Asianet Suvarna News Asianet Suvarna News

(ವಿಡಿಯೋ)ಉತ್ತರಪ್ರದೇಶದಲ್ಲಿ ರಾಮಾಯಣದ ಜಟಾಯು ಪಕ್ಷಿ ಸೆರೆಯಾಗಿದೆಯಂತೆ! ವೈರಲ್ ಆಯಿತು ಈ ಸುದ್ದಿ

ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ, ರಾವಣನ ವಿರುದ್ಧ ಹೋರಾಡಿ ಮಡಿದ ಜಟಾಯು ಹಕ್ಕಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗಲೂ ಈ ಜೀವಸಂಕುಲ ಜೀವಂತವಾಗಿದೆ. ಉದ್ದನೆಯ ಕೊಕ್ಕು, ವಿಶಾಲವಾದ ರೆಕ್ಕೆಗಳಿರುವ ಈ ಹಕ್ಕಿಯನ್ನು ಉತ್ತರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಸುದ್ದಿಯೊಂದು ಆನ್ ಲೈನ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Jatayu Found in Muradabad Uttarpradesh Viral News

ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ, ರಾವಣನ ವಿರುದ್ಧ ಹೋರಾಡಿ ಮಡಿದ ಜಟಾಯು ಹಕ್ಕಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗಲೂ ಈ ಜೀವಸಂಕುಲ ಜೀವಂತವಾಗಿದೆ. ಉದ್ದನೆಯ ಕೊಕ್ಕು, ವಿಶಾಲವಾದ ರೆಕ್ಕೆಗಳಿರುವ ಈ ಹಕ್ಕಿಯನ್ನು ಉತ್ತರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಸುದ್ದಿಯೊಂದು ಆನ್ ಲೈನ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಉತ್ತರ ಪ್ರದೇಶದ ಮುರಾದಾಬಾದ್‌ನಲ್ಲಿ ಜಟಾಯು ಜಾತಿಯ ಹಕ್ಕಿಯೊಂದು ನೀರಿನಲ್ಲಿ ಮುಳುಗಿದಾಗ ಸಿಕ್ಕಿದೆ. ಅದನ್ನು ಮುಸ್ಲಿಂ ಕುಟುಂಬವೊಂದು ಸೆರೆಯಲ್ಲಿ ಇಟ್ಟುಕೊಂಡಿದೆ. ಹಕ್ಕಿಯ ಕಾಲಿಗೆ ಸರಪಳಿ ಕಟ್ಟಲಾಗಿದೆ. ಜಟಾಯು ಪಕ್ಷಿಯನ್ನು ರಕ್ಷಿಸಲು ವಿಡಿಯೋವನ್ನು ತಪ್ಪದೇ ಶೇರ್ ಮಾಡಿ. ಜಟಾಯು ಪಕ್ಷಿಯ ಬಗ್ಗೆ ರಾಮಾಯಣದಲ್ಲಿ ಕೇಳಿದ್ದೀರಿ. ಈಗ ಅದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಸಿಕ್ಕಿದೆ. ಹೀಗಾಗಿ ಈ ಪಕ್ಷಿಯನ್ನು ಹೇಗಾದರೂ ಮಾಡಿ ರಕ್ಷಿಸಬೇಕಿದೆ ಎಂದ ಸಂದೇಶ

ಜಾಲತಾಣಗಳಲ್ಲಿ ಕೆಳೆದ ಕೆಲ ದಿನಗಳಿಂದ ವೈರಲ್ ಆಗಿದೆ. ಜನರಿಗೂ ಈ ಬಗ್ಗೆ ನಂಬಿಕೆ ಬರುತ್ತಿಲ್ಲ. ಈ ಪಕ್ಷಿ ನಿಜವಾಗಿಯೂ ರಾಮಾಯಣದ ಜಟಾಯುವೇ? ಅದು ಸೆರೆ ಸಿಕ್ಕಿದ್ದು ಹೇಗೆ ಎಂಬುದರ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಜಟಾಯುವನ್ನು ಬಂಧಿಸಲಾಗಿದೆ ಎನ್ನಲಾದ ಮುರಾದಾಬಾದ್‌ನ ಬೆನ್ಸಿಯಾ ಗ್ರಾಮಕ್ಕೆ ಮಾಧ್ಯಮ ತಂಡವೊಂದು ತೆರಳಿದಾಗ ನಿಜ ಸಂಗತಿ ಬಯಲಾಗಿದೆ.

ವಿಡಿಯೋದಲ್ಲಿ ಕಾಣುತ್ತಿರುವ ಪಕ್ಷಿ ಜಟಾಯು ಅಲ್ಲ. ಅದು ಗಿದ್ ಎಂಬ ಹದ್ದಿನ ಜಾತಿಯ ಪಕ್ಷಿಯಾಗಿದೆ. 2011ರಲ್ಲಿ ರೈಲ್ವೆ ಹಳಿಯೊಂದರ ಪಕ್ಕ ಗಾಯಗೊಂಡು ನೀರಿನಲ್ಲಿ ಬಿದ್ದಿದ್ದ ಈ ಹಕ್ಕಿಯನ್ನು ಮುಫಿಜುರ್ ರೆಹಮಾನ್ ಎಂಬಾತನ ಪುತ್ರ ಮನೆಗೆ ತಂದು ಬಂಧಿಸಿಟ್ಟಿದ್ದ. ವೈರಲ್ ಆಗಿರುವ ಈ ವಿಡಿಯೋ ಆ ಸಮಯದ್ದಾಗಿದೆ. ಹೀಗಾಗಿ ಅದು ಜಟಾಯು ಎಂಬುದು ಸುಳ್ಳು ಎಂಬುದು ಸಾಬೀತಾಗಿದೆ.

(ಕನ್ನಡಪ್ರಭ ವೈರಲ್'ಚೆಕ್ ಕಾಲಂ)

Follow Us:
Download App:
  • android
  • ios