ಸಚಿವರಿಗಾಗಿ ಟ್ರಾಫಿಕ್ ತಡೆಯುವುದು, ವಿಮಾನ ವಿಳಂಬ ಮಾಡುವುದು ಸರಿ: ಕೇಂದ್ರ ಸಚಿವೆ
news
By Suvarna Web Desk | 10:22 AM March 20, 2017

ಸಚಿವರ ವಾಹನಗಳ ಮೇಲೆ ಕೆಂಪು ದೀಪ ಹಾಕುವುದು ಹಾಗೂ ಅವರಿಗಾಗಿ ಟ್ರಾಫಿಕನ್ನು ನಿಲ್ಲಿಸುವುದು ಸರಿಯಾಗಿಯೇ ಇದೆ.  ಸಚಿವರು ಮುಖ್ಯವಾದ ಸಭೆಗಳಿಗೆ ಹೋಗಬೇಕಾಗಿರುವುದರಿಂದ ಅವರಿಗಾಗಿ ವಿಮಾನ ಹಾರಾಟವನ್ನು ವಿಳಂಬ ಮಾಡುವುದು ಕೂಡಾ ತಪ್ಪಲ್ಲವೆಂದು ಉಮಾ ಭಾರತಿ ಹೇಳಿದ್ದಾರೆ.

ಭೋಪಾಲ್ (ಮಾ.20): ಪಂಜಾಬಿನಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಕಾಂಗ್ರೆಸ್ ಸರ್ಕಾರ ರಾಜಕಾರಣಿಗಳ ವಿವಿಐಪಿ ಸಂಸ್ಕೃತಿಗೆ ತಿಲಾಂಜಲಿ ಇಡಲು ನಿರ್ಧರಿಸಿರುವುದನ್ನು ಕೇಂದ್ರ ಸಚಿವೆ ಉಮಾ ಭಾರತಿ ಆಕ್ಷೇಪಿಸಿದ್ದಾರೆ.

ಸಚಿವರಿಗಾಗಿ ವಾಹನ ಸಂಚಾರವನ್ನು ತಡೆಹಿಡಿಯುವುದು ಹಾಗೂ ವಿಮಾನವನ್ನು ವಿಳಂಬಗೊಳಿಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲವೆಂದು ಉಮಾ ಭಾರತಿ ಹೇಳಿದ್ದಾರೆ.

ಸಚಿವರ ವಾಹನಗಳ ಮೇಲೆ ಕೆಂಪು ದೀಪ ಹಾಕುವುದು ಹಾಗೂ ಅವರಿಗಾಗಿ ಟ್ರಾಫಿಕನ್ನು ನಿಲ್ಲಿಸುವುದು ಸರಿಯಾಗಿಯೇ ಇದೆ. ಸಚಿವರು ಮುಖ್ಯವಾದ ಸಭೆಗಳಿಗೆ ಹೋಗಬೇಕಾಗಿರುವುದರಿಂದ ಅವರಿಗಾಗಿ ವಿಮಾನ ಹಾರಾಟವನ್ನು ವಿಳಂಬ ಮಾಡುವುದು ಕೂಡಾ ತಪ್ಪಲ್ಲ, ಇಲ್ಲದಿದ್ದರೆ ಕೋಟ್ಯಾಂತರ ರೂ. ನಷ್ಟವಾಗು ಸಾಧ್ಯತೆಗಳಿರುತ್ತದೆ ಎಂದು ಉಮಾ ಭಾರತಿ ಹೇಳಿದ್ದಾರೆ.

ಆದರೆ ವೈಯುಕ್ತಿಕ ಕೆಲಸಗಳಿಗೆ ಅವರು ಹೋಗುವುದಾದರೆ ಆ ಸೌಲಭ್ಯಗಳನ್ನು ಅವರಿಗೆ ನೀಡಬೇಕೆಂದಿಲ್ಲವೆಂದು ಅವರು ಹೇಳಿದ್ದಾರೆ.

ಸರ್ಕಾರಿ ವಾಹನಗಳ ಮೇಲಿನಿಂದ ಕೆಂಪು, ಹಳದಿ ಹಾಗೂ ನೀಲಿ ದೀಪಗಳನ್ನು ತೆಗೆಯುವ ಮೂಲಕ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಲು ಪಂಜಾಬಿನ ನೂತನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಚಿವ ಸಂಪುಟವು ನಿರ್ಧರಿಸಿತ್ತು.

Show Full Article