Asianet Suvarna News Asianet Suvarna News

ಸುಮಾತ್ರಾ ದ್ವೀಪದಲ್ಲಿ ಭೂಕಂಪ: 50ಕ್ಕೂ ಹೆಚ್ಚು ಸಾವು

ಅಮೆರಿಕದ ಭೂಸರ್ವೇಕ್ಷಣಾ ಇಲಾಖೆಯ ಮಾಹಿತಿ ಪ್ರಕಾರ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.5 ದಾಖಲಾಗಿದೆ.

earthquake in indonesia

ಬಂಡಾ ಆಚೆ(ಡಿ. 07): ಇಂಡೋನೇಷ್ಯಾ ದೇಶದ ಸುಮಾತ್ರಾ ದ್ವೀಪದ ಬಳಿ ಪ್ರಬಲ ಭೂಕಂಪವಾಗಿದ್ದು, 50ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಭೂಕಂಪದ ತೀವ್ರತೆಗೆ ನೂರಕ್ಕೂ ಹೆಚ್ಚು ಕಟ್ಟಡಗಳು ಧರೆಗುರುಳಿವೆ. ಇನ್ನೂ ಸಾಕಷ್ಟು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಭೀತಿ ಇದೆ.

ಅಮೆರಿಕದ ಭೂಸರ್ವೇಕ್ಷಣಾ ಇಲಾಖೆಯ ಮಾಹಿತಿ ಪ್ರಕಾರ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.5 ದಾಖಲಾಗಿದೆ. ಮುಸ್ಲಿಮರು ಮಸೀದಿಯಲ್ಲಿ ನಮಾಜು ಮಾಡುವ ಘಳಿಗೆಯಲ್ಲಿ ಭೂಕಂಪ ಸಂಭವಿಸಿದೆ. ನೆಲಕ್ಕುರುಳಿದ ಕಟ್ಟಡಗಳ ಪೈಕಿ ಕೆಲ ಮಸೀದಿಗಳೂ ಸೇರಿವೆ ಎಂದು ಇಂಡೋನೇಷ್ಯಾದ ಅಧಿಕಾರಿಗಳು ಹೇಳಿದ್ದಾರೆ.

2004ರಲ್ಲಿ ಇದೇ ಸುಮಾತ್ರಾ ದ್ವೀಪದ ಬಳಿ 8.5 ತೀವ್ರತೆಗೆ ಭೂಕಂಪವಾಗಿ ದೊಡ್ಡ ಸುನಾಮಿ ಸೃಷ್ಟಿಯಾಗಿತ್ತು. ಆಗ ಭಾರತದ ಪೂರ್ವಭಾಗದ ಕರಾವಳಿಯಲ್ಲಿ ದೈತ್ಯ ಅಲೆಗಳಿಂದ ಸಾವಿರಾರು ಜನರು ಸಾವನ್ನಪ್ಪಿದ್ದರು. ಜಪಾನ್, ಆಸ್ಟ್ರೇಲಿಯಾ, ಫಿಲಿಪ್ಪೈನ್ಸ್ ಮೊದಲಾದ ದೇಶಗಳಲ್ಲಿ ಆಗ ಸುನಾಮಿ ಹೊಡೆತಕ್ಕೆ ಸಾಕಷ್ಟು ಜನರು ಸಾವನ್ನಪಿದ್ದರು.

Follow Us:
Download App:
  • android
  • ios