Asianet Suvarna News Asianet Suvarna News

ಜಯಾ ಆಸ್ತಿಗೆ ಶಶಿಕಲಾ ಒಡತಿಯೇ?

ಹೈದರಾಬಾದ್ನಲ್ಲಿರುವ ಕೃಷಿಭೂಮಿ ಮಾತ್ರ ವಿವೇಕ್ ಜಯರಾಮ್ ಪಾಲಾಗಲಿದೆ

How Sasikala Natarajan Became Jayalalithaas Closest Confidante

ಚೆನ್ನೈ(ಡಿ.8):ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಬಿಟ್ಟುಹೋಗಿರುವ 113.73 ಕೋಟಿ ಆಸ್ತಿ ಒಡೆಯರು ಯಾರು ಎನ್ನುವ ಪ್ರಶ್ನೆ ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಜಯಲಲಿತಾ ಅವರ ದೀರ್ಘಕಾಲದ ಗೆಳತಿ ಶಶಿಕಲಾ ನಟರಾಜನ್ ಈ ಆಸ್ತಿಯ ವಾರಸುದಾರರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜಯಲಲಿತಾ ಎರಡು ವರ್ಷಗಳ ಹಿಂದೆಯೇ ಆಸ್ತಿಗೆ ಸಂಬಂಸಿ ಉಯಿಲು(ವಿಲ್) ಬರೆದಿಟ್ಟಿದ್ದಾರೆ. ಅದರ ಪ್ರಕಾರ ಪೋಯೆಸ್ ಗಾರ್ಡನ್‌ನಲ್ಲಿರುವ ಮನೆ ಶಶಿಕಲಾ ಅವರಿಗೆ ಸೇರುತ್ತದೆ. ಇದರ ಜತೆಗೆ, ನೀಲಗಿರೀಸ್‌ನಲ್ಲಿರುವ ಕೊಡನಾಡ್ ಎಸ್ಟೇಟ್, ಜಯಾ ಪಬ್ಲಿಕೇಷನ್ಸ್, ಶಶಿ ಎಂಟರ್‌ಪ್ರೈಸಸ್ ಮತ್ತು ಇತರೆ ವ್ಯವಹಾರವೂ ಶಶಿಕಲಾ ಅವರ ಪಾಲಾಗಲಿದೆ. ಈ ವ್ಯವಹಾರದಲ್ಲಿ ಶಶಿಕಲಾ ಮತ್ತು ಜಯಲಲಿತಾ ಪಾಲುದಾರರಾಗಿದ್ದರು. ಆದರೆ, ಹೈದರಾಬಾದ್‌ನಲ್ಲಿರುವ ಕೃಷಿಭೂಮಿ ಮಾತ್ರ ವಿವೇಕ್ ಜಯರಾಮ್ ಪಾಲಾಗಲಿದೆ ಎಂದು ಟೆಲಿಗ್ರ್ಂ ವರದಿ ಮಾಡಿದೆ.

ತಮಿಳುನಾಡು ಸಿಎಂ ಜಯಲಲಿತಾ ನಿಧನದ ಬಳಿಕದ ಬೆಳವಣಿಗೆಗಳಿಗೆ ಸಂಬಂಸಿ, ಇದೀಗ ಅಲ್ಲಿನ ರಾಜಕೀಯ ವಲಯದಲ್ಲಿ ಮಹತ್ವದ ಚರ್ಚೆಗಳು ಆರಂಭವಾಗಿವೆ. ಜಯಾ ನಿಧನದ ಬಳಿಕ ಮಧ್ಯರಾತ್ರಿಯೇ ತುರ್ತಾಗಿ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ ಯಾಕೆ ಮಾಡಲಾಯಿತು? ಶಶಿಕಲಾ ಮತ್ತು ಅವರ ಕುಟುಂಬ ಅಂತ್ಯ ಸಂಸ್ಕಾರ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಕಾರಣವೇನು? ಎಂಬಂಥ ಪ್ರಶ್ನೆಗಳು ಉದ್ಭವಿಸಿವೆ ಎಂದು ‘ದ ನ್ಯೂಸ್ ಮಿನಿಟ್’ ವರದಿ ಮಾಡಿದೆ.

