Asianet Suvarna News Asianet Suvarna News

ಸೋಮಾರಿ ದೇಶಗಳ ಪಟ್ಟಿಯಲ್ಲಿ ಭಾರತ!

ಸ್ಟಾನ್’ಫೋರ್ಡ್ ವಿವಿಯು ನಡೆಸಿದ ಅಧ್ಯಯನವೊಂದರಲ್ಲಿ ಭಾರತವು ಸೋಮಾರಿಗಳ ದೇಶದ ಪಟ್ಟಿಯಲ್ಲಿ ಸೇರಿದೆ. ಜನರು ಪ್ರತಿದಿನ ಎಷ್ಟು ನಡೆಯುತ್ತಾರೆ ಎಂಬುವುದರ ಅಧಾರದ ಮೇಲೆ ನಡೆಸಲಾದ ಅಧ್ಯಯನದಲ್ಲಿ 46 ದೇಶಗಳ ಪೈಕಿ ಭಾರತವು 39ನೇ ಸ್ಥಾನ ಪಡೆದುಕೊಂಡಿದೆ. 

Indians among worlds laziest

ಸ್ಟಾನ್’ಫೋರ್ಡ್ ವಿವಿಯು ನಡೆಸಿದ ಅಧ್ಯಯನವೊಂದರಲ್ಲಿ ಭಾರತವು ಸೋಮಾರಿಗಳ ದೇಶದ ಪಟ್ಟಿಯಲ್ಲಿ ಸೇರಿದೆ. ಜನರು ಪ್ರತಿದಿನ ಎಷ್ಟು ನಡೆಯುತ್ತಾರೆ ಎಂಬುವುದರ ಅಧಾರದ ಮೇಲೆ ನಡೆಸಲಾದ ಅಧ್ಯಯನದಲ್ಲಿ 46 ದೇಶಗಳ ಪೈಕಿ ಭಾರತವು 39ನೇ ಸ್ಥಾನ ಪಡೆದುಕೊಂಡಿದೆ. 

ಭಾರತೀಯರು ಪ್ರತಿದಿನ ಸರಾಸರಿ 4297 ಹೆಜ್ಜೆಗಳನ್ನು ಹಾಕುತ್ತಾರೆ ಎಂದು ಜರ್ನಲ್ ನೇಚರ್’ನಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ. ಸ್ಮಾರ್ಟ್ ಫೋನ್’ನಲ್ಲಿ ಹೆಜ್ಜೆ-ಲೆಕ್ಕ ಹಾಕುವ ಸಾಫ್ಟ್ವೇರ್ ಇನ್ಸ್ಟಾಲ್ ಮಾಡುವ ಮೂಲಕ  46 ದೇಶಗಳ ಸುಮಾರು 7 ಲಕ್ಷ ಮಂದಿಯ ನಡೆಯುವ ವಿವರಗಳನ್ನು ಕಲೆಹಾಕಲಾಗಿತ್ತು.

ಪ್ರತಿದಿನ ಸರಾಸರಿ 6880 ಹೆಜ್ಜೆಗಳನ್ನು ಹಾಕುವ ಚೀನಾ ದೇಶವು ಅತೀ ಕಡಿಮೆ ಆಲಸಿ ಎಂದು ವರದಿ ಹೇಳಿದೆ.  ವರದಿಯ ಪ್ರಕಾರ ಇಂಡೋನೇಶಿಯಾ ಅತೀ ಹೆಚ್ಚು ಸೋಮಾರಿ ದೇಶವಾಗಿದೆ. ಅಲ್ಲಿಯ ಸರಾಸರಿ ಹೆಜ್ಜೆಯ ಸಂಖ್ಯೆ 3513 ಆಗಿದೆ.

ಜಾಗತಿಕ ಸರಾಸರಿ ಹೆಜ್ಜೆ 4967 ಆಗಿದ್ದು, ಅಮೆರಿಕನ್ನರು  ಸರಾಸರಿ 4774 ಹೆಜ್ಜೆಗಳನ್ನು ಹಾಕುತ್ತಾರೆಂದು ವರದಿ ಹೇಳಿದೆ. 6000ಕ್ಕಿಂತ ಹೆಜ್ಜೆ ಹಾಕುವ ದೇಶಗಳ ಪಟ್ಟಿಯಲ್ಲಿ ಹಾಂಕಾಂಗ್, ಚೀನಾ, ಜಪಾನ್ , ಹಾಗೂ ಉಕ್ರೇನ್’ಗಳಿವೆ. ಹಾಗೂ 3900 ಹೆಜ್ಜೆಗಳಿಗಿಂತಲೂ ಕಡಿಮೆ ನಡೆಯುವ ದೇಶಗಳ ಸಾಲಿನಲ್ಲಿ ಇಂಡೋನೇಶಿಯಾ, ಮಲೇಶಿಯಾ ಹಾಗೂ ಸೌದಿ ಅರೇಬಿಯಾ ಸೇರಿವೆ.

ಮಹಿಳೆಯರು ನಡೆಯುವುದು ಕಡಿಮೆ!

ವರದಿಯ ಪ್ರಕಾರ ಭಾರತೀಯ ಮಹಿಳೆಯರು ಪುರುಷರಿಗಿಂತ ಕಡಿಮೆ ನಡೆಯುತ್ತಾರೆ. ಮಹಿಳೆಯರು 3684 ಹೆಜ್ಜೆಗಳನ್ನು ಹಾಕಿದರೆ, ಪುರುಷರು ಪ್ರತಿದಿನ ಸರಾಸರಿ 4606 ಹೆಜ್ಜೆಗಳನ್ನು ಹಾಕುತ್ತಾರೆ.

ಆರೋಗ್ಯದ ಮೇಲೂ ಪರಿಣಾಮ:

ಹೆಚ್ಚು ನಡೆಯುವವರಲ್ಲಿ ಸ್ಥೂಲಕಾಯತೆ ಕೂಡಾ ಕಡಿಮೆ ಪ್ರಮಾಣದಲ್ಲಿರುವುದು ಕಂಡುಬಂದಿದೆಯೆಂದು ವರದಿಯು ಹೇಳಿದೆ.

Follow Us:
Download App:
  • android
  • ios