Asianet Suvarna News Asianet Suvarna News

‘ಮುಸ್ಲಿಮರು ಇಲ್ಲದೇ ಇರುತ್ತಿದ್ದರೆ ನಾವು ಬದುಕಿರುತ್ತಿರಲಿಲ್ಲ’

ನ್ನ ತಲೆಯು ಮುಂದಿನ ಸೀಟಿಗೆ ಹೊಡೆದುಕೊಳ್ಳುತ್ತಿತ್ತು, ನಾನು ಅಲ್ಲಿಂದಿಲ್ಲಿಗೆ ಎಸೆಯಲ್ಪಡುತ್ತಿದೆ. ಒಂದೆಡೆ ಅಸಾಧ್ಯವಾದ ನೋವು, ಮತ್ತೆಲ್ಲಾ ಕಡೆಯಿಂದ ಚೀರಾಡುವ ಧ್ವನಿ. ಸ್ಥಳೀಯ ಮುಸ್ಲಿಮರು ಘಟನಾ ಸ್ಥಳಕ್ಕೆ ಧಾವಿಸಿ ಬಂದು, ನಮ್ಮನ್ನು ಹೊರಗೆಳೆದು ಪ್ರಾಣ ಕಾಪಾಡಿದರು. ನಿಜವಾಗಿಯೂ, ಅವರಿಲ್ಲಿದಿರುತ್ತಿದ್ದರೆ ನಾವು ಬದುಕುಳಿತಿರಲಿಲ್ಲ, ಎಂದು ರೈಲು ದುರ್ಘಟನೆಯಲ್ಲಿ ಬದುಕುಳಿದ ಕಾವಿಧಾರಿ ಸ್ವಾಮೀಜಿ ಭಗವಾನ್ ದಾಸ್ ಮಹರಾಜ್ ಹೇಳಿದ್ದಾರೆ.

Had it not been for Muslims we would have died Says Saints injured in Utkal Express derailment

ಮೀರಠ್, ಉತ್ತರ ಪ್ರದೇಶ: ನನ್ನ ತಲೆಯು ಮುಂದಿನ ಸೀಟಿಗೆ ಹೊಡೆದುಕೊಳ್ಳುತ್ತಿತ್ತು, ನಾನು ಅಲ್ಲಿಂದಿಲ್ಲಿಗೆ ಎಸೆಯಲ್ಪಡುತ್ತಿದೆ. ಒಂದೆಡೆ ಅಸಾಧ್ಯವಾದ ನೋವು, ಮತ್ತೆಲ್ಲಾ ಕಡೆಯಿಂದ ಚೀರಾಡುವ ಧ್ವನಿ. ಸ್ಥಳೀಯ ಮುಸ್ಲಿಮರು ಘಟನಾ ಸ್ಥಳಕ್ಕೆ ಧಾವಿಸಿ ಬಂದು, ನಮ್ಮನ್ನು ಹೊರಗೆಳೆದು ಪ್ರಾಣ ಕಾಪಾಡಿದರು. ನಿಜವಾಗಿಯೂ, ಅವರಿಲ್ಲಿದಿರುತ್ತಿದ್ದರೆ ನಾವು ಬದುಕುಳಿತಿರಲಿಲ್ಲ, ಎಂದು ರೈಲು ದುರ್ಘಟನೆಯಲ್ಲಿ ಬದುಕುಳಿದ ಕಾವಿಧಾರಿ ಸ್ವಾಮೀಜಿ ಭಗವಾನ್ ದಾಸ್ ಮಹರಾಜ್ ಹೇಳಿದ್ದಾರೆ.

ಗಂಗೆಯಲ್ಲಿ ಪವಿತ್ರ ಸ್ನಾನಕ್ಕಾಗಿ ಮಧ್ಯ ಪ್ರದೇಶದ ಮೊರಾನಾದಿಂದ ಆರು ಸಂತರೊಂದಿಗೆ ಹರಿದ್ವಾರಕ್ಕೆ ದುರ್ಘಟನೆಗೊಳಗಾದ ಉತ್ಕಾಲ್ ಕ್ಸ್’ಪ್ರೆಸ್ ರೈಲಿನಲ್ಲಿ ಭಗವಾನ್ ದಾಸ್ ಹೊರಟ್ಟಿದ್ದರು.

ಆ ಮುಸ್ಲಿಮರು ನಮಗಾಗಿ ನೀರು ತಂದು ಕೊಟ್ಟರು, ಹಾಗೂ ಖಾಸಗಿ ವೈದ್ಯರನ್ನು ಕರೆತಂದರು. ನಾವೆಂದಿಗೂ ಅದನ್ನು ಮರೆಯಲು ಸಾಧ್ಯವಿಲ್ಲವೆಂದು, ಭಗವಾನ್ ದಾಸ್ ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗಾಯಗೊಂಡ ಸಂತರನ್ನು ಬಳಿಕ ಮೀರಠ್’ನ ಲಾಲಾ ಲಜಪತ್ ರಾಯ್ ಸ್ಮಾರಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ನಾವು ದೇವರಲ್ಲಿ ನಂಬಿಕೆಯಿರಿಸುತ್ತೇವೆ. ದುರ್ಘಟನೆಯ ಬಳಿಕ ಆತನ ಮಹಿಮೆಯನ್ನು ಕಂಡುಕೊಂಡೆವು.  ಹಿಂದೂ-ಮುಸ್ಲಿಮ್ ಬಾಂಧ್ಯವವನ್ನು ಮುಂದಿಟ್ಟುಕೊಂಡು ಕೆಲವರು ರಾಜಕೀಯ ಮಾಡುತ್ತಾರೆ. ಆದರೆ ಹಿಂದೂ-ಮುಸ್ಲಿಮರ ನಡುವೆ ಪ್ರೀತಿ ವಿಶ್ವಾಸ ಎಂದಿನಂತೆ ಇದೆ ಎಂದು ಇನ್ನೋರ್ವ ಸಂತ ಮೋರ್ನಿ ದಾಸ್ ಹೇಳಿದ್ದಾರೆ.

ಹರಿದ್ವಾರಕ್ಕೆ ಹೋಗುತ್ತಿದ್ದ ಕಾಳಿಂಗ ಉತ್ಕಾಲ್ ಎಕ್ಸ್’ಪ್ರೆಸ್ ರೈಲಿನ 14 ಬೋಗಿಗಳು ನಿನ್ನೆ ಮುಝಫ್ಫರ್ ನಗರದ ಖಟೌಳಿ ಬಳಿ ಹಳಿತಪ್ಪಿವೆ. ಕನಿಷ್ಠ 23 ಮಂದಿ ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ. ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 156 ಮಂದಿ ಗಾಯಗೊಂಡಿದ್ದಾರೆ.

Had it not been for Muslims we would have died Says Saints injured in Utkal Express derailment

Follow Us:
Download App:
  • android
  • ios