ನಾದಿನಿ ಮೇಲೆ ಕಣ್ಣಿಟ್ಟ ಪಾಖಂಡಿ ಗಂಡ ಹಾವು ಕಚ್ಚಿಸಿ ಪತ್ನಿಯನ್ನು ಕೊಂದ!
news
By Suvarna Web Desk | 01:31 PM Friday, 17 February 2017

ಪ್ರೇಮಿಗಳ ದಿನದಂದು ಹಾವು ಖರೀದಿಸಿ, ಹೆಂಡತಿಯನ್ನು ಕೊಂದ ಪಾಖಂಡಿ ಗಂಡ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬಾಗಲಕೋಟೆ (ಫೆ. 17): ಪ್ರೇಮಿಗಳ ದಿನದಂದು ಹಾವು ಖರೀದಿಸಿ, ಹೆಂಡತಿಯನ್ನು ಕೊಂದ ಪಾಖಂಡಿ ಗಂಡ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬಾಗಲಕೋಟೆ ಚಿಚಖಂಡಿ ಗ್ರಾಮದಲ್ಲಿ ಈ ವಿಚಿತ್ರ ಕೊಲೆ ಪ್ರಕರಣ ನಡೆದಿದೆ.  ಪ್ರೇಮಿಗಳ ದಿನದಂದೇ ಪತ್ನಿ ರತ್ನವ್ವಳನ್ನು ಪತಿ ಚಂದ್ರು ಹಾವು ಕಚ್ಚಿಸಿ ಸಾಯಿಸಿದ್ದಾನೆ.

ಪತ್ನಿಯ ತಂಗಿಯ ಮೇಲೆ ಕಣ್ಣಿಟ್ಟಿದ್ದ ಪತಿರಾಯ ಸಾವಿರ ರೂ. ಕೊಟ್ಟು ಹಾವು ಖರೀದಿಸಿದ್ದಾನೆ. ಹಾವಿನಿಂದ ಪತ್ನಿಗೆ ಕಚ್ಚಿಸಿ ಬಳಿಕ ತನಗೇನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದಾನೆ.

Show Full Article