Asianet Suvarna News Asianet Suvarna News

ಕೊಹ್ಲಿಯನ್ನು ಜೈಲಿಗೆ ಹಾಕಿ ಎಂದ ಬಾಲಿವುಡ್ ನಟ; 500 ಕೋಟಿ ಕೊಟ್ಟು ಶಾರುಕ್ ಮ್ಯಾಚ್'ಫಿಕ್ಸ್ ಮಾಡಿಸಿದರಾ?

ಸರಣಿ ಟ್ವೀಟ್ ಮಾಡಿದ ಕೆಆರ್'ಕೆ, ವಿರಾಟ್ ಕೊಹ್ಲಿಯನ್ನ ಕ್ರಿಕೆಟ್'ನಿಂದಲೇ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು. ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಉಳಿದವರೆಲ್ಲರೂ ಮ್ಯಾಚ್'ಫಿಕ್ಸರ್'ಗಳಾಗಿದ್ದರು. ಧೋನಿ, ಯುವರಾಜ್, ಕೊಹ್ಲಿ ಅವರು ದೇಶದ 130 ಕೋಟಿ ಜನರಿಗೆ ಮೋಸ ಮಾಡಿದರು. ಬಿಸಿಸಿಐ ಸಂಸ್ಥೆಯೇ ಮ್ಯಾಚ್'ಫಿಕ್ಸಿಂಗ್ ಏಜೆಂಟ್ ಎಂದು ಕಮಾಲ್ ರಷೀದ್ ಖಾನ್ ಆರೋಪಿಸಿದ್ದಾರೆ.

kamaal r khan alleges match fixing

ನವದೆಹಲಿ(ಜೂನ್ 19): ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಮಾಡಿಕೊಂಡು ಬಂದಿದ್ದ ಭಾರತ ನಿನ್ನೆಯ ಫೈನಲ್'ನಲ್ಲಿ ಪಾಕಿಸ್ತಾನ ವಿರುದ್ಧ ಸಂಪೂರ್ಣ ಮುಗ್ಗರಿಸಿತು. ಭಾರತ ತೀರಾ ಹೀನಾಯ ಸೋಲನುಭವಿಸಿತು. ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಧೋನಿ ಆದಿಯಾಗಿ ಪ್ರಮುಖ ಬ್ಯಾಟುಗಾರರು ಫೈನಲ್'ನಲ್ಲಿ ಎಡವಿದರು. ಸೋಷಿಯಲ್ ಮೀಡಿಯಾದಲ್ಲಿ ಜನರು ಬಾಯಿಗೆ ಬಂದಂತೆ ಮಾತನಾಡಿದರು. ಇವರಲ್ಲಿ ಬಾಲಿವುಡ್ ನಟ ಕಮಲ್ ಆರ್.ಖಾನ್ ಅವರಂತೂ ಭಾರತೀಯ ಆಟಗಾರರ ಮೇಲೆ ಮ್ಯಾಚ್'ಫಿಕ್ಸಿಂಗ್ ಆರೋಪವನ್ನೇ ಮಾಡಿದರು.

ಸರಣಿ ಟ್ವೀಟ್ ಮಾಡಿದ ಕೆಆರ್'ಕೆ, ವಿರಾಟ್ ಕೊಹ್ಲಿಯನ್ನ ಕ್ರಿಕೆಟ್'ನಿಂದಲೇ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು. ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಉಳಿದವರೆಲ್ಲರೂ ಮ್ಯಾಚ್'ಫಿಕ್ಸರ್'ಗಳಾಗಿದ್ದರು. ಧೋನಿ, ಯುವರಾಜ್, ಕೊಹ್ಲಿ ಅವರು ದೇಶದ 130 ಕೋಟಿ ಜನರಿಗೆ ಮೋಸ ಮಾಡಿದರು. ಬಿಸಿಸಿಐ ಸಂಸ್ಥೆಯೇ ಮ್ಯಾಚ್'ಫಿಕ್ಸಿಂಗ್ ಏಜೆಂಟ್ ಎಂದು ಕಮಾಲ್ ರಷೀದ್ ಖಾನ್ ಆರೋಪಿಸಿದ್ದಾರೆ.

