Asianet Suvarna News Asianet Suvarna News

ತುಮಕೂರು: ಚಿ.ನಾ.ಹಳ್ಳಿ ತಹಸೀಲ್ದಾರ್ ಕಚೇರಿ ದಾಂಧಲೆ ಪ್ರಕರಣದಲ್ಲಿ ಬಿಜೆಪಿ ಲಿಂಕ್?

ರೈತರೊಬ್ಬರ ಮುಂದೆ ತಹಶಿಲ್ದಾರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಮಾದುಸ್ವಾಮಿ ಬೆಂಬಲಿಗರು ತಹಶಿಲ್ದಾರ್ ಕಚೇರಿ ಕಿಟಕಿ ಬಾಗಿಲುಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಚಿಕ್ಕನಾಯಕಹಳ್ಳಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದರು.

cctv footage shows bjp leader maduswamy and his supporters going aggressive in tehsildar office in tumkur

ತುಮಕೂರು(ಜುಲೈ 19): ಎರಡು ದಿನಗಳ ಹಿಂದೆ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದ್ದ ಪೀಠೋಪಕರಣಗಳ ಧ್ವಂಸ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬಿಜೆಪಿಯ ಮಾಜಿ ಶಾಸಕ ಜೆ.ಸಿ.ಮಾದುಸ್ವಾಮಿ ಹಾಗೂ ಕಾರ್ಯಕರ್ತರು ಪಿಠೋಪಕರಣ ದ್ವಂಸಗೊಳಿಸಿದ  ಸಿಸಿಟಿಟಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜುಲೈ 17ರಂದು ರೈತರಿಗೆ ಬಗರ್ ಹುಕುಂ ಹಕ್ಕುಪತ್ರ ವಿತರಸಿಲು ಆಗ್ರಹಿಸಿ , ಬಿಜೆಪಿ ಮಾಜಿ ಶಾಸಕ ಜೆಸಿ ಮಾದುಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಮಾದುಸ್ವಾಮಿ ರೈತರೊಂದಿಗೆ ತೆರಳಿ ತಹಶಿಲ್ದಾರ್ ಗಂಗೇಶ್‍ಗೆ ಮನವಿ ಪತ್ರ ಸಲ್ಲಿಸಿದ್ದರು. ನಂತರ ರೈತರೊಬ್ಬರ ಮುಂದೆ ತಹಶಿಲ್ದಾರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಮಾದುಸ್ವಾಮಿ ಬೆಂಬಲಿಗರು ತಹಶಿಲ್ದಾರ್ ಕಚೇರಿ ಕಿಟಕಿ ಬಾಗಿಲುಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಚಿಕ್ಕನಾಯಕಹಳ್ಳಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದರು.

ಅಮಾಯಕರನ್ನು ಬಂಧಿಸಲಾಗಿದೆ. ಅವರ ಬದಲಿಗೆ ನನ್ನನ್ನು ಬಂಧಿಸಿ ಎಂದು ಮಾದುಸ್ವಾಮಿ ಚಿಕ್ಕನಾಯಕನಹಳ್ಳಿ ಠಾಣೆ ಮುಂದೆ ನಿನ್ನೆ ಪ್ರತಿಭಟನೆ ನಡೆಸಿದ್ದರು. ಇದೀಗ ಪಿಠೋಪರಕರಣ ದ್ವಂಸಗೊಳಿಸಿದ ವಿಡಿಯೋ ವೈರಲ್ ಆಗಿದ್ದು, ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ. ಅಲ್ಲದೇ, ತಾಲೂಕಿನಾದ್ಯಂತ ಬಿಸಿ ವಾತಾವರಣ ಸೃಷ್ಟಿಯಾಗಿದೆ.

Follow Us:
Download App:
  • android
  • ios