Asianet Suvarna News Asianet Suvarna News

ಮುಸ್ಲಿಂ ವೈಯಕ್ತಿಕ ಕಾನೂನು ಜಾಗೃತಿ ಅಭಿಯಾನ ಆರಂಭ

ಮುಸ್ಲಿಂ ವೈಯಕ್ತಿಕ ಕಾನೂನು ಕುರಿತಂತೆ ಮುಸ್ಲಿಂ ಸಮುದಾಯದವರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಕಾನೂನು ಕುರಾನ್‌ ಹಾಗೂ ಪ್ರವಾದಿ ಶಿಕ್ಷಣಗಳ ಸಾರದಿಂದ ರಚನೆಯಾಗಿದೆ. ಈ ಕಾನೂನು ತಿದ್ದುಪಡಿಯ ಹಕ್ಕು ಯಾವುದೇ ಮನುಷ್ಯ ಅಥವಾ ಸಮೂಹಕ್ಕೆ ಇರುವುದಿಲ್ಲ.

Campaign to Create Awareness about Muslim Personal Laws Launched

ಬೆಂಗಳೂರು: ಮುಸ್ಲಿಂ ವೈಯಕ್ತಿಕ ಕಾನೂನು ಜಾಗೃತಿ ಅಭಿಯಾನವನ್ನು ಏ.23ರಿಂದ ಮೇ 7ರವರೆಗೆ ಎರಡು ವಾರಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‌ ಮುಖಂಡ ಮುಲ್ಲಾನ ವಾಲದ್ದೀನ್‌ಖಾನ್‌ ಇಮಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ವೈಯಕ್ತಿಕ ಕಾನೂನು ಕುರಿತಂತೆ ಮುಸ್ಲಿಂ ಸಮುದಾಯದವರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಕಾನೂನು ಕುರಾನ್‌ ಹಾಗೂ ಪ್ರವಾದಿ ಶಿಕ್ಷಣಗಳ ಸಾರದಿಂದ ರಚನೆ ಯಾಗಿದೆ. ಈ ಕಾನೂನು ತಿದ್ದುಪಡಿಯ ಹಕ್ಕು ಯಾವುದೇ ಮನುಷ್ಯ ಅಥವಾ ಸಮೂಹಕ್ಕೆ ಇರುವುದಿಲ್ಲ. ಪ್ರವಾದಿ ಆಜ್ಞೆಗಳನ್ನು ಪಾಲಿಸುವುದು ಮುಸ್ಲಿಂರ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಆಗಿರುವ ಹಿನ್ನೆಲೆ ಈ ಕುರಿತು ಜಾಗೃತಿ ಅಭಿಯಾನ ಅಗತ್ಯ ಎಂದರು.

ಮುಸ್ಲಿಂ ಸಮುದಾಯ ವಿವಾಹ, ತಲಾಕ್‌, ವಾರಸು ಸ್ವತ್ತು, ವಧುದಕ್ಷಿಣೆ ನಿರ್ವಹಣೆ ಹಾಗೂ ಮುಸ್ಲಿಂ ವೈಯ ಕ್ತಿಕ ಕಾನೂನಿನ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಲ್ಲಿ ಅದು ಶಾಂತಿ ಮತ್ತು ನೆಮ್ಮದಿಯ ತಾಣವಾಗಲಿದೆ. ಈ ಕಾನೂನಿನಿಂದ ಜೀವನದಲ್ಲಿ ಸಾಮರಸ್ಯ, ಸೌಹಾರ್ದತೆ ಮೂಡುತ್ತದೆ. ಮುಸ್ಲಿಂರಿಗೆ ಇಸ್ಲಾಮಿನ ಕೌಟುಂಬಿಕ ಕಾನೂನಿನ ಆದೇಶಗಳನ್ನು ಅಭಿಯಾನದ ಮೂಲಕ ತಿಳಿಸಿದ್ದಲ್ಲಿ ಮುಸ್ಲಿಂ ಷರಿಯತ್‌ ಕಾನೂನು ಉಲ್ಲಂಘನೆ ಕಡಿಮೆಯಾಗಿ ಉತ್ತಮ ಜೀವನ ರೂಪುಗೊಳ್ಳುತ್ತದೆ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಹಾಗಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios