Asianet Suvarna News Asianet Suvarna News

ಬಿಗ್ ನ್ಯೂಸ್: ಕೆಪಿಸಿಸಿ ಖಜಾಂಜಿ ಗೋವಿಂದರಾಜು ಡೈರಿಯಲ್ಲಿನ ಸ್ಫೋಟಕ ವಿವರಗಳು ಬಯಲು

. ಡೈರಿಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೊದಲಾದವರ ಹೆಸರುಗಳೂ ಉಲ್ಲೇಖವಾಗಿದೆ.

govindaraju dairy details revealed

ಬೆಂಗಳೂರು(ಫೆ. 23): ಕಾಂಗ್ರೆಸ್ ಹೈಕಮಾಡ್'ಗೆ 1 ಸಾವಿರ ಕೋಟಿ ದೇಣಿಗೆ ಪ್ರಕರಣಕ್ಕೆ ಇನ್ನಷ್ಟು ಚುರುಕು ಸಿಕ್ಕಿದೆ. ರಾಜ್ಯದ ಕಾಂಗ್ರೆಸ್ ನಾಯಕರು ಪಕ್ಷದ ಹೈಕಮಾಂಡ್'ಗೆ ದೇಣಿಗೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಾಡುತ್ತಿರುವ ಆರೋಪಕ್ಕೆ ಪುಷ್ಟಿ ನೀಡುವಂಥ ಬೆಳವಣಿಗೆ ನಡೆದಿದೆ. ಕೆಪಿಸಿಸಿ ಖಜಾಂಚಿ ಕೆ.ಗೋವಿಂದರಾಜು ಅವರಿಗೆ ಸೇರಿದ್ದೆನ್ನಲಾದ ಡೈರಿಯಲ್ಲಿನ ವಿವರಗಳು ಬಯಲಾಗಿವೆ. ಈ ಡೈರಿಯಲ್ಲಿ ಕಾಂಗ್ರೆಸ್ ಹೈಕಮಾಂಡ್'ಗೆ ಹಣ ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಡೈರಿಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೊದಲಾದವರ ಹೆಸರುಗಳೂ ಉಲ್ಲೇಖವಾಗಿದೆ. ಹಲವು ಹೆಸರುಗಳು ಕೇವಲ ಇನಿಷಿಯಲ್'ಗಳಲ್ಲಿ ಇರುವುದರಿಂದ ಎಲ್ಲ ಹೆಸರುಗಳು ಸ್ಪಷ್ಟವಾಗಿಲ್ಲ. ಸ್ಟೀಲ್ ಫ್ಲೈಓವರ್ ಯೋಜನೆಗೆ 65 ಕೋಟಿ ರೂ ಕೊಟ್ಟಿರುವ ಬಗ್ಗೆಯೂ ಉಲ್ಲೇಖವಿದೆ. ಡೈರಿಯಲ್ಲಿ ಎಐಸಿಸಿ ಖಜಾಂಚಿ ಮೋತಿಲಾಲ್ ವೋರಾ ಅವರಿಗೆ ನೀಡಿರುವ ಹಣದ ಎಲ್ಲ ವಿವರವನ್ನೂ ನಮೂದಿಸಲಾಗಿದೆ.

ಡೈರಿಯಲ್ಲಿನ ವಿವರಗಳು:

2014ರ ಲೋಕಸಭಾ ಚುನಾವಣೆಯ ವೇಳೆ ಸ್ವೀಕರಿಸಿದ್ದು, ಕೊಟ್ಟಿದ್ದು:

ಸ್ವೀಕರಿಸಿದ್ದು:
ಕೆಜೆಜಿ + ಎಂಬಿಪಿ: 219 ಕೋಟಿ
ಹೆಚ್'ಸಿಎಂ: 47 ಕೋಟಿ
ಎಸ್'ಬಿ: 23 ಕೋಟಿ
ಇತರರು: 16.75 ಕೋಟಿ
ಕೆಜೆಜಿ + ಎಂಬಿಪಿ: 24 ಕೋಟಿ

ಎಐಸಿಸಿಗೆ ಕೊಟ್ಟಿದ್ದು:
ಎಂ.ವೋರಾ: 32 ಕೋಟಿ
ಆರ್'ಜಿ ಆಫೀಸ್: 6 ಕೋಟಿ
ಎಸ್'ಜಿ ಆಫೀಸ್: 8 ಕೋಟಿ

ಬಿಬಿಎಂಪಿ ಚುನಾವಣೆಗೆ ಸ್ವೀಕರಿಸಿದ್ದು, ಕೊಟ್ಟಿದ್ದು:

ಕೊಟ್ಟಿದ್ದು:
198 X 25 ಲಕ್ಷ: 49.5 ಕೋಟಿ
ಮಾಧ್ಯಮ: 7 ಕೋಟಿ

ಸ್ವೀಕರಿಸಿದ್ದು:
ಕೆಜೆಜಿ + ಎಂಬಿಪಿ: 32 ಕೋಟಿ
ಹೆಚ್'ಸಿಎಂ: 10 ಕೋಟಿ
ಡಿಕೆಎಸ್: 3 ಕೋಟಿ
ಆರ್'ಎಲ್'ಆರ್: 5 ಕೋಟಿ
ಆರ್'ವಿಡಿ: 5 ಕೋಟಿ
ಕೆಇಎಂಪಿ: 3 ಕೋಟಿ
ಆಎಜಿಹೆಚ್'ಯು: 6 ಕೋಟಿ
ಎಸ್'ಬಿ: 4 ಕೋಟಿ

ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳಿಗೆ:

ಕೊಟ್ಟಿದ್ದು:
ಪ್ರತೀ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ 5 ಕೋಟಿ
ಪ್ರತೀ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ 1 ಲಕ್ಷ
ಒಟ್ಟು 130 ಕೋಟಿ

ಸ್ವೀಕರಿಸಿದ್ದು:
ಕೆಜೆಜಿ: 30 ಕೋಟಿ
ಡಿಕೆಎಸ್: 12 ಕೋಟಿ

------

ಸ್ವೀಕರಿಸಿದ್ದು:
ಸ್ಟೀಲ್ ಬ್ರಿಡ್ಜ್: 65 ಕೋಟಿ
ಎಂಬಿಪಿ: 15 ಕೋಟಿ
ಹೆಚ್'ಸಿಎಂ: 13 ಕೋಟಿ

ಎಐಸಿಸಿಗೆ ಕೊಟ್ಟಿದ್ದು:
ಎಂ.ವೋರಾ: 15 ಕೋಟಿ - ಸೆಪ್ಟಂಬರ್ 2015
ಎಂ.ವೋರಾ: 10 ಕೋಟಿ - ಅಕ್ಟೋಬರ್ 2015
ಎಂ.ವೋರಾ: 25 ಕೋಟಿ - ಅಕ್ಟೋಬರ್ 2015
ಎಪಿ: 5 ಕೋಟಿ - ಅಕ್ಟೋಬರ್ 2015
ಡಿಜಿಎಸ್: 6 ಕೋಟಿ - ನವೆಂಬರ್ 2015
ಎಂ.ವೋರಾ: 10 ಕೋಟಿ + 5 : ನವೆಂಬರ್ 2015
ಎಂ.ವೋರಾ: 15 ಕೋಟಿ - ಡಿಸೆಂಬರ್ 2015
ಎಂ.ವೋರಾ: 15 ಕೋಟಿ - ಜನವರಿ 2016
ಡಿಜಿಎಸ್: 5 ಕೋಟಿ - ಜನವರಿ
ಎಪಿ: 3 ಕೋಟಿ - ಜನವರಿ
ಎವಿ: 2 ಕೋಟಿ - ಜನವರಿ
ಹೆಚ್'ಆರ್'ಬಿ: 50 ಕೋಟಿ
ಆರ್'ಜಿ ಆಫೀಸ್: 8 ಕೋಟಿ
ಎಂ.ವೋರಾ(ಬಿಹಾರ್): 25 ಕೋಟಿ

ಸ್ವೀಕರಿಸಿದ್ದು:
ಕೆಜೆಜಿ: 15 ಕೋಟಿ - ಸೆಪ್ಟಂಬರ್
ಹೆಚ್'ಸಿಎಂ: 5 ಕೋಟಿ - ಸೆಪ್ಟಂಬರ್
ಹೆಚ್'ಸಿಎಂ: 3 ಕೋಟಿ - ಅಕ್ಟೋಬರ್
ಎಂಬಿಪಿ: 8 ಕೋಟಿ
ಕೆಜೆಜಿ: 20 ಕೋಟಿ
ಎಸ್'ಬಿ: 9 ಕೋಟಿ
ಎಸ್'ಬಿ: 10 ಕೋಟಿ

Follow Us:
Download App:
  • android
  • ios