Asianet Suvarna News Asianet Suvarna News

(ವಿಡಿಯೋ) ಮುಳುಗುತ್ತಿದ್ದ ತರಬೇತುದಾರನನ್ನು ರಕ್ಷಿಸಲು ನದಿಗೆ ಹಾರಿದ ಆನೆ ಮರಿ

ಉತ್ತರ ಥಾಯ್ಲೆಂಡ್'ನ ಎಲಿಫೆಂಟ್ ನೇಚರ್ ಪಾರ್ಕ್'​ನಲ್ಲಿ ಅನೆಗಳ ತರಬೇತುದಾರ ಡಾರ್ರಿಕ್ ಈಜಲು ನೀರಿಗೆ ಇಳಿದ. ನೀರಿನ ಪ್ರವಾಹವೂ ಜೋರಾಗಿತ್ತು. ಇದನ್ನು ಖಾಮ್ ಲ್ಹಾ ಎಂಬ ಹೆಣ್ಣು ಮರಿಯಾನೆ ನೋಡಿತ್ತು. ಕೂಡಲೇ ನದಿಗೆ ಇಳಿದು ನದಿಯಲ್ಲಿ ಈಜಾಡುತ್ತಿದ್ದ ಡಾರ್ರಿಕ್ ನೀರಿನಲ್ಲಿ ಮುಳುಗಿ ಸಾಯುತ್ತಾನೆ ಎಂದು ಭಾವಿಸಿ ಪ್ರವಾಹವನ್ನೂ ಲೆಕ್ಕಿಸದೇ ಆತನ ಬಳಿ ಧಾವಿಸಿ ಆತನನ್ನು ರಕ್ಷಿಸಲು ಯತ್ನಿಸಿದೆ.

elephant rushes to save drowning human friend in video gone viral

ಬ್ಯಾಂಕಾಕ್(ಅ.22): ಗಂಡಾಂತರದಲ್ಲಿ ಸಿಲುಕಿದ ಪ್ರಾಣಿಗಳನ್ನು ಮನುಷ್ಯರು ರಕ್ಷಿಸುವುದು ಸಾಮಾನ್ಯ ಸಂಗತಿ. ಆದರೆ, ಅಪಾಯದಲ್ಲಿರುವ ಮಾನವನ ಜೀವ ಉಳಿಸಲು ಪ್ರಾಣಿಗಳೂ ಮುಂದಾಗಿರುವ ಪ್ರಕರಣಗಳು ತುಂಬ  ವಿರಳ. ವಿರಳವಾದರೂ ಅಚ್ಚರಿಪಡಿಸುವ ಘಟನೆಯೊಂದು ಥಾಯ್ಲೆಂಡ್'ನಲ್ಲಿ ನಡೆದಿದೆ.

ಉತ್ತರ ಥಾಯ್ಲೆಂಡ್'ನ ಎಲಿಫೆಂಟ್ ನೇಚರ್ ಪಾರ್ಕ್'​ನಲ್ಲಿ ಅನೆಗಳ ತರಬೇತುದಾರ ಡಾರ್ರಿಕ್ ಈಜಲು ನೀರಿಗೆ ಇಳಿದ. ನೀರಿನ ಪ್ರವಾಹವೂ ಜೋರಾಗಿತ್ತು. ಇದನ್ನು ಖಾಮ್ ಲ್ಹಾ ಎಂಬ ಹೆಣ್ಣು ಮರಿಯಾನೆ ನೋಡಿತ್ತು. ಕೂಡಲೇ ನದಿಗೆ ಇಳಿದು ನದಿಯಲ್ಲಿ ಈಜಾಡುತ್ತಿದ್ದ ಡಾರ್ರಿಕ್ ನೀರಿನಲ್ಲಿ ಮುಳುಗಿ ಸಾಯುತ್ತಾನೆ ಎಂದು ಭಾವಿಸಿ ಪ್ರವಾಹವನ್ನೂ ಲೆಕ್ಕಿಸದೇ ಆತನ ಬಳಿ ಧಾವಿಸಿ ಆತನನ್ನು ರಕ್ಷಿಸಲು ಯತ್ನಿಸಿದೆ.

ಆನೆ ಮರಿಯ ಕಾಳಜಿಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.

Follow Us:
Download App:
  • android
  • ios