Asianet Suvarna News Asianet Suvarna News

ಡಿಎಂಕೆ ಪಕ್ಷದ ಉತ್ತರಾಧಿಕಾರಿಯಾಗಿ ಸ್ಟಾಲಿನ್

93 ವಯಸ್ಸಿನ ಕರುಣಾನಿಧಿಯವರು ಕಳೆದ ಹಲವು ವರ್ಷಗಳಿಂದ ತಮಿಳುನಾಡಿನಲ್ಲಿ  ಡಿಎಂಕೆ ಪಕ್ಷದ ವರಿಷ್ಠರಾಗಿ ಪಕ್ಷವನ್ನ ಮುನ್ನಡೆಸಿದ್ದರು

DMK appoint Next successer

ಚೆನ್ನೈ(ಅ.20): ತಮಿಳ್ನಾಡು ಸಿಎಂ ಜಯಲಲಿತಾ ಆಸ್ಪತ್ರೆ ಸೇರಿ 30 ದಿನಗಳಾಗಿವೆ. ಆದರೂ  ಎಐಡಿಎಂಕೆಯಲ್ಲಿ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಸಿಕ್ಕಿಲ್ಲ ಉತ್ತರ. ಈ ಮಧ್ಯೆ ಡಿಎಂಕೆ ನಾಯಕ ಕರುಣಾನಿಧಿ ಪಕ್ಷದ ಉತ್ತರಾಧಿಕಾರಿ ಹೆಸರನ್ನ ಆಧಿಕೃತವಾಗಿ ಘೋಷಿಸಿದ್ದಾರೆ. ಉತ್ತರಾಧಿಕಾರಿಯಾಗಿ ಕಿರಿಯ ಪುತ್ರ ಸ್ಟಾಲೀನ್​ ಅವರನ್ನ ನೇಮಕ ಮಾಡಿದ್ದಾರೆ.​ಈ ಮೂಲಕ ಪಕ್ಷದ ಅಧಿಕಾರವನ್ನ ಸ್ಟಾಲೀನ್​ಗೆ ಇಂದು ಹಸ್ತಾಂತರಿಸಿದ್ದಾರೆ. 93 ವಯಸ್ಸಿನ ಕರುಣಾನಿಧಿಯವರು ಕಳೆದ ಹಲವು ವರ್ಷಗಳಿಂದ ತಮಿಳುನಾಡಿನಲ್ಲಿ  ಡಿಎಂಕೆ ಪಕ್ಷದ ವರಿಷ್ಠರಾಗಿ ಪಕ್ಷವನ್ನ ಮುನ್ನಡೆಸಿದ್ದರು. ಇದೀಗ ಡಿಎಂಕೆ ಪಕ್ಷದ ಜವಾಬ್ದಾರಿಯನ್ನ ಎರಡನೇ ಪುತ್ರ ಸ್ಟಾಲಿನ್​ಗೆ ವಹಿಸಿ ಪಟ್ಟಾಭಿಷೇಕ ಮಾಡಲಾಗಿದೆ. ಈ ಹಿಂದೆಯೇ ಇದರ ಸುಳಿವು ಸಿಕ್ಕಿದ್ದ ಕಾರಣ ಹಿರಿಯ ಪುತ್ರ ಸಂಸದ ಅಳಗಿರಿ ಅಪ್ಪನ ವಿರುದ್ಧ ಸಿಟ್ಟಿಗೆದ್ದಿದ್ದರು. ಈ ಕಾರಣಕ್ಕೆ ಡಿಎಂಕೆ ಹೋಳಾಗುತ್ತಾ ಅನ್ನೋ ಮಾತುಗಳು ಕೇಳ್ ಬರ್ತಿವೆ.

Follow Us:
Download App:
  • android
  • ios