(ವಿಡಿಯೊ) ಭಿಕ್ಷೆ ಬೇಡಿದ ವಿದೇಶಿಗರು!
news
By Suvarna Web Desk | 11:41 AM Wednesday, 11 January 2017

ವಿವಿಧ ದೇಶಗಳಿಂದ ಪ್ರವಾಸಕ್ಕೆ ಬಂದಿದ್ದ 100 ಜನರ ರಾಂಬೋ ಪ್ಯಾಮೀಲಿ ಎನ್ನುವ ವಿದೇಶಿ ತಂಡ ಬಸ್ ನಿಲ್ದಾಣದಲ್ಲಿ ತಮ್ಮ ಕಲೆಗಳನ್ನ ಪ್ರದರ್ಶಿಸುತ್ತ ಭೀಕ್ಷಾಟನೆ ಮಾಡಿದರು. ನೆರೆದ ಜನರಮುಂದೆ ಕಲೆಯನ್ನ ಪ್ರದರ್ಶಿಸುತ್ತಾ ನಾವು ಚೆನ್ನೈನ ಕೋಡೆಕೆನಾಲ್'ಗೆ ಹೋಗಬೇಕು ನಮಗೆ ಧನ ಸಹಾಯ ಮಾಡಿ ಎಂದು ಅಂಗಲಾಚಿದರು

ಬಳ್ಳಾರಿ(ಜ.11): ವಿಶ್ವ ಪ್ರಸಿದ್ದ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ವಿದೇಶಿಗರಿಂದ ಬಳ್ಳಾರಿಯ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಭೀಕ್ಷಾಟನೆ ಮಾಡಿದ ಪ್ರಸಂಗ ನಡೆದಿದೆ. ವಿವಿಧ ದೇಶಗಳಿಂದ ಪ್ರವಾಸಕ್ಕೆ ಬಂದಿದ್ದ 100 ಜನರ ರಾಂಬೋ ಪ್ಯಾಮೀಲಿ ಎನ್ನುವ ವಿದೇಶಿ ತಂಡ ಬಸ್ ನಿಲ್ದಾಣದಲ್ಲಿ ತಮ್ಮ ಕಲೆಗಳನ್ನ ಪ್ರದರ್ಶಿಸುತ್ತ ಭೀಕ್ಷಾಟನೆ ಮಾಡಿದರು.

ನೆರೆದ ಜನರಮುಂದೆ ಕಲೆಯನ್ನ ಪ್ರದರ್ಶಿಸುತ್ತಾ ನಾವು ಚೆನ್ನೈನ ಕೋಡೆಕೆನಾಲ್'ಗೆ ಹೋಗಬೇಕು ನಮಗೆ ಧನ ಸಹಾಯ ಮಾಡಿ ಎಂದು ಅಂಗಲಾಚಿದರು.ಸಾರ್ವಜನಿಕರಿಗೆ ತೊಂದರೆಯಾಗಿದ್ದರಿಂದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ಮಾಡಿದಾಗ ನಾವು ವಿಶ್ವಶಾಂತಿಗಾಗಿ ವಿಶ್ವಪರ್ಯಾಟನೆ ಮಾಡುತ್ತಿದ್ದೇವೆ ಇದರಿಂದ ಸಾರ್ವಜಿಕರಿಂದ ಧನ ಸಹಾಯ ಕೋರಿದ್ದೇವೆ ಎಂದಿದ್ದಾರೆ.

Show Full Article