"ವಿರಾಟ್ ಕೊಹ್ಲಿಯವರೇ, ನಿಮ್ಮ ಕ್ಯಾಚ್'ನ್ನು ಡ್ರಾಪ್ ಮಾಡಲಾಯಿತು. ಆದರೆ, ಮುಂದಿನ ಬಾಲ್'ನಲ್ಲಿ ಸುಲಭ ಕ್ಯಾಚು ನೀಡಿಬಿಟ್ಟಿರಿ. ಫಿಕ್ಸಿಂಗ್ ನಡೆದಿರುವುದು ಸ್ಪಷ್ಟಗೊಂಡು ಸಿಕ್ಕಿಬೀಳುವ ಸ್ವಲ್ಪವೂ ಭಯ ನಿಮಗಿರಲಿಲ್ಲ," ಎಂದು ಕೆಆರ್'ಕೆ ಟ್ವೀಟ್ ಮಾಡಿದ್ದಾರೆ.

ಭಾರತದ 130 ಕೋಟಿ ಜನರ ಮಾನವನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಿದ ಕೊಹ್ಲಿಯನ್ನು ಜೀವಿತಾವಧಿಯಲ್ಲಿ ಕ್ರಿಕೆಟ್ ಆಡದಂತೆ ನಿಷೇಧಿಸಬೇಕು. ಅವರನ್ನು ಜೈಲಿಗೆ ಹಾಕಬೇಕು ಎಂದು ಕಮಾಲ್ ಖಾನ್ ಆಗ್ರಹಿಸಿದ್ದಾರೆ.

ಶಾರುಕ್ ಖಾನ್ ಮ್ಯಾಚ್'ಫಿಕ್ಸಿಂಗ್?
ಪಾಕಿಸ್ತಾನ ವಿರುದ್ಧ ಭಾರತ ಸೋಲುವಂತೆ ಬಿಸಿಸಿಐ ಮ್ಯಾಚ್'ಫಿಕ್ಸ್ ಮಾಡಿಸಿತ್ತು ಎಂಬುದು ಕಮಾಲ್ ಖಾನ್'ರ ಪ್ರಮುಖ ಆರೋಪ. ಜೊತೆಗೆ, ಶಾರುಕ್ ಖಾನ್ ಕೂಡ ಈ ಮ್ಯಾಚ್'ಫಿಕ್ಸಿಂಗ್'ನಲ್ಲಿ ಭಾಗಿಯಾಗಿದ್ದಾರೆಂಬುದು ಕೆಆರ್'ಕೆಯ ಶಂಕೆ. ಫೈನಲ್ ಪಂದ್ಯ ಸೋಲಲು ಟೀಮ್ ಇಂಡಿಯಾಗೆ 500 ಕೋಟಿ ರೂ ಕೊಡಲಾಗಿತ್ತು ಎಂದು ಕಮಾಲ್ ಖಾನ್ ಪರೋಕ್ಷವಾಗಿ ಆರೋಪಿಸಿದ್ದಾರೆ.

"ಭಾರತ ತಂಡದ ಮೇಲೆ ಜನರು 2 ಸಾವಿರ ಕೋಟಿ ರೂನಷ್ಟು ಬೆಟ್ಟಿಂಗ್ ಕಟ್ಟಿದ್ದರು. ಇದರಲ್ಲಿ 500 ಕೋಟಿ ರೂಪಾಯಿಗೆ ಟೀಮ್ ಇಂಡಿಯಾವನ್ನು ಫಿಕ್ಸ್ ಮಾಡಲು 'ಬಾಸ್'ಗೆ ಯಾವ ಸಮಸ್ಯೆಯೂ ಆಗಲಿಲ್ಲ,

"ಕಾಮೆಂಟರಿ ಮಾಡುವ ವೇಳೆ, ಪಾಂಡ್ಯ ಇವತ್ತು ಚೆನ್ನಾಗಿ ಆಡುತ್ತಾರೆ ಎಂದು ಎಸ್'ಆರ್'ಕೆ ಹೇಳಿದ್ದರು. ಇದು ಅವರಿಗೆ ಹೇಗೆ ಗೊತ್ತಿತ್ತು?" ಎಂದು ಕಮಾಲ್ ರಷೀದ್ ಖಾನ್ ಪ್ರಶ್ನಿಸಿದ್ದಾರೆ.

ಪಾಂಡ್ಯ ಬಗ್ಗೆ...
ಪಾಂಡ್ಯರ ಇನ್ನಿಂಗ್ಸ್ ಬಗ್ಗೆ ಮಾತನಾಡಿದ ಕೆಆರ್'ಕೆ, ಪಾಂಡ್ಯರಿಗೆ ಮ್ಯಾಚ್ ಗೆಲ್ಲಿಸುವ ಹುಮ್ಮಸಿತ್ತು. ಆದರೆ, ಉಳಿದವರು ಮ್ಯಾಚ್ ಫಿಕ್ಸಿಂಗ್ ಜಾಲಕ್ಕೆ ಸಿಲುಕಿದ್ದರು ಎಂದವರು ಅಭಿಪ್ರಾಯಪಟ್ಟಿದ್ದಾರೆ.

