Asianet Suvarna News Asianet Suvarna News

ಮತ್ತೆ ಬಿಎಸ್‍'ವೈ ಮತ್ತು ಈಶ್ವರಪ್ಪ ವಾರ್: ಬಂಡಾಯದ ನಾಯಕರ ವಿರುದ್ಧ ಕ್ರಮಕ್ಕೆ ಮುಂದಾದ ಹೈಕಮಾಂಡ್

ಬಿಜೆಪಿಯ ಅತೃಪ್ತ ನಾಯಕರ ‘ಸಂಘಟನೆ ಉಳಿಸಿ’ ಸಮಾವೇಶ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ರಾಜ್ಯ ಬಿಜೆಪಿಯ ವಿರೋಧದ ನಡುವೆಯೂ ನಡೆಯುತ್ತಿರುವ ಭಿನ್ನಮತೀಯ ನಾಯಕರ ಸಮಾವೇಶದಲ್ಲಿ ಯಾರೆಲ್ಲ ಭಾಗವಹಿಸ್ತಾರಾ? ಭಾಗವಹಿಸಿದರೆ ಪರಿಣಾಮ ಏನಾಗಬಹುದು? ಬಿಜೆಪಿ ರಾಷ್ಟ್ರೀಯ ನಾಯಕರು ಈ ಸಮಾವೇಶದ ಮೇಲೆ ಕಣ್ಣಿಟ್ಟಿದ್ದಾರಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ವರದಿ ಇಲ್ಲಿದೆ.

Cold War Between BSY and Yadyurappa Started Again

ಬೆಂಗಳೂರು(ಎ.27): ಬಿಜೆಪಿಯ ಅತೃಪ್ತ ನಾಯಕರ ‘ಸಂಘಟನೆ ಉಳಿಸಿ’ ಸಮಾವೇಶ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ರಾಜ್ಯ ಬಿಜೆಪಿಯ ವಿರೋಧದ ನಡುವೆಯೂ ನಡೆಯುತ್ತಿರುವ ಭಿನ್ನಮತೀಯ ನಾಯಕರ ಸಮಾವೇಶದಲ್ಲಿ ಯಾರೆಲ್ಲ ಭಾಗವಹಿಸ್ತಾರಾ? ಭಾಗವಹಿಸಿದರೆ ಪರಿಣಾಮ ಏನಾಗಬಹುದು? ಬಿಜೆಪಿ ರಾಷ್ಟ್ರೀಯ ನಾಯಕರು ಈ ಸಮಾವೇಶದ ಮೇಲೆ ಕಣ್ಣಿಟ್ಟಿದ್ದಾರಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ವರದಿ ಇಲ್ಲಿದೆ.

ಬಿಜೆಪಿ ಅತೃಪ್ತ ನಾಯಕರ ‘ಸಂಘಟನೆ ಉಳಿಸಿ’ ಸಮಾವೇಶ ಇಂದು ಅರಮನೆ ಮೈದಾನದಲ್ಲಿ ನಡೆಯಲಿದೆ. ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿಯ ಅತೃಪ್ತ ನಾಯಕರೆಲ್ಲ ಒಗ್ಗೂಡಿ ಯಡಿಯೂರಪ್ಪ ವಿರುದ್ಧ ತೊಡೆತಟ್ಟಲು ಸಿದ್ದರಾಗಿದ್ದಾರೆ. ಆದರೆ ಈ ಅತೃಪ್ತರ ಸಮಾವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ, ಸಮಾವೇಶಕ್ಕೆ ಹೋಗದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರಿಗೆ ಎಚ್ಚರಿಕೆ ನೀಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಮನಕ್ಕೂ ಈ ವಿಚಾರ ಹೋಗಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ ರಾವ್ ಮೂಲಕ ಸಭೆಗೆ ಹೋಗದಂತೆ ಎಚ್ಚರಿಕೆ ರವಾನಿಸಿದ್ದಾರೆ. ಇನ್ನು, ಸಮಾವೇಶದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗೋಷ್ಟಿ ನಡೆಸಿದ ಮಾಜಿ ಸಚಿವ, ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ,  ಬಿಜೆಪಿಯ ಅತೃಪ್ತ ನಾಯಕರ ಸಭೆಗೆ ಈಶ್ವರಪ್ಪನವರಾಗಲೀ, ಪಕ್ಷದ ಯಾವುದೇ ನಾಯಕರೂ ಹೋಗಬಾರದು. ಹೋದರೆ ಶಿಸ್ತು ಕ್ರಮ ಖಂಡಿತ, ಇದು ಎಚ್ಚರಿಕೆ ಅಂತ ಹೇಳಿದ್ದಾರೆ.

ಈಶ್ವರಪ್ಪನವರಿಗೆ ಖಡಕ್ ಎಚ್ಚರಿಕೆಯನ್ನೇ ನೀಡಿದ ಬಿ.ಜೆ. ಪುಟ್ಟಸ್ವಾಮಿ, ಈಶ್ವರಪ್ಪನವರ ಮುಂದೆ ಎರಡು ಆಯ್ಕೆಗಳಿವೆ. ಒಂದೋ ಬಿಜೆಪಿ ಆಯ್ಕೆ ಮಾಡಿಕೊಳ್ಳಲಿ, ಇಲ್ಲವೇ ಬ್ರಿಗೇಡ್ ಆಯ್ಕೆ ಮಾಡಿಕೊಳ್ಳಲಿ ಅಂತ ಖಡಕ್ಕಾಗಿ ಹೇಳಿದ್ದಾರೆ. ಮತ್ತೊಂದೆಡೆ ಮುಂದೆ ಎದುರಾಗಬಹುದಾದ ಶಿಸ್ತುಕ್ರಮ ತಪ್ಪಿಸಿಕೊಳ್ಳಲು ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸುವ ಯತ್ನ ನಡೆದಿದ್ದು, ಪ್ರಚಾರ ಪತ್ರದಲ್ಲಿ ನಾಯಕರ ಭಾವಚಿತ್ರ ಬಳಸಿದೆ.

ಬಿಜೆಪಿ ಕಾರ್ಯಕರ್ತರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದೇ ಆದರೆ, ಅವರ ವಿರುದ್ಧ ಕ್ರಮವಾಗುವ ಸಾಧ್ಯತೆಯೂ ಇದೆ. ಈ ಅತೃಪ್ತರ ಭಿನ್ನರಾಗದ ಸಮಾವೇಶದ ಬಗ್ಗೆ ಕಠಿಣ ನಿಲುವು ತಳೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಭೆಗೆ ಹೋಗುವವರ ವಿರುದ್ಧ ಶಿಸ್ತುಕ್ರಮ ಖಂಡಿತ ಎಂಬ ಸಂದೇಶ ರವಾನಿಸಿದ್ದಾರೆ.

ವರದಿ: ವೀರೇಂದ್ರ ಉಪ್ಪುಂದ, ಸುವರ್ಣನ್ಯೂಸ್​

Follow Us:
Download App:
  • android
  • ios