Asianet Suvarna News Asianet Suvarna News

ಶತ್ರುಗಳ ಕ್ಷಿಪಣಿ ಹೊಡೆದುರಳಿಸುವ ಛೇದಕ ಕ್ಷಿಪಣಿ ಪರೀಕ್ಷೆ ಯಶಸ್ವಿ

ಒಡಿಶಾದ ಅಬ್ದುಲ್ ಕಲಾಂ ದ್ವೀಪದಲ್ಲಿ ಬೆಳಗ್ಗೆ 7.45ಕ್ಕೆ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಪರೀಕ್ಷೆ ಸಲುವಾಗಿಯೇ ಬಂಗಾಳ ಕೊಲ್ಲಿಯಲ್ಲಿ ನಿಲುಗಡೆ ಮಾಡಲಾಗಿದ್ದ ನೌಕೆಯೊಂದರಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು.

Interceptor missile successfully test fired from Balasore

ಬಾಲಸೋರ್ (ಒಡಿಶಾ)(ಫೆ.11): ದೇಶದ ಮೇಲೆ ದಾಳಿ ನಡೆಸಲು ಶತ್ರು ಪಾಳೆಯದಿಂದ ನುಗ್ಗಿ ಬರುವ ಕ್ಷಿಪಣಿಗಳನ್ನು ಆಗಸದಲ್ಲೇ ಹೊಡೆದುರುಳಿಸಬಲ್ಲ ಛೇದಕ ಕ್ಷಿಪಣಿಯೊಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಎ) ಶನಿವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಅತ್ಯಂತ ಎತ್ತರ ಹಾಗೂ ತೀರಾ ಕೆಳಹಂತದಲ್ಲಿ ಒಳಬರುವ ಕ್ಷಿಪಣಿಗಳನ್ನು ಹೊಡೆದುರುಳಿಸುವ ನಿಟ್ಟಿನಲ್ಲಿ ಈ ಯಶಸ್ಸು ಮಹತ್ವದ್ದಾಗಿದೆ.

ಒಡಿಶಾದ ಅಬ್ದುಲ್ ಕಲಾಂ ದ್ವೀಪದಲ್ಲಿ ಬೆಳಗ್ಗೆ 7.45ಕ್ಕೆ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಈ ಪರೀಕ್ಷೆ ಸಲುವಾಗಿಯೇ ಬಂಗಾಳ ಕೊಲ್ಲಿಯಲ್ಲಿ ನಿಲುಗಡೆ ಮಾಡಲಾಗಿದ್ದ ನೌಕೆಯೊಂದರಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. 2000 ಕಿ.ಮೀ. ದೂರದಿಂದ ಬಂದ ಕ್ಷಿಪಣಿಯನ್ನು ಅತ್ಯಂತ ಕರಾರುವಾಕ್ಕಾಗಿ ರಾಡಾರ್‌ಗಳು ಪತ್ತೆ ಹಚ್ಚಿದವು. ಭೂ ವಾತಾವರಣದಿಂದ 50 ಕಿ.ಮೀ. ಎತ್ತರದಲ್ಲಿ ಅದನ್ನು ಛೇದಕ ಕ್ಷಿಪಣಿ ಹೊಡೆದುರುಳಿಸಿತು. ಈ ಕ್ಷಿಪಣಿಗೆ ಪಿಡಿವಿ ಎಂದು ಕರೆಯಲಾಗಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios