Asianet Suvarna News Asianet Suvarna News

ಗೌರಿ ಹತ್ಯೆ ಹಿಂದೆ ನಕ್ಸಲರು: ಎಸ್'ಐಟಿ'ಗೆ ಸಂಶಯ ?

ತುಂಗಾ ಮತ್ತು ಭದ್ರಾ ಎಂಬ ಎರಡು ತಂಡಗಳಲ್ಲಿ ನಕ್ಸ'ಲರು ಸಕ್ರಿಯರಾಗಿದ್ದಾರೆ. ಭದ್ರಾ ತಂಡಕ್ಕೆ ವಿಕ್ರಂ ಗೌಡ ನಾಯಕ, ತುಂಗಾ ತಂಡವನ್ನು ಕೃಷ್ಣ ಮೂರ್ತಿ ಎಂಬುವವನು ನೇತೃತ್ವ ವಹಿಸಿದ್ದ. ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿಕ್ರಂಗೌಡ ಹಾಗೂ ಶಿವಮೊಗ್ಗ ಕಡೆಯಲ್ಲಿ ಕೃಷ್ಣಮೂರ್ತಿ ಸಕ್ರಿಯರಾಗಿದ್ದರು.

Gouri Lakesh assassination and Naxal Threat

ಬೆಂಗಳೂರು(ಸೆ.08): ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಹತ್ಯೆಯ ಹಂತಕರನ್ನು ಬೇಟೆಯಾಡಲು ಎಸ್​ಐಟಿ ಟೀಂ ಶತಾಯ ಗತಾಯ ಬಲೆ ಬೀಸಿದ್ದು, ಹತ್ಯೆಯ ಹಿಂದೆ ನಕ್ಸಲೀಯರ ಕೈವಾಡವಿದೆಯೇ ಎಂಬ ಸಂಶಯ ತನಿಖಾ ತಂಡಕ್ಕೆ ವ್ಯಕ್ತವಾಗಿದೆ.

ನಕ್ಸ'ಲ್'ನ ಒಂದು ಗುಂಪಿನವರಾದ ಬಿ.ಜಿ. ಕೃಷ್ಣಮೂರ್ತಿ, ಲತಾ ಮುಂಡರಗಾ ಮತ್ತು ಪ್ರಭಾ ಅವರ ಶರಣಾಗತಿಗೆ ಗೌರಿ ಅವರು ಯತ್ನಿಸುತ್ತಿದ್ದರು. ಇದರಿಂದ ಮತ್ತೊಂದು ತಂಡದ ನಾಯಕ ವಿಕ್ರಂ ಗೌಡ ಮತ್ತು ಅವರ ಗುಂಪಿಗೆ ತೀವ್ರ ಅಸಮಾಧಾನವಾಗಿತ್ತು ಎನ್ನಲಾಗಿದೆ. 

ತುಂಗ ಮತ್ತು ಭದ್ರ ತಂಡಗಳು

ತುಂಗಾ ಮತ್ತು ಭದ್ರಾ ಎಂಬ ಎರಡು ತಂಡಗಳಲ್ಲಿ ನಕ್ಸ'ಲರು ಸಕ್ರಿಯರಾಗಿದ್ದಾರೆ. ಭದ್ರಾ ತಂಡಕ್ಕೆ ವಿಕ್ರಂ ಗೌಡ ನಾಯಕ, ತುಂಗಾ ತಂಡವನ್ನು ಕೃಷ್ಣ ಮೂರ್ತಿ ಎಂಬುವವನು ನೇತೃತ್ವ ವಹಿಸಿದ್ದ. ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿಕ್ರಂಗೌಡ ಹಾಗೂ ಶಿವಮೊಗ್ಗ ಕಡೆಯಲ್ಲಿ ಕೃಷ್ಣಮೂರ್ತಿ ಸಕ್ರಿಯರಾಗಿದ್ದರು.

ಗೌರಿ ಲಂಕೇಶ್ ಅವರು ತುಂಗಾ ತಂಡವನ್ನು ಶರಣಾಗತಿಗೆ ಮನವೊಲಿಸಿದ್ದರು. ನಕ್ಸಲರು ಸರ್ಕಾರಕ್ಕೆ ಶರಣಾಗತಿ ಬಗ್ಗೆ ವಿಕ್ರಂ ಗೌಡ ಕಡು ವಿರೋಧಿಯಾಗಿದ್ದ. ಈ ತಂಡ ಶರಣಾದರೆ ಮಲೆನಾಡಿನ ನಕ್ಸಲ್ ಚಳವಳಿಗೆ ಹೊಡೆತ ಬೀಳುವ ಕಾರಣ ಗೌರಿ ಮತ್ತು ತಂಡದ ಪ್ರಯತ್ನಗಳನ್ನು ಬಹಿರಂಗವಾಗಿ ಖಂಡಿಸುತ್ತಿದ್ದ. ಇದೇ ಕಾರಣಕ್ಕೆ ಗೌರಿ ಕೊಲೆಯಾಗಿರುವ ಸಾಧ್ಯತೆ ಬಗ್ಗೆ ಎಸ್'ಐಟಿ ಗಂಭೀರ ತನಿಖೆ ನಡೆಸುತ್ತಿದೆ.

ವಿಕ್ರಂ ಗೌಡ ಹತ್ಯೆ ಮಾಡಿರುವ ಬಗ್ಗೆ ಶಂಕೆ ?

ಚಿಕ್ಕಮಗಳೂರು ಸುತ್ತಲಿನ ಕಾಡಿನಲ್ಲಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ವಿಕ್ರಂ ಗೌಡ ನಕ್ಸಲೈಟ್​ ವಿಕ್ರಂ ಗೌಡ ಸ್ವತಃ ಬೆಂಗಳೂರಿಗೆ ಬಂದು ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದನಾ ಎಂಬ ಸಂಶಯ ತನಿಖಾ ತಂಡಕ್ಕೆ ವ್ಯಕ್ತವಾಗಿದೆ. ಸಿಸಿ ಟಿವಿ ದೃಶ್ಯದಲ್ಲಿ ದಾಖಲಾಗಿರುವ ಹಂತಕನ ಎತ್ತರ ಅಂದಾಜು 5.1 ರಿಂದ 5.4 ಇದ್ದು, ಪೊಲೀಸ್​ ದಾಖಲೆಗಳ ಪ್ರಕಾರ ವಿಕ್ರಂ ಗೌಡನ ಎತ್ತರ 5.2 ಅಡಿ ಇದೆ.

ವಿಕ್ರಂ ಗೌಡ ಕೊಲೆ ಮಾಡಿರುವ ಬಗ್ಗೆ ಎಸ್'ಐಟಿಯಲ್ಲಿ ಭಿನ್ನಾಭಿಪ್ರಾಯವಿದೆ. ಬೆಂಗಳೂರಿಗೆ ಬಂದು ಕಾರ್ಯಾಚರಣೆ ನಡೆಸುವ ಚಾಕಚಕ್ಯತೆ ವಿಕ್ರಂ ಗೌಡನಿಗಿಲ್ಲ. ಆದ್ದರಿಂದ ಈತ ಸ್ವತಃ ಕೊಲೆ ಮಾಡಿರಲಿಕ್ಕಿಲ್ಲ ಎಂದು ಕೆಲ ಅಧಿಕಾರಿಗಳ ವಾದವಾಗಿದೆ.

 

 

Follow Us:
Download App:
  • android
  • ios