Asianet Suvarna News Asianet Suvarna News

ಬೆಂಗ್ಳೂರಿನಿಂದ ದೇಶಕ್ಕೆ ಮೊದಲ ಜೆಟ್ ಎಂಜಿನ್ ಉಡುಗೊರೆ? ಇಂತಹ ಎಂಜಿನ್ ಹೊಂದಿದ 4ನೇ ದೇಶವಾಗುವತ್ತ ಭಾರತ

ಬೆಂಗಳೂರಿನ ಪೀಣ್ಯದ 11 ಎಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳ ತಂಡವೊಂದು ತಾವು ಅಭಿವೃದ್ಧಿಪಡಿಸಿರುವ ಜೆಟ್ ಎಂಜಿನ್ ಅನ್ನು ಫೆ.8ರಂದು ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಿದ್ದು, ಅದು ಯಶಸ್ವಿಯಾಗಿದೆ. ಮತ್ತೊಂದಿಷ್ಟು ಪರೀಕ್ಷೆಗಳು ನಡೆಯುತ್ತಿವೆ. ಮುಂದಿನ 18ರಿಂದ 24 ವಾರಗಳಲ್ಲಿ ಈ ಎಂಜಿನ್‌ಗೆ ಪ್ರಮಾಣ ಪತ್ರ ಪಡೆದುಕೊಳ್ಳುವ ಗುರಿಯನ್ನು ಈ ತಂಡ ಹಾಕಿಕೊಂಡಿದೆ.

First Engine manufacture at Bangalore

ಬೆಂಗಳೂರು(12): ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಭಾರತಕ್ಕೆ ಬಹುದೊಡ್ಡ ಹಿರಿಮೆ ತಂದುಕೊಟ್ಟ ಕರುನಾಡಿನ ರಾಜಧಾನಿ ಬೆಂಗಳೂರು, ಈಗ ವೈಮಾನಿಕ ಕ್ಷೇತ್ರದಲ್ಲೂ ಅಂತಹುದೇ ಸಾಧನೆಗೆ ಸಜ್ಜಾಗಿದೆ.

ಸ್ವದೇಶಿ ನಿರ್ಮಿತ ಜೆಟ್ ಎಂಜಿನ್‌ವೊಂದನ್ನು ಬೆಂಗಳೂರಿನ ಖಾಸಗಿ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ಒಂದಿಷ್ಟು ಪರೀಕ್ಷೆ ಬಳಿಕ ಪ್ರಮಾಣಪತ್ರವೇನಾದರೂ ಆ ಕಂಪನಿಗೆ ದೊರೆತರೆ, ಜೆಟ್ ಎಂಜಿನ್ ಅಭಿವೃದ್ಧಿಪಡಿಸಿದ ಏಷ್ಯಾದ ಮೊದಲ ಹಾಗೂ ವಿಶ್ವದ ನಾಲ್ಕನೇ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ. ವಿಮಾನದ ಎಂಜಿನ್‌ಗೂ ಜೆಟ್ ಎಂಜಿನ್‌ಗೂ ಸಾಕಷ್ಟು ವ್ಯತ್ಯಾಸವಿದ್ದು, ಇದರ ಅಭಿವೃದ್ಧಿ ತುಸು ಕ್ಲಿಷ್ಟಕರವಾಗಿದೆ. ಹೀಗಾಗಿ ಈವರೆಗೆ ಅಮೆರಿಕ, ಯುರೋಪ್ ಹಾಗೂ ಇಸ್ರೇಲ್ ಬಳಿ ಮಾತ್ರವೇ ಜೆಟ್ ಎಂಜಿನ್ ಅಭಿವೃದ್ಧಿಪಡಿಸುವ ಸಾಮರ್ಥ್ಯವಿದೆ.

ಬೆಂಗಳೂರಿನ ಪೀಣ್ಯದ 11 ಎಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳ ತಂಡವೊಂದು ತಾವು ಅಭಿವೃದ್ಧಿಪಡಿಸಿರುವ ಜೆಟ್ ಎಂಜಿನ್ ಅನ್ನು ಫೆ.8ರಂದು ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಿದ್ದು, ಅದು ಯಶಸ್ವಿಯಾಗಿದೆ. ಮತ್ತೊಂದಿಷ್ಟು ಪರೀಕ್ಷೆಗಳು ನಡೆಯುತ್ತಿವೆ. ಮುಂದಿನ 18ರಿಂದ 24 ವಾರಗಳಲ್ಲಿ ಈ ಎಂಜಿನ್‌ಗೆ ಪ್ರಮಾಣ ಪತ್ರ ಪಡೆದುಕೊಳ್ಳುವ ಗುರಿಯನ್ನು ಈ ತಂಡ ಹಾಕಿಕೊಂಡಿದೆ.

ಬೆಂಗಳೂರಿನ ಇಂಟೆಕ್ ಡಿಎಂಎಲ್‌ಎಸ್ ಕಂಪನಿಯ ಅಧೀನದಲ್ಲಿರುವ ಪೋಯೆರ್ ಜೆಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ತಂಡ ಜೆಟ್ ಎಂಜಿನ್ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಎರಡು ವರ್ಷಗಳ ಹಿಂದೆ 20 ಕೋಟಿ ರು. ವೆಚ್ಚದಲ್ಲಿ ಯೋಜನೆಯನ್ನು ಕಂಪನಿ ಆರಂಭಿಸಿತ್ತು. ಎಚ್‌ಎಎಲ್ ಹಾಗೂ ಭಾರತ್ ಚಾರ್ಜ್‌ನಂತಹ ಕಂಪನಿಗಳ ಜತೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಇಲ್ಲಿವರೆಗೆ 9 ಕೋಟಿ ರು. ಖರ್ಚಾಗಿದೆ ಎಂದು ಇನ್‌ಟೆಕ್ ಕಂಪನಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಬಲರಾಮ್ ತಿಳಿಸಿದ್ದಾರೆ.

ಕಂಪನಿ ಅಭಿವೃದ್ಧಿಪಡಿಸಿರುವ ಜೆಟ್ ಎಂಜಿನ್‌ಗೆ ಎಂಜೆಇ-20 ಎಂದು ಹೆಸರಿಡಲಾಗಿದ್ದು, ಗ್ಯಾಸ್ ಟರ್ಬೈನ್ ಎಂಜಿನ್ ಇದಾಗಿದೆ. ಮಾನವರಹಿತ ವೈಮಾನಿಕ ನೌಕೆಗಳಿಗೆ ಈ ಎಂಜಿನ್ ಶಕ್ತಿ ಒದಗಿಸಬಲ್ಲದು. 2.16 ಕೆ.ಜಿ. ತೂಕವಿರುವ ಇದು, 20 ಕೆಜಿಯಷ್ಟು ಶಕ್ತಿಯನ್ನು ಕೊಡುತ್ತದೆ. ಆದರೆ ಮಿಲಿಟರಿ ದರ್ಜೆಯ ಡ್ರೋನ್‌ಗಳಿಗೆ ಈ ಎಂಜಿನ್ ಸಾಕಾಗದು.

Follow Us:
Download App:
  • android
  • ios