"ಫಿಕ್ಸಿಂಗ್ ಬಗ್ಗೆ ಪಾಂಡ್ಯಗೆ ಮಾತ್ರ ಏನೂ ಗೊತ್ತಿರಲಿಲ್ಲ. ಹೀಗಾಗಿ ಅವರು ಗೆಲುವಿಗಾಗಿ ಪ್ರಯತ್ನಿಸುತ್ತಿದ್ದರು. ಆದರೆ, ಫಿಕ್ಸರ್ ಜಡೇಜಾ ಪಾಂಡ್ಯರನ್ನು ರನ್ನೌಟ್ ಮಾಡಿ ಸೋಲನ್ನು ಖಾತ್ರಿಗೊಳಿಸಿದರು," ಎಂದು ಬಾಲಿವುಡ್ ನಟ ಹೇಳಿದ್ದಾರೆ.

ಮೋದಿಗೆ ಲಿಂಕ್:
ಪಂದ್ಯವನ್ನು ಫಿಕ್ಸ್ ಮಾಡಲಾಗಿದ್ದನ್ನು ಒಪ್ಪಿಕೊಳ್ತೀರಾ ಎಂದು ಕಮಾಲ್ ಆರ್.ಖಾನ್ ತಮ್ಮ ಟ್ವಿಟ್ಟರ್'ನಲ್ಲಿ ಅಭಿಪ್ರಾಯ ಕೇಳಿದಾಗ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಪೋಲ್'ನಲ್ಲಿ ಭಾಗವಹಿಸಿದ್ದರು. ಇವರಲ್ಲಿ ಶೇ.44ರಷ್ಟು ಜನರು ಬಾಲಿವುಡ್ ನಟನ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು. ಇದನ್ನು ಪ್ರಸ್ತಾಪಿಸಿದ ಕಮಾಲ್ ಖಾನ್, ತಮ್ಮ ಅಭಿಪ್ರಾಯ ಒಪ್ಪದ ಶೇ.55ರಷ್ಟು ಜನರು ಮೋದಿ ಬೆಂಬಲಿಗರು ಎಂದು ಹೇಳುವ ಮೂಲಕ ಪ್ರಧಾನಿಗೆ ಟಾಂಗ್ ಕೊಟ್ಟಿದ್ದಾರೆ.

ಟ್ರೋಲ್ ಮಾಡಿದ ಪಾಕಿಸ್ತಾನೀಯರು:
ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಮತ್ತು ಧೋನಿಯನ್ನು ಮ್ಯಾಚ್'ಫಿಕ್ಸರ್'ಗಳೆಂದು ಟೀಕಿಸಿದ ಕಮಾಲ್ ಆರ್.ಖಾನ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಟ್ರೋಲ್ ಆಗಿದೆ. ಕಮಾಲ್ ಖಾನ್'ಗೆ ಕ್ರೀಡಾಸ್ಫೂರ್ತಿಯೇ ಇಲ್ಲ ಎಂದು ಹಲವರು ಟೀಕಿಸಿದ್ದಾರೆ. ಒಂದು ಪಂದ್ಯದಲ್ಲಿ ಕೆಟ್ಟದಾಗಿ ಆಡಿದಾಕ್ಷಣ ಕೊಹ್ಲಿಯ ಹಿಂದಿನ ಸಾಧನೆಗಳನ್ನೆಲ್ಲಾ ಮೂಲೆಗೆ ಬಿಸಾಕುತ್ತೀರಲ್ಲಾ ಇದು ಸರಿಯಾ? ಎಂದು ಅನೇಕ ಪಾಕಿಸ್ತಾನೀಯರು ಟ್ವೀಟ್ ಮಾಡಿದ್ದಾರೆ. ನಿಮ್ಮ ತಂಡವು ಫೈನಲ್'ಗೇರಿದೆ. ಸೋಲು ಸ್ವೀಕರಿಸುವುದನ್ನು ಕಲಿಯಿತು. ಇದು ಆಟದ ಒಂದು ಭಾಗ ಎಂದು ಹಲವರು ತಿಳಿಹೇಳಿದ್ದಾರೆ. ನಾವು ಪಾಕಿಸ್ತಾನೀಯರಾಗಿದ್ದರೂ ಕೊಹ್ಲಿ, ಧೋನಿ ಆಟ ಅಂದ್ರೆ ತುಂಬಾ ಇಷ್ಟ ಎಂದು ಕೆಲವರು ಹೇಳಿದ್ದಾರೆ.

Follow Us:
Download App:
  • android
  • ios