Asianet Suvarna News Asianet Suvarna News

ಕಾಶ್ಮೀರದಲ್ಲಿ ನೆಲೆಯೂರಲು ಐಸಿಸ್'ನಿಂದ ಈ ಹೊಸ ಕಾರ್ಯತಂತ್ರ!

ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ಜಮ್ಮು-ಕಾಶ್ಮೀರಕ್ಕೆ ಲಗ್ಗೆ ಇಡಲು ಯತ್ನಿಸುತ್ತಿದ್ದಾರೆ ಎಂಬ ಆತಂಕದ ವಿಷಯ ಹೊರಬಿದ್ದಿದೆ. ಐಸಿಸ್‌ಗೆ ಉತ್ತೇಜನ ನೀಡಲು ‘ಅನ್ಸರುಲ್ ಖಲೀಫಾ-ಜಮ್ಮು ಕಾಶ್ಮೀರ್’ (ಖಲೀಫಾ ಸಾಮ್ರಾಜ್ಯದ ಯೋಧರು) ಎಂಬ ಸಂಘಟನೆಯನ್ನು ಸ್ಥಾಪಿಸಲಾಗಿದ್ದು, ಸದ್ಯದ ಮಟ್ಟಿಗೆ ಇದು ವಾಟ್ಸಪ್ ರೀತಿಯ ಮೊಬೈಲ್ ಸಾಮಾಜಿಕ ಮಾಧ್ಯಮವಾದ ‘ಟೆಲಿಗ್ರಾಂ’ ಮೂಲಕ ಸಕ್ರಿಯವಾಗಿದೆ.

ISISNew Plan From Isis To Take Authority On Kashmir

ನವದೆಹಲಿ(ಜು.19): ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ಜಮ್ಮು-ಕಾಶ್ಮೀರಕ್ಕೆ ಲಗ್ಗೆ ಇಡಲು ಯತ್ನಿಸುತ್ತಿದ್ದಾರೆ ಎಂಬ ಆತಂಕದ ವಿಷಯ ಹೊರಬಿದ್ದಿದೆ. ಐಸಿಸ್‌ಗೆ ಉತ್ತೇಜನ ನೀಡಲು ‘ಅನ್ಸರುಲ್ ಖಲೀಫಾ-ಜಮ್ಮು ಕಾಶ್ಮೀರ್’ (ಖಲೀಫಾ ಸಾಮ್ರಾಜ್ಯದ ಯೋಧರು) ಎಂಬ ಸಂಘಟನೆಯನ್ನು ಸ್ಥಾಪಿಸಲಾಗಿದ್ದು, ಸದ್ಯದ ಮಟ್ಟಿಗೆ ಇದು ವಾಟ್ಸಪ್ ರೀತಿಯ ಮೊಬೈಲ್ ಸಾಮಾಜಿಕ ಮಾಧ್ಯಮವಾದ ‘ಟೆಲಿಗ್ರಾಂ’ ಮೂಲಕ ಸಕ್ರಿಯವಾಗಿದೆ.

ಇಸ್ಲಾಮಿಕ್ ಸ್ಟೇಟ್‌'ನ ತತ್ವಗಳನ್ನು ಇದರ ಮೂಲಕ ಹರಿಬಿಡಲಾಗುತ್ತಿದೆ. ಕಳೆದ ಜೂನ್ ೨ರಂದು ಆರಂ‘ವಾದ ಈ ಗ್ರೂಪ್‌ನಲ್ಲಿ ೧೦೦ಕ್ಕೂ ಹೆಚ್ಚು ಸದಸ್ಯರಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಸಂದೇಶವೊಂದರಲ್ಲಿ ಜಮ್ಮು-ಕಾಶ್ಮೀರದ ಮುಸ್ಲಿಂ ಪೊಲೀಸರಿಗೆ ಮನವಿಯೊಂದನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ ‘ಎಲ್ಲ ಮುಸ್ಲಿಂ ಪೊಲೀಸರು ನಿಮ್ಮ ಮೇಲಧಿಕಾರಿಗಳ ಆದೇಶ ಧಿಕ್ಕರಿಸಬೇಕು. ಮುಸ್ಲಿಂ ಹಾಗೂ ಇಸ್ಲಾಂ ವಿರೋಧಿಗಳತ್ತ ನಿಮ್ಮ ಗನ್ ಚಲಾಯಿಸಬೇಕು’ ಎಂದು ಮನವಿ ಮಾಡಲಾಗಿದೆ.

Follow Us:
Download App:
  • android
  • ios