Asianet Suvarna News Asianet Suvarna News

ದಿಲ್ಲಿ ಚುನಾವಣೋತ್ತರ ಸಮೀಕ್ಷೆ: ಬಿಜೆಪಿಗೆ ಭರ್ಜರಿ ಜಯ; ಕೇಜ್ರಿವಾಲ್'ಗೆ ಹೀನಾಯ ಸೋಲು?

ಏಪ್ರಿಲ್ 26ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತದಾರ ಬರೆದ ನಿಜವಾದ ಭವಿಷ್ಯ ಅಂದು ಅನಾವರಣಗೊಳ್ಳಲಿದೆ.

delhi mcd exit polls predict bjp victory

ನವದೆಹಲಿ(ಏ. 23): ಪಂಚರಾಜ್ಯ ಚುನಾವಣೆ ಬಳಿಕ ಅತೀ ಹೆಚ್ಚು ಕುತೂಹಲ ಮೂಡಿಸಿದ್ದ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಇಂದು ಮತದಾನವಾಗಿದೆ. ಶೇ.50-55ರಷ್ಟು ಮತದಾನವಾಗಿರುವ ಮಾಹಿತಿ ಸದ್ಯಕ್ಕೆ ಲಭಿಸಿದೆ. ಒಟ್ಟು 272 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಮತಗಟ್ಟೆ ಸಮೀಕ್ಷೆಗಳೂ ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಪೂರ್ಣಬಹುಮತ ದೊರಕುವ ಸೂಚನೆ ನೀಡಿವೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳಿಗೆ ಮುಖಭಂಗವಾಗುವ ಅಂದಾಜಿದೆ.

ಆಕ್ಸಿಸ್-ಇಂಡಿಯಾ ಟುಡೇ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ 272 ಕ್ಷೇತ್ರಗಳ ಪೈಕಿ ಬಿಜೆಪಿ 202-220 ಸ್ಥಾನಗಳನ್ನ ಗೆಲ್ಲಬಹುದು. ಆಪ್ 23-35, ಕಾಂಗ್ರೆಸ್ 19-31 ಸ್ಥಾನಗಳನ್ನು ಪಡೆಯಬಹುದೆನ್ನಲಾಗಿದೆ. ಇನ್ನು, ಎಬಿಪಿ ನ್ಯೂಸ್ ಸಮೀಕ್ಷೆ ಪ್ರಕಾರ, ಬಿಜೆಪಿ 218 ಸ್ಥಾನಗಳನ್ನು ಗೆದ್ದು ಪಾಲಿಕೆಯ ಅಧಿಕಾರವನ್ನು ಮತ್ತೊಮ್ಮೆ ಹಿಡಿಯಬಹುದು.

ಏಪ್ರಿಲ್ 26ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತದಾರ ಬರೆದ ನಿಜವಾದ ಭವಿಷ್ಯ ಅಂದು ಅನಾವರಣಗೊಳ್ಳಲಿದೆ.

ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ (ಒಟ್ಟು ಸ್ಥಾನ: 272):

ಆ್ಯಕ್ಸಿಸ್-ಇಂಡಿಯಾ ಟುಡೇ ಸಮೀಕ್ಷೆ:
ಬಿಜೆಪಿ: 202-220
ಎಎಪಿ: 23-35
ಕಾಂಗ್ರೆಸ್: 19-31
ಇತರೆ: 2-8

ಎಬಿಪಿ ನ್ಯೂಸ್ ಸಮೀಕ್ಷೆ:
ಬಿಜೆಪಿ: 218
ಎಎಪಿ: 24
ಕಾಂಗ್ರೆಸ್: 22
ಇತರೆ: 5

2012ರ ಚುನಾವಣೆಯಲ್ಲಿ ಏನಿತ್ತು ಫಲಿತಾಂಶ?
ಬಿಜೆಪಿ: 142
ಕಾಂಗ್ರೆಸ್: 77
ಬಿಎಸ್'ಪಿ: 15
ಇತರೆ: 38

ಭಾರತೀಯ ಜನತಾ ಪಕ್ಷ ಈ ಹಿಂದೆ ಸತತ ಎರಡು ಬಾರಿ ಪಾಲಿಕೆ ಗದ್ದುಗೆ ಹಿಡಿದುಕೊಂಡಿದೆ. ಈ ಬಾರಿ ಗೆದ್ದರೆ ಕೇಸರಿ ಪಾಳಯಕ್ಕೆ ಹ್ಯಾಟ್ರಿಕ್ ಗೌರವ ಲಭಿಸಲಿದೆ.

ದಿಲ್ಲಿಯ ರಾಜಕಾರಣಕ್ಕೆ ಆಮ್ ಆದ್ಮಿ ಪಕ್ಷವು ಕೆಲ ವರ್ಷಗಳ ಹಿಂದೆ ದಿಢೀರ್ ಬಿರುಗಾಳಿಯಂತೆ ಆಗಮಿಸಿದೆ. ಎಲ್ಲರೂ ನೋಡನೋಡುತ್ತಿದ್ದಂತೆಯೇ ರಾಜ್ಯದ ಅಧಿಕಾರ ಹಿಡಿದುಕೊಂಡೇ ಬಿಟ್ಟಿತ್ತು. ಜನರಿಗೆ ಹೊಸ ಆಶಾಕಿರಣ ಮೂಡಿಸುವ ಭರವಸೆ ನೀಡಿದ್ದ ಆಮ್ ಆದ್ಮಿಯು ಜನರ ನಿರೀಕ್ಷೆಯನ್ನು ಉಳಿಸಿಕೊಂಡಿದೆಯೋ ಇಲ್ಲವೋ ಎಂಬುದು ಇವತ್ತಿನ ಎಂಸಿಡಿ ಚುನಾವಣೆಯ ಫಲಿತಾಂಶದಿಂದ ಗೊತ್ತಾಗಬಹುದು.

Follow Us:
Download App:
  • android
  • ios