Asianet Suvarna News Asianet Suvarna News

ನಿಮ್ಮನ್ನು ಇಂದ್ರ ಚಂದ್ರ ಅಂತಂದು ದಾರಿ ತಪ್ಪಿಸ್ತಾರೆ ಹುಷಾರ್..! ಬಿಎಸ್ವೈಗೆ ಈಶ್ವರಪ್ಪ ಕಿವಿಮಾತು

ಬಿಜೆಪಿ ಪಕ್ಷವನ್ನು ಉಳಿಸುವುದೊಂದೇ ತಮ್ಮ ಗುರಿ. ತಂದೆ-ತಾಯಿಗೆ ಹುಟ್ಟಿದವರಾದ ತಾವು ಎಂದಿಗೂ ಪಕ್ಷವನ್ನು ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ, ಸೇರಲ್ಲ. ಕೊನೆಯುಸಿರು ಇರುವ ತನಕ ಬಿಜೆಪಿಯನ್ನು ಉಳಿಸ್ತೀವಿ. ಇದು ತಮ್ಮ ತೀರ್ಮಾನ ಎಂದು ಸಭೆಯಲ್ಲಿ ಕೆಎಸ್ ಈಶ್ವರಪ್ಪ ಪಣತೊಟ್ಟಿದ್ದಾರೆ. ಇದೇ ವೇಳೆ, ಮುಖಸ್ತುತಿ ಮಾಡುವವರ ಬಗ್ಗೆ ಎಚ್ಚರದಿಂದಿರುವಂತೆ ಯಡಿಯೂರಪ್ಪನವರಿಗೆ ಈ ವೇಳೆ ಈಶ್ವರಪ್ಪ ಕಿವಿಮಾತನ್ನೂ ಹೇಳಿದ್ದಾರೆ.

eshwarappa supporters meeting

ಬೆಂಗಳೂರು(ಏ. 27): ಬಿಎಸ್'ವೈ ಅತೃಪ್ತರ ಸಭೆಯಲ್ಲಿ ಕೆಲ ಹೊತ್ತು ಮಾರಾಮಾರಿ ಆದ ಘಟನೆ ವರದಿಯಾಗಿದೆ. ಬಿಎಸ್'ವೈ ಬೆಂಬಲಿಗ ಶಿವಕುಮಾರ್ ಎಂಬುವರನ್ನು ಸಭೆಯಿಂದ ಹೊರಹಾಕಲಾಯಿತು. ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆದಿದೆ. ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಮಾತನಾಡುವಾಗ ಯಡಿಯೂರಪ್ಪನವರ ವಿರುದ್ಧ ಆಡಿದ ಮಾತು ಬಿಎಸ್'ವೈ ಬೆಂಬಲಿಗ ಶಿವಕುಮಾರ್'ರನ್ನು ಕೆಣಕಿದೆ. ಇದರ ವಿರುದ್ಧ ಶಿವಕುಮಾರ್ ಸಭೆ ಮಧ್ಯದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲಿದ್ದ ಈಶ್ವರಪ್ಪ ಬೆಂಬಲಿಗರು ಶಿವಕುಮಾರ್'ರನ್ನು ಸಭೆಯಿಂದ ಹೊರಹಾಕಿದ್ದಾರೆ.

