ಗೂಗಲ್'ನಲ್ಲಿ ಇನ್ನು ಮುಂದೆ ಈ ವೆಬ್'ಸೈಟ್'ಗಳೂ ಎಷ್ಟು ಹುಡುಕಿದರೂ ಸಿಗಲ್ಲ: ನೋಡುಗರಿಗೂ ಇದು ಶಾಕ್
news
By Suvarna Web Desk | 03:47 PM February 14, 2017

ಜಗತ್ತಿನ ಅಂತರ್ಜಾಲ ದೈತ್ಯ ಸರ್ಚ್ ಎಂಜಿನ್ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದ್ದು,

ಗೂಗಲ್ ಸಂಸ್ಥೆ ಕಠಿಣ ನಿರ್ಧಾರಕ್ಕೆ ಬಂದಿದ್ದು ಕೆಲವು ವೆಬ್'ಸೈಟ್'ಗಳನ್ನು ಸಂಪೂರ್ಣ ಬ್ಲ್ಯಾಕ್ ಮಾಡಲು ನಿರ್ಧರಿಸಿದೆ. ಪೈರಸಿ ತಡೆಯಲು ಜಗತ್ತಿನ ಅಂತರ್ಜಾಲ ದೈತ್ಯ ಸರ್ಚ್ ಎಂಜಿನ್ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದ್ದು, ಪೈರಸಿ ಡೌನ್'ಲೋಡ್ ಸಂಸ್ಥೆ ಟೊರೆಂಟ್'ದ ಎಲ್ಲ ಸೈಟ್'ಗಳನ್ನು ನಿಷೇಧಿಸಲಿದೆ. ಇನ್ನು ಕೆಲವೇ ದಿನಗಳಲ್ಲಿ  ಗೂಗಲ್'ನಲ್ಲಿ ಟೊರೆಂಟ್ ಸೈಟ್'ಅನ್ನು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಹಾಲಿವುಡ್ ಪ್ರತಿನಿಧಿಗಳು ಇತ್ತೀಚಿಗಷ್ಟೆ ಗೂಗಲ್ ಸಂಸ್ಥೆ ಪೈರಸಿಯನ್ನು ಪ್ರೋತ್ಸಾಹ ನೀಡುತ್ತಿದೆ ಎಂದು ಟೀಕಿಸಿದ ಹಿನ್ನೆಲೆಯಲ್ಲಿ ಗೂಗಲ್ ಈ ಕ್ರಮಕ್ಕೆ ಮುಂದಾಗಿದೆ.

ಪೈರಸಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂಗ್ಲೆಂಡ್'ನ ಬೌದ್ಧಿಕ ಕಚೇರಿ ಸಂಸ್ಥೆಯಲ್ಲಿ ಗೂಗಲ್,ಯಾಹೂ,ಬಿಂಗ್ ಹಾಗೂ ಹಾಲಿವುಡ್  ಪ್ರತಿನಿಧಿಗಳು ಸಭೆ ಸೇರಿ ಟೊರೆಂಟ್ ನಿಷೇಧಿಸಲು ಮುಂದಾಗಿವೆ. ಗೂಗಲ್'ನಲ್ಲಿ ಮಾತ್ರವಲ್ಲ ಬಿಂಗ್, ಯಾಹೂ ಮುಂತಾದ ಸರ್ಚ್ ಎಂಜಿನ್'ಗಳಲ್ಲೂ ಟೊರೆಂಟ್ ವೆಬ್'ಸೈಟ್ ದೊರಕುವುದಿಲ್ಲ. ಜೂನ್ 1, 2017 ರಿಂದ ಟೊರೆಂಟ್'ವನ್ನು ಸಂಪೂರ್ಣ'ವಾಗಿ ಬ್ಯಾನ್ ಮಾಡಲಾಗುತ್ತದೆ. ಭಾರತವು ಕಳೆದ ವರ್ಷ ಕಿಕ್ಕಾಸ್ ಟೊರೆಂಟ್ ಹಾಗೂ ಟೊರೆಂಟ್'ಸ್ ಅನ್ನ ಬ್ಯಾನ್ ಮಾಡಿತ್ತು. ಅಲ್ಲದೆ ನಮ್ಮ ದೇಶದಲ್ಲಿ ಅನಧಿಕೃತವಾಗಿ ಡೌನ್'ಲೋಡ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಜೈಲು ಶಿಕ್ಷೆ ವಿಧಿಸಬಹುದಾಗಿದೆ.

Show Full Article