ವರದಿ ಪ್ರಕಾರ, ಎರಡು ದಿನಗಳ ಮುಂಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಲ್ಲಿ, ನಿಧನದ ಸುದ್ದಿ ಘೋಷಣೆಗೆ ಮೊದಲೇ ಶಶಿಕಲಾರ ತಮ್ಮ ದಿವಾಕರನ್ ಶಾಸಕರನ್ನು ಭೇಟಿಯಾಗಿ, ಅವರ ಬೆಂಬಲ ಕೋರುತ್ತಿದ್ದರು. ಜಯಾ ಕಡೆಗಣಿಸಿದ್ದ ಶಶಿಕಲಾರ ಪರಿತ್ಯಕ್ತ ಪತಿ ಎಂ ನಟರಾಜನ್ ಮರಳಿ ಬಂದಿದ್ದರು. ‘ತಮಿಳುನಾಡನ್ನು ರಕ್ಷಿಸಲು ಗೋಲ್ಡನ್ ವ್ಯಕ್ತಿಯ ಮರು ಆಗಮನ’ ಎಂಬ ಪೋಸ್ಟರ್‌ಗಳು ಚೆನ್ನೈನ ಕೆಲವೆಡೆ ಕಾಣಿಸಿಕೊಂಡಿವೆ. ಈ ಬೆಳವಣಿಗೆಗಳು ಮತ್ತೊಮ್ಮೆ ಶಶಿಕಲಾ ಕುಟುಂಬ ಯಾಕೆ ಬಹಿರಂಗವಾಗಿ ಕಾಣಿಸಿಕೊಂಡಿತು ಎಂಬ ಪ್ರಶ್ನೆಗಳು ಉದ್ಭವಕ್ಕೆ ಕಾರಣವಾಗಿದೆ.

2012ರಲ್ಲಿ ಶಶಿಕಲಾ ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ ಕಾರಣಕ್ಕೆ, ಅವರು ಜಯಾ ಮನೆಯಿಂದ ಹೊರಹಾಕಲ್ಪಟ್ಟಿದ್ದರು. ಅವರು ತಮ್ಮ ವಿರುದ್ಧ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಯಾ ಭಾವಿಸಿದ್ದರು. ಮೂರು ತಿಂಗಳ ಬಳಿಕ ಮತ್ತೆ ಅವರು, ಭಾವನಾತ್ಮ ಹೇಳಿಕೆ ನೀಡಿ ಅಮ್ಮಾ ಮನೆಗೆ ಮರಳಿದ್ದರು. ಇಷ್ಟಾದರೂ ಶಶಿಕಲಾ ಪತಿ ನಟರಾಜನ್‌ರನ್ನು ದೂರವೇ ಇಡಲಾಗಿತ್ತು. ಇದೀಗ ಅವರು ಮರಳಿದ್ದಾರೆ, ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಶಶಿಕಲಾ ಕುಟುಂಬಸ್ಥರಲ್ಲಿ ಯಾರೊಬ್ಬರೂ ಜನಪ್ರತಿನಿಗಳಿಲ್ಲ, ಪಕ್ಷದ ಉನ್ನತ ಹುದ್ದೆಯಲ್ಲಿಲ್ಲ. ಆದರೂ ಪ್ರಭಾವಿಗಳಾಗಿರುವ ಅವರ ಕುಟುಂಬ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಹಾಗೂ ಪಕ್ಷದ ಮೇಲೆ ಹೇಗೆ ನಿಯಂತ್ರಣ ಸಾಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.      

Follow Us:
Download App:
  • android
  • ios