ನಾನು ಪಂಜಾಬ್ ಸಿಎಂ ಆಗುವುದಿಲ್ಲ ; ಕೇಜ್ರಿವಾಲ್
news
By Suvarna Web Desk | 10:09 AM January 11, 2017

ಅರವಿಂದ್ ಕೇಜ್ರಿವಾಲ್ ಪಂಜಾಬ್ ರಾಜಕಾರಣಕ್ಕೆ ತೆರಳಿ, ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ವದಂತಿಯನ್ನು ಸ್ವತಃ  ಕೇಜ್ರಿವಾಲ್ ನಿರಾಕರಿಸಿದ್ದಾರೆ.

ನವದೆಹಲಿ (ಜ.11): ಅರವಿಂದ್ ಕೇಜ್ರಿವಾಲ್ ಪಂಜಾಬ್ ರಾಜಕಾರಣಕ್ಕೆ ತೆರಳಿ, ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ವದಂತಿಯನ್ನು ಸ್ವತಃ  ಕೇಜ್ರಿವಾಲ್ ನಿರಾಕರಿಸಿದ್ದಾರೆ.

ನಾನು ದೆಹಲಿ ಮುಖ್ಯಮಂತ್ರಿಯಾಗಿರುವಾಗ ಪಂಜಾಬ್ ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ? ಪಂಜಾಬಿನ ಸಿಎಂ ಪಂಜಾಬಿನವರೇ ಆಗುತ್ತಾರೆ ಎಂದು ಪಟಿಯಾಲದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ. ಯಾರೇ ಮುಖ್ಯಮಂತ್ರಿಯಾದರೂ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಾರೆ ಎಂದು ವೈಯಕ್ತಿತವಾಗಿ ನಾನು ಭರವಸೆ ನೀಡುತ್ತೇನೆ ಎಂದಿದ್ದಾರೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ನಿನ್ನೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಭಾವಿಸಿ ಫೆ. 4 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಿ ಎಂದು ರ್ಯಾಲಿಯೊಂದರಲ್ಲಿ ಹೇಳಿದ್ದರು.

Show Full Article