Asianet Suvarna News Asianet Suvarna News

ಕಮರ್ಷಿಯಲ್ ವಾಹನಗಳ ವೇಗಕ್ಕೆ ಕತ್ತರಿ; ಸ್ಪೀಡ್ ಗೌರ್ನರ್ ಅಳವಡಿಸಲು ಕೇಂದ್ರ ಸೂಚನೆ

ಇನ್ಮುಂದೆ ಕಮರ್ಷಿಯಲ್ ವಾಹನಗಳ ವೇಗಕ್ಕೆ ಕತ್ತರಿ ಬೀಳಲಿದೆ. ಎಲ್ಲಾ ಕಮರ್ಷಿಯಲ್ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವಂತೆ ಕೇಂದ್ರ ಸಾರಿಗೆ ಇಲಾಖೆ ಆದೇಶಿಸಿದೆ. ಮೋಟಾರು ವಾಹನ ನಿಯಮದ ತಿದ್ದುಪಡಿ ಅಡಿಯಲ್ಲಿ, ನಿಯಮ 118ಕ್ಕೆ ತಿದ್ದುಪಡಿ ತರಲಾಗಿದ್ದು,  ಹಲವು ಮಾರ್ಪಾಡುಗಳನ್ನ ಮಾಡಲಾಗಿದೆ.

Centre Directs to impliment the Speed Governer to Commercial Vehicle

ಬೆಂಗಳೂರು (ಜೂ.22): ಇನ್ಮುಂದೆ ಕಮರ್ಷಿಯಲ್ ವಾಹನಗಳ ವೇಗಕ್ಕೆ ಕತ್ತರಿ ಬೀಳಲಿದೆ. ಎಲ್ಲಾ ಕಮರ್ಷಿಯಲ್ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವಂತೆ ಕೇಂದ್ರ ಸಾರಿಗೆ ಇಲಾಖೆ ಆದೇಶಿಸಿದೆ. ಮೋಟಾರು ವಾಹನ ನಿಯಮದ ತಿದ್ದುಪಡಿ ಅಡಿಯಲ್ಲಿ, ನಿಯಮ 118ಕ್ಕೆ ತಿದ್ದುಪಡಿ ತರಲಾಗಿದ್ದು,  ಹಲವು ಮಾರ್ಪಾಡುಗಳನ್ನ ಮಾಡಲಾಗಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆ 1987 ನಿಯಮಾವಳಿ 118ರ ಪ್ರಕಾರ ಸ್ಪೀಡ್ ಗವರ್ನರ್ ಹೊಂದಿರಬೇಕಾದ್ದು ಕಡ್ಡಾಯ. ಇದೀಗ ನಿಯಮ 118ಕ್ಕೆ ತಿದ್ದುಪಡಿ ತರಲಾಗಿದ್ದು  2015ರ ಅಕ್ಟೋಬರ್ 1ರ ಬಳಿಕ ತಯಾರಾದ  ವಾಹನಗಳಿಗೆ ಸ್ವೀಡ್ ಗವರ್ನರ್ ಅಳವಡಿಸುವಂತೆ ಆದೇಶಿಸಿದೆ.

ಹೊಸ ನಿಯಮದ ಪ್ರಕಾರ 2015ರ ಬಳಿಕ ತಯಾರಾದ ವಾಹನಗಳು, ಅದರಲ್ಲೂ ಕಮರ್ಶಿಯಲ್ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸೋದು ಕಡ್ಡಾಯವಾಗಿದೆ.  ಪ್ರತೀ ವಾಹನಗಳ ಗರಿಷ್ಟ ಮಿತಿ 80 ಕಿಲೋಮೀಟರ್ ಇರಬೇಕಿದ್ದು  ಪ್ರತೀ ವಾಹನಗಳಿಗೂ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸಬೇಕಿದೆ.  ಅಲ್ಲದೆ ಇನ್ನು ಮುಂದೆ ತಯಾರಾಗುವ ವಾಹನಗಳ ತಯಾರಿಕೆಯಲ್ಲಿಯೇ ಸ್ಪೀಡ್ ನಿಗದಿಗೊಳಿಸುವಂತೆ ಕೇಂದ್ರ ಸಾರಿಗೆ ಇಲಾಖೆ ಆದೇಶಿಸಿದೆ. ಈ ಹೊಸ ನಿಯಮದಿಂದ ಟೂರಿಸ್ಟ್ ವಾಹನ, ಟ್ಯಾಕ್ಸಿಗಳು,  ಕಮರ್ಶಿಯಲ್ ವಾಹನಗಳಿಗೆ ಹೊಡೆತ ಬೀಳಲಿದೆ. ಅದರಲ್ಲೂ ಹೈಟೆಕ್ ವಾಹನಗಳ ಸೌಲಭ್ಯ ಪಡೆಯೋ ಖಾಸಗಿ ವಾಹನಗಳೂ ಕೂಡ ಇನ್ಮುಂದೆ ಇದರ ಅಡಿಯಲ್ಲಿ ಬರಬೇಕಿದ್ದು ಇದರಿಂದ ದೊಡ್ಡ ಹೊಡೆತ ಬೀಳಲಿದೆ.ಇದುವರೆಗೂ 8 ಸೀಟುಗಳ ವಾಹನಗಳಿಗೆ ವಿನಾಯಿತಿ ನೀಡಲಾಗಿದ್ದು, ಅವುಗಳೂ ಕೂಡ ಇನ್ಮುಂದೆ ನೂತನ ತಿದ್ದುಪಡಿಗೆ ಸೇರ್ಪಡೆಗೊಳ್ಳಲಿವೆ.

ಈ ಹೊಸ ಸಾರಿಗೆ ನೀತಿಗೆ, ಮೋಟಾರು ವಾಹನ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದು ನೂತನ ನಿಯಮಾವಳಿಯಲ್ಲಿ ಕೊಂಚ ತಿದ್ದುಪಡಿ ತರುವಂತೆ ಮನವಿ ನೀಡಲು ಮುಂದಾಗಿವೆ. ತಿದ್ದುಪಡಿ ತರದಿದ್ದಲ್ಲಿ ಮತ್ತೆ ಹೋರಾಟಕ್ಕಿಳಿಯೋ ಸಾಧ್ಯತೆಗಳಿವೆ.

Follow Us:
Download App:
  • android
  • ios