Asianet Suvarna News Asianet Suvarna News

ಅಬ್ಬಾ...! ಪ್ರವೇಶ ಪರೀಕ್ಷೆ ಪತ್ರಿಕೆಯಲ್ಲಿ ಅರೆನಗ್ನ ಫೋಟೊ!

ಆ ಪರೀಕ್ಷೆ ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಪಾಸ್‌‍ಪೋರ್ಟ್  ಫೋಟೊ ಬದಲಿಗೆ ನಟಿಯೊಬ್ಬಳ ಅರೆ ನಗ್ನ ಫೋಟೊ ಅಚ್ಚಾಗಿದ್ದು ರಾಷ್ಟ್ರವ್ಯಾಪ್ತಿ ಸುದ್ದಿಯಾಗಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರೂರಾದ ನಲಂದಾದಲ್ಲಿಯೇ ಈ ಎಡವಟ್ಟು ನಡೆದಿದೆ.

ihar SSC puts topless actress photo on admit card of a girl

ಪಾಟ್ನಾ(ಜ.15): ಬಿಹಾರ ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆ ಬರೆಯಲಿದ್ದ ಮಹಿಳಾ ಪರೀಕ್ಷಾರ್ಥಿಗೆ ಪರೀಕ್ಷೆ ಪ್ರವೇಶ ಪತ್ರ ಕೈ ಸೇರಿದಾಗ ಮುಜುಗರಕ್ಕೀಡಾದ ಘಟನೆ ಬೆಳಕಿಗೆ ಬಂದಿದೆ.

ಆ ಪರೀಕ್ಷೆ ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಪಾಸ್‌‍ಪೋರ್ಟ್  ಫೋಟೊ ಬದಲಿಗೆ ನಟಿಯೊಬ್ಬಳ ಅರೆ ನಗ್ನ ಫೋಟೊ ಅಚ್ಚಾಗಿದ್ದು ರಾಷ್ಟ್ರವ್ಯಾಪ್ತಿ ಸುದ್ದಿಯಾಗಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ತವರೂರಾದ ನಲಂದಾದಲ್ಲಿಯೇ ಈ ಎಡವಟ್ಟು ನಡೆದಿದೆ.

ಪ್ರವೇಶಪತ್ರದಲ್ಲಿ ಬಿಹಾರದ ನಟಿಯೊಬ್ಬಳ ಅರೆ ನಗ್ನ ಫೋಟೊ ಪ್ರಕಟವಾಗಿದ್ದ ವಿಷಯ ಸಾಮಾಜಿಕ ತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದು ಪರೀಕ್ಷಾರ್ಥಿಯನ್ನು ಇನ್ನಷ್ಟು ಮುಜುಗರಕ್ಕೀಡಾಗುವಂತೆ ಮಾಡಿದೆ. ಪ್ರಕರಣದ ಬಗ್ಗೆ  ತನಿಖೆ ನಡೆಸಲಾಗುವುದೆಂದು ಬಿಎಸ್‍ಎಸ್‍ಸಿ ಕಾರ್ಯದರ್ಶಿ  ಹೇಳಿದ್ದಾರೆ.

Follow Us:
Download App:
  • android
  • ios