Asianet Suvarna News Asianet Suvarna News

ಬಾರದ ಪರಿಹಾರ: ರೈತ ಆತ್ಮಹತ್ಯೆ

ಹೆದ್ದಾರಿ ನಿರ್ಮಾಣಕ್ಕಾಗಿ ಪರಿಹಾರ ಮಾತ್ರ ಬಂದಿಲ್ಲ. ಹಿನ್ನಲೆಯಲ್ಲಿ ಸಿದ್ದಪ್ಪ ನನಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಸರಿಯಾಗಿ ಪರಿಹಾರ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ  ಡೆತ್ನೋಟ್ ಬರೆದಿದ್ದಾರೆ.

Farmer suicide at koppala

ಕೊಪ್ಪಳ(ಜು.19): ಕಳೆದುಕೊಂಡ ಭೂಮಿಗೆ ಸರಿಯಾಗಿ ಪರಿಹಾರ ಬಾರದ ಹಿನ್ನೆಲೆಯಲ್ಲಿ ಮನನೊಂದು ಕೊಪ್ಪಳ ಜಿಲ್ಲೆಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು 30 ವರ್ಷದ ಸಿದ್ದಪ್ಪ ಕರಡಿ ಆತ್ಮಹತ್ಯೆ ಮಾಡಿಕೊಂಡ ರೈತ. ಉಪ್ಪಲದಿನ್ನಿ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50 ರ ನಿರ್ಮಾಣಕ್ಕಾಗಿ ರೈತ ಸಿದ್ದಪ್ಪನಿಗೆ ಸೇರಿದ 1 ಎಕರೆ ಭೂಮಯಲ್ಲಿ32 ಗುಂಟೆ  ಸ್ವಾಧೀನವಾಗಿತ್ತು. ಮೊದಲನೆ ಕಂತಲ್ಲಿ ಕೇವಲ 75 ಸಾವಿರ ಪರಿಹಾರ ಬಂದಿತ್ತು. ಇನ್ನು ಹೆಚ್ಚಿನ ಪರಿಹಾರಕ್ಕಾಗಿ ಸಿದ್ದಪ್ಪ ಅರ್ಜಿ ಸಲ್ಲಿಸಿದ್ದ. ಆದರೆ ಹೆದ್ದಾರಿ ನಿರ್ಮಾಣಕ್ಕಾಗಿ ಪರಿಹಾರ ಮಾತ್ರ ಬಂದಿಲ್ಲ. ಈ ಹಿನ್ನಲೆಯಲ್ಲಿ ಸಿದ್ದಪ್ಪ ನನಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಸರಿಯಾಗಿ ಪರಿಹಾರ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ  ಡೆತ್‍ನೋಟ್ ಬರೆದಿದ್ದಾರೆ. ಜಮೀನಿನ ಮರವೊಂದಕ್ಕೆ ಸಿದ್ದಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ, ಪರಿಹಾರ ಬಂದಿದೆ. ಹೆಚ್ಚಿನ ಪರಿಹಾರ ಬರಬೇಕಿತ್ತು ಎಂದು ರೈತ ಸಿದ್ದಪ್ಪ ಹೇಳುತ್ತಿದ್ದ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸ್ಥಳಕ್ಕೆ ಬೇವೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.                       

Follow Us:
Download App:
  • android
  • ios