ಭಾನುಪ್ರಕಾಶ್ ಹೇಳಿದ್ದೇನು?
"ಮುಖ್ಯಮಂತ್ರಿಯಾಗಲು ಒಬ್ಬ ನಾಯಕ ಸಹಕಾರ ಕೊಡ್ತಾನೆ ಅಂತಂದ್ರೆ ಅದನ್ನ ಉಪಯೋಗ ಮಾಡಿಕೊಳ್ಳುವುದು ಜಾಣತನ. ಬಿಜೆಪಿಯ ದೌರ್ಭಾಗ್ಯ ಅಂತಂದ್ರೆ ರಾಯಣ್ಣ ಬ್ರಿಗೇಡನ್ನು ಶತ್ರು ಥರ ನೋಡುವ ಪರಿಪಾಠವಾಗಿದೆ. ಬ್ರಿಗೇಡ್'ಗೆ ಈಶ್ವರಪ್ಪ ಹೋದ್ರೂ ಕೂಡ, ಅವ್ರಿಗೂ ಕೂಡ ಶಿಸ್ತುಕ್ರಮ ಎದುರಿಸಬೇಕಾಗುತ್ತೆ ಅಂತ ಯಾವುದೋ 10 ಪಾರ್ಟಿ ಬದಲಾವಣೆ ಮಾಡಿದಂಥ ಅಯೋಗ್ಯ ನಾಯಕತ್ವ ಕೂಡ ಅದನ್ನು ಮಾತನಾಡುವಂಥ ಪರಿಸ್ಥಿತಿ ಬಂದಿದೆ" ಎಂದು ಯಡಿಯೂರಪ್ಪನವರ ಮೇಲೆ ಪರೋಕ್ಷವಾಗಿ ಎಂಎಲ್'ಸಿ ಭಾನುಪ್ರಕಾಶ್ ಹರಿಹಾಯ್ದರು. ಈ ಮಾತು ಕೂಡಲೇ ಶಿವಕುಮಾರ್ ಅವರನ್ನು ಕೆರಳಿಸಿದೆ. ಪಕ್ಷ ಹಾಗೂ ಯಡಿಯೂರಪ್ಪನವರ ವಿರುದ್ಧ ಮಾತನಾಡುವ ಹಕ್ಕು ತಮಗೆ ಯಾರು ಕೊಟ್ಟಿದ್ದೆಂದು ಪ್ರಶ್ನಿಸಿದ್ದಾರೆ.

ಈಶ್ವರಪ್ಪ ಕಿವಿಮಾತು:
ಬಿಜೆಪಿ ಪಕ್ಷವನ್ನು ಉಳಿಸುವುದೊಂದೇ ತಮ್ಮ ಗುರಿ. ತಂದೆ-ತಾಯಿಗೆ ಹುಟ್ಟಿದವರಾದ ತಾವು ಎಂದಿಗೂ ಪಕ್ಷವನ್ನು ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ, ಸೇರಲ್ಲ. ಕೊನೆಯುಸಿರು ಇರುವ ತನಕ ಬಿಜೆಪಿಯನ್ನು ಉಳಿಸ್ತೀವಿ. ಇದು ತಮ್ಮ ತೀರ್ಮಾನ ಎಂದು ಸಭೆಯಲ್ಲಿ ಕೆಎಸ್ ಈಶ್ವರಪ್ಪ ಪಣತೊಟ್ಟಿದ್ದಾರೆ. ಇದೇ ವೇಳೆ, ಮುಖಸ್ತುತಿ ಮಾಡುವವರ ಬಗ್ಗೆ ಎಚ್ಚರದಿಂದಿರುವಂತೆ ಯಡಿಯೂರಪ್ಪನವರಿಗೆ ಈ ವೇಳೆ ಈಶ್ವರಪ್ಪ ಕಿವಿಮಾತನ್ನೂ ಹೇಳಿದ್ದಾರೆ.

"ಯಡಿಯೂರಪ್ಪನವರಿಗೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ, ನಿಮ್ಮ ಸುತ್ತಮುತ್ತಲೂ ಇರುವ ಜನರು ನಿಮ್ಮನ್ನು ಇಂದ್ರ, ಚಂದ್ರ, ದೇವೇಂದ್ರ ಅಂತ ಹೊಗಳುತ್ತಾರೆ... ನಿಮ್ಮನ್ನು ಮತ್ತೆ ದಾರಿ ತಪ್ಪಿಸಬಹುದು.. ಹುಷಾರ್..! ಒಂದು ಸಾರಿ ಕೆಜೆಪಿ ಕಟ್ಟಿಸಿ ಮಣ್ಣು ಮುಕ್ಕಿಸಿದರು. ಮುಂದೆ ಏನು ಮಾಡ್ತಾರೋ ಗೊತ್ತಿಲ್ಲ," ಎಂದು ಈಶ್ವರಪ್ಪ ಎಚ್ಚರಿಸಿದ್ದಾರೆ.

ಯಡಿಯೂರಪ್ಪನವರೇ, ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಇನ್ಮುಂದೆ ಸಾಧ್ಯವಿಲ್ಲ. ನಾನು ನಾಯಿ ನರಿಗಳಲ್ಲ. ಹುಲಿಗಳು.. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ಕೊಡಿ ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

Follow Us:
Download App:
  • android
  • ios