Asianet Suvarna News Asianet Suvarna News

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಈಗ ಸರ್ಕಾರಿ ಸ್ವತ್ತು

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರೊ ಸರ್ಕಾರಿ ಬಿ-ಖರಾಬು ಭೂಮಿಯ ಒತ್ತುವರಿ ಜಾಗದಲ್ಲಿ ನಟ ದರ್ಶನ್​ ಮನೆ ಇತ್ತು. ಸತತ 3 ತಿಂಗಳ ನೋಟಿಸ್​, ವಾದ-ವಿವಾದಗಳು ನಡೆದ ಬಳಿಕ ಇಂದು ದರ್ಶನ್​ ಮನೆ ಮೇಲೆ 20 ಗುಂಟೆಯ ಈ ಜಾಗ ಸರ್ಕಾರಿ ಖರಾಬಿಗೆ ಸೇರಿದ್ದು, ಈ ಆಸ್ತಿ ಸರ್ಕಾರಕ್ಕೆ ಸೇರಿದೆ ಅಂತಾ ಬರೆಯುವ ಮೂಲಕ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ.

darshan property is auquired by government

ಬೆಂಗಳೂರು(ಅ.22): ಒತ್ತುವರಿದಾರರ ವಿರುದ್ದ ಸಮರ ಸಾರಿದ್ದ ಸುವರ್ಣನ್ಯೂಸ್​ ಪ್ರಯತ್ನಕ್ಕೆ ಕೊನೆಗೂ ಜಯ ಸಿಕ್ಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಸೇರಿದಂತೆ 24 ಆಸ್ತಿಗಳನ್ನ ಸರ್ಕಾರ ವಶಕ್ಕೆ ಪಡೆದಿದೆ.

ಬೆಂಗಳೂರಿನಲ್ಲಿ  ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ಧ  ಪಾಲಿಕೆ ಹಲವು ಕಡೆ ತೆರವು ಕಾರ್ಯ ನಡೆಸಿತ್ತು. ಆದರೆ, ನಟ ದರ್ಶನ್​ ಮನೆ ಹಾಗೂ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪನವರ ಒಡೆತನದ ಎಸ್​ಎಸ್​ ಆಸ್ಪತ್ರೆಯನ್ನ ತೆರೆಮರೆಯಲ್ಲಿ ರಕ್ಷಿಸುವ ಕೆಲಸ ಮಾಡಲಾಗುತ್ತಿತ್ತು.  ಈ ನಡುವೆ ಸುವರ್ಣನ್ಯೂಸ್ ದೊಡ್ಡವರಿಗೆ ಚಾಲೆಂಜ್​ ಎನ್ನುವ ಅಭಿಯಾನದಡಿ ನಿರಂತರ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ​ ಜಿಲ್ಲಾಡಳಿತ ದರ್ಶನ್​ ಮನೆಯನ್ನ ತನ್ನ ವಶಕ್ಕೆ ಪಡೆದಿದೆ.

ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರೊ ಸರ್ಕಾರಿ ಬಿ-ಖರಾಬು ಭೂಮಿಯ ಒತ್ತುವರಿ ಜಾಗದಲ್ಲಿ ನಟ ದರ್ಶನ್​ ಮನೆ ಇತ್ತು. ಸತತ 3 ತಿಂಗಳ ನೋಟಿಸ್​, ವಾದ-ವಿವಾದಗಳು ನಡೆದ ಬಳಿಕ ಇಂದು ದರ್ಶನ್​ ಮನೆ ಮೇಲೆ 20 ಗುಂಟೆಯ ಈ ಜಾಗ ಸರ್ಕಾರಿ ಖರಾಬಿಗೆ ಸೇರಿದ್ದು, ಈ ಆಸ್ತಿ ಸರ್ಕಾರಕ್ಕೆ ಸೇರಿದೆ ಅಂತಾ ಬರೆಯುವ ಮೂಲಕ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ.

ಈ ನಡುವೆ ನಿನ್ನೆ ಎಸ್​ ಎಸ್ ಆಸ್ಪತ್ರೆ ಹಾಗೂ 44 ಮಂದಿ ಒತ್ತುವರಿದಾರರು ಕೋರ್ಟ್ ಮೊರೆಹೋಗಿ ತಮ್ಮ ದಾಖಲೆಗಳನ್ನ ಮರುಪರಿಶೀಲನೆ ಮಾಡಲು ಕಾಲವಾಕಾಶ ಕೇಳಿದ್ದರು. ಅದರಂತೆ ಸದ್ಯ 4 ವಾರಗಳು ಒತ್ತುವರಿದಾರರಿಗೆ ರಿಲೀಫ್ ಸಿಕ್ಕಿದೆ. ಉಳಿದಂತೆ 24 ಆಸ್ತಿಗಳು ಸರ್ಕಾರಿ ಸ್ವತ್ತು ಎಂದು ಬರೆಯುವ ಮೂಲಕ ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಇದರಲ್ಲಿ ನಟ ದರ್ಶನ್​ ಮನೆ ಕೂಡ ಸೇರಿದೆ.