Asianet Suvarna News Asianet Suvarna News

ನೂರಾರು ಹೆಣ್ಣುಮಕ್ಕಳನ್ನ ಕಾಮತೃಷೆಗೆ ಬಳಸಿಕೊಂಡಿದ್ದ ಟೈಲರ್ ಅರೆಸ್ಟ್

ನಿಮ್ಮ ಪೋಷಕರು ನಿಮಗೆ ಬಟ್ಟೆ ಕೊಡಲು ತಿಳಿಸಿದ್ದಾರೆ ಎಂದು ಅಪ್ರಾಪ್ತ ಬಾಲಕಿಯರನ್ನ ಪುಸಲಾಯಿಸುತ್ತಿದ್ದ ಟೈಲರ್, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ವಿಚಾರಣೆ ವೇಳೆ ಟೈಲರ್ ಬಾಯ್ಬಿಟ್ಟ ಕಾಮಚೇಷ್ಟೆಗಳ ರಂಗಿನಾಟವನ್ನ ಕೇಳಿದ ಪೊಲೀಸರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. 2006ರಲ್ಲಿ ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ 6 ತಿಂಗಳೂ ಶಿಕ್ಷೆಯನ್ನೂ ಅನುಭವಿಸಿರುವ ಟೈಲರ್ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾನೆ.

delhi tailor arrested on sexual harrassment case

ನವದೆಹಲಿ(ಜ.16): ನೂರಾರು ಹೆಣ್ಣುಮಕ್ಕಳನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದ 38 ವರ್ಷದ ಸುನಿಲ್ ರಸ್ಟೋಗಿ ಎಂಬುವವರನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್`ನಲ್ಲಿ ಮೂವರು ಹುಡುಗಿಯರ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದ ಆರೋಪದಡಿ ಬಂಧಿಸಿದಾಗ ಕಾಮುಕ ಟೈಲರ್ ಇತಿಹಾಸ ಬೆಳಕಿಗೆ ಬಂದಿದೆ.

ನಿಮ್ಮ ಪೋಷಕರು ನಿಮಗೆ ಬಟ್ಟೆ ಕೊಡಲು ತಿಳಿಸಿದ್ದಾರೆ ಎಂದು ಅಪ್ರಾಪ್ತ ಬಾಲಕಿಯರನ್ನ ಪುಸಲಾಯಿಸುತ್ತಿದ್ದ ಟೈಲರ್, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ. ವಿಚಾರಣೆ ವೇಳೆ ಟೈಲರ್ ಬಾಯ್ಬಿಟ್ಟ ಕಾಮಚೇಷ್ಟೆಗಳ ರಂಗಿನಾಟವನ್ನ ಕೇಳಿದ ಪೊಲೀಸರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. 2006ರಲ್ಲಿ ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ 6 ತಿಂಗಳೂ ಶಿಕ್ಷೆಯನ್ನೂ ಅನುಭವಿಸಿರುವ ಟೈಲರ್ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾನೆ.

`7ರಿಂದ 10 ವರ್ಷದ ಬಾಲಕಿಯರನ್ನ ಟಾರ್ಗೆಟ್ ಮಾಡುತ್ತಿದ್ದ ಈತ ಮನೆಗೆ ತೆರಳುವುದನ್ನ ಗಮನಿಸುತ್ತಿದ್ದ. ಬಳಿಕ ಅವರನ್ನ ದಾರಿತಪ್ಪಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತನ್ನ ಕೆಲಸ ಮುಗಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ಧಾರೆ.