೈ ಆರ್ಗಾಯನಿಕ್‌ ಫಾರ್ಮ್ ಎಂಬ ಚಾನೆಲ್‌ ತೆರೆದು ಅದರಲ್ಲಿ ಹತ್ತಾರು ವೀಡಿಯೋ ಅಪ್‌ಲೋಡ್‌ ಮಾಡಿ ಸಾವಿರಾರು ಮಂದಿಗೆ ಸಾವಯವ ಕೃಷಿಯ ರುಚಿ ಹತ್ತಿಸಿದ್ದಾನೆ. 
ಈ ಅಸಾಮಾನ್ಯನ ಹೆಸರು ಆರ್ಯ ಪುದೋಟ. ವಯಸ್ಸು ಹದಿನೇಳು. ಬೆಂಗಳೂರಿನ ಇಂದಿರಾನಗದಲ್ಲಿರುವ ನ್ಯಾಷನಲ್‌ ಪಬ್ಲಿಕ್‌ ಸ್ಕೂಲಿನಲ್ಲಿ 12ನೇ ಗ್ರೇಡ್‌ನಲ್ಲಿ ಕಲಿಯುತ್ತಿರುವ ಬಾಲಕ ಇವನು. ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ ಮಾಡಿದ್ದಾನೆ.
ಅಮ್ಮನಿಂದ ಸಾವಯವ ಕೃಷಿ ರುಚಿ
ಬೆಂಗಳೂರಿನ ಭುವನಗಿರಿಯಲ್ಲಿ ರಾಜು ಪುದೋಟರ ಮನೆ. ರಾಜು ಅವರ ಮಗ ಆರ್ಯ. ಅವರ ಮನೆ ಪಕ್ಕದಲ್ಲಿ ಸ್ವಲ್ಪ ಜಾಗವಿತ್ತು. ಆರ್ಯನ ತಾಯಿ ಅಲ್ಲಿ ಸಾವಯವ ಕೃಷಿ ಮೂಲಕ ತರಕಾರಿ ಬೆಳೆಸುತ್ತಿದ್ದರು. ಆರಂಭದಲ್ಲಿ ಆರ್ಯ ಅಮ್ಮನಿಗೆ ಸಹಾಯ ಮಾಡುತ್ತಿದ್ದ. ಗಿಡಗಳಿಗೆ ನೀರು ಹಾಕುವುದು, ಹೊಸ ಗಿಡ ನೆಡುವುದು ಇತ್ಯಾದಿ. ನಿಧಾನಕ್ಕೆ ಅವನಿಗೆ ಕೃಷಿಯಲ್ಲಿ ಆಸಕ್ತಿ ಬೆಳೆಯಿತು. ಆಮೇಲಾಮೇಲೆ ಅಮ್ಮನಿಗಿಂತ ಅವನೇ ಜಾಸ್ತಿ ಆಸಕ್ತಿ ತೋರಿಸತೊಡಗಿದ. ಗಿಡ ನೆಟ್ಟ. ಅದನ್ನು ಆರೈಕೆ ಮಾಡಿದ. ಹೊಸ ಹೊಸ ಗಿಡಗಳನ್ನು ಪಾಲಿಸಿ ಪೋಷಿಸಿ ಬೆಳೆಸಿದ. ಆ ಕತೆ ಬಂಧು ಬಳಗಕ್ಕೆ, ಸ್ನೇಹಿತರಿಗೆ ಗೊತ್ತಾಯಿತು. ಅವರೆಲ್ಲಾ ಇದು ಹೇಗೆ ಸಾಧ್ಯ ಅಂತ ಕೇಳತೊಡಗಿದರು. ಅದಕ್ಕಾಗಿ ಆರ್ಯ 2014ರಲ್ಲಿ ಯೂಟ್ಯೂಬ್‌ ಚಾನೆಲ್‌ ತೆರೆದು ಅದರಲ್ಲಿ ತಾನು ಹೇಗೆ ತರಕಾರಿ ಬೆಳೆಸುತ್ತೇನೆ ಎಂಬ ವೀಡಿಯೋಗಳನ್ನು ಅಪ್‌ಲೋಡ್‌ ಮಾಡತೊಡಗಿದ. ಈಗಾಗಲೇ ಈ ಚಾನೆಲ್‌ಗೆ ಸಾವಿರಾರು ಮಂದಿ ಚಂದಾದಾರರಿದ್ದಾರೆ. 
ಗಿಡ ಕೊಟ್ಟು ಕೃಷಿ ಪ್ರೇಮಿಗಳನ್ನು ಸೃಷ್ಟಿಸಿದ
ಆರ್ಯ ಮತ್ತೊಂದು ಐಡಿಯಾ ಮಾಡಿದ್ದಾನೆ. ಅವನ ಬಳಿಗೆ ಸಾಕಷ್ಟುಮಂದಿ ಸಾವಯವ ಕೃಷಿಯ ಬಗ್ಗೆ ಮಾಹಿತಿ ಕೇಳಲು ಬರುತ್ತಾರೆ. ಯಾವುದನ್ನು ಹೇಗೆ ಬೆಳೆಸಬಹುದು ಎಂದು ಪ್ರಶ್ನೆ ಕೇಳುತ್ತಿರುತ್ತಾರೆ. ಅವರಿಗೆಲ್ಲಾ ಐಡಿಯಾ ಕೊಟ್ಟರೂ ಅವರಿಗೆ ಸಾವಯವ ಕೃಷಿ ಮಾಡಲು ಬೇಕಾದ ಉಪಕರಣಗಳು, ಪಾಟ್‌ಗಳು ಸಿಗುವುದಿಲ್ಲ. ಹಾಗಾಗಿ ದುಬಾರಿ ಯಾಗುತ್ತದೆ ಅನ್ನೋ ದೂರುಗಳು ಸುಮಾರು ಮಂದಿ ಹೇಳಿದ್ದಾರೆ. ಅವರಿಗೆಲ್ಲಾ ಸಹಾಯ ಆಗಲೆಂದೇ ಆರ್ಯ ಒಂದು ಗ್ರೋಬೇಸಿಕ್‌ ಎಂಬ ಸಾವಯವ ಕೃಷಿಯ ಕಿಟ್‌ ಸಿದ್ಧ ಮಾಡಿದ್ದಾನೆ. ಅದನ್ನು ಬಳಸಿಕೊಂಡು ಪುಟ್ಟಮಕ್ಕಳು ಕೂಡ ಕೃಷಿ ಮಾಡಬಹುದು. ಆ ಕಿಟ್‌ ಪಡೆಯಲು ಮತ್ತು ಸ್ಫೂರ್ತಿಯಾದ ಈ ಪುಟ್ಟಹುಡುಗನಿಗೆ ಥ್ಯಾಂಕ್ಸ್‌ ಹೇಳಲು ಕರೆ ಮಾಡಿ. ಕಿಟ್‌ ಬೇಕಾದರೆ ವಾಟ್ಸಪ್‌ ಮಾಡಿದರೂ ಆದೀತು. ಸಂಜೆ ಫೋನ್‌ ಮಾಡಿದರೆ ಒಳಿತು. ದೂ- 8884642488

(ಕನ್ನಡಪ್ರಭ ವಾರ್ತೆ)

Follow Us:
Download App:
  • android
  • ios