ಸುವರ್ಣ ನ್ಯೂಸ್ ಎಕ್ಸ್’ಕ್ಲೂಸಿವ್: ಗೋವಿಂದರಾಜು ಡೈರಿ ಸೋರಿಕೆಯಾಗಿದ್ದು ಹೀಗೆ
news
By Suvarna Web Desk | 08:53 AM March 20, 2017

ಐಟಿ ದಾಳಿ ವೇಳೆ ಡೈರಿ ಸಿಕ್ಕಿದ್ದು ನಿಜವಾಗಿದ್ದು, ಡೈರಿಯಲ್ಲಿದ್ದ ಕೋಟಿ ಕೋಟಿ ಹಣದ ಮಾಹಿತಿ ನೋಡಿ ವಶಪಡಿಸಿಕೊಳ್ಳಲಾಗಿತ್ತು. ಡೈರಿಯನ್ನು ಗೋವಿಂದರಾಜು ಅವರಿಂದ ಸಹಿ ಪಡೆದುಕೊಂಡು ಅಧಿಕೃತವಾಗಿ ವಶಕ್ಕೆ ಪಡೆಯಲಾಗಿತ್ತು.

ಬೆಂಗಳೂರು (ಮಾ.20): ಕರ್ನಾಟಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಗೋವಿಂದರಾಜು ಡೈರಿ ಪ್ರಕರಣದ ಬಗ್ಗೆ ಸುವರ್ಣ ನ್ಯೂಸ್’ಗೆ ಎಕ್ಸ್’ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.

ಶಾಸಕ ಗೋವಿಂದರಾಜು ಮನೆ ಮೇಲೆ ಐಟಿ ದಾಳಿ ಸಂದರ್ಭದಲ್ಲಿ ವಶಪಡಿಸಲಾಗಿದ್ದ ಡೈರಿ ಸೋರಿಕೆಯಾಗಿದ್ದು ಹೇಗೆ ಎಂಬುವುದರ ಬಗ್ಗೆ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ.

ಐಟಿ ದಾಳಿ ವೇಳೆ ಡೈರಿ ಸಿಕ್ಕಿದ್ದು ನಿಜವಾಗಿದ್ದು, ಡೈರಿಯಲ್ಲಿದ್ದ ಕೋಟಿ ಕೋಟಿ ಹಣದ ಮಾಹಿತಿ ನೋಡಿ ವಶಪಡಿಸಿಕೊಳ್ಳಲಾಗಿತ್ತು.

ಡೈರಿಯನ್ನು ಗೋವಿಂದರಾಜು ಅವರಿಂದ ಸಹಿ ಪಡೆದುಕೊಂಡು ಅಧಿಕೃತವಾಗಿ ವಶಕ್ಕೆ ಪಡೆಯಲಾಗಿತ್ತು.

ಆದರೆ ಡೈರಿ ರಾಜ್ಯ ಐಟಿ ವಿಭಾಗದಿಂದ ಸೋರಿಕೆಯಾಗಿಲ್ಲ. ತನಿಖಾ ಉದ್ದೇಶದಿಂದ ಗೋವಿಂದರಾಜು ಮನೆಯಿಂದ ವಶಪಡಿಸಿಕೊಳ್ಳಲಾದ ಎಲ್ಲ ವಸ್ತುಗಳನ್ನು ದೆಹಲಿ ಕೇಂದ್ರ ಕಚೇರಿಗೆ ಕಳಿಸಿಕೊಡಲಾಗಿತ್ತು. ಆ ವಸ್ತುಗಳಲ್ಲಿ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿ ಕೂಡ ಇತ್ತು. ಈಗ ಲಭಿಸಿರುವ ಮಾಹಿತಿ ಪ್ರಕಾರ ಡೈರಿ ಲೀಕ್ ಆಗಿದ್ದು ದೆಹಲಿಯ ಐಟಿ ಕೇಂದ್ರ ಕಚೇರಿಯಿಂದನೇ ಆ.

ಕೇಂದ್ರ ಕಚೇರಿಯ ತನಿಖಾ ವಿಭಾಗದ ಅಧಿಕಾರಿಯೊಬ್ಬರಿಂದ ಡೈರಿ ಲೀಕ್ ಆಗಿದೆ ಎಂದು ತಿಳಿದುಬಂದಿದೆ. ಡೈರಿ ಸೋರಿಕೆ ಮಾಡಿರುವ ಅಧಿಕಾರಿ ಬಿಜೆಪಿ ಮುಖಂಡರಿಗೆ ಆಪ್ತರಾಗಿದ್ದಾರೆ ಎಂದು ಸುವರ್ಣ ನ್ಯೂಸ್’ಗೆ ಐಟಿ ಇಲಾಖೆ ಮೂಲಗಳು ತಿಳಿಸಿವೆ.

Show Full Article