ಬಿಎಸ್'ವೈ ದಲಿತರ ಮನೆಯಲ್ಲಿ ಊಟ ಮಾಡಿದ್ರು: ಆದರೆ ತಿಂಡಿ ಹೋಟೆಲ್'ನಿಂದ ತಂದಿದ್ದು
news
By Suvarna Web Desk | 09:30 PM May 19, 2017

. ನಿನ್ನೆ ದಲಿತರ ಮನೆಯಲ್ಲಿ  ಹೊಟೇಲ್​ನಿಂದ ತರಿಸಿ ಯಡಿಯೂರಪ್ಪ ಟಿಫಿನ್ ಸೇವನೆ ಆರೋಪ ಗಂಭೀರ ಸ್ವರೂಪಕ್ಕೆ ತಿರುಗಿದೆ. ಆದರೆ, ಬಿಜೆಪಿ ಮುಖಂಡರು ಮಾತ್ರ ದಲಿತರ ಮನೆಯಲ್ಲೇ ಉಪಹಾರ ಮಾಡಲಾಗಿದೆ ಅಂತ ಹೇಳಿಕೊಂಡ್ರು.

ಚಿತ್ರದುರ್ಗ(ಮೇ.19): ಬರ ಪ್ರವಾಸದ ಎರಡನೇ ದಿನ ಚಿತ್ರದುರ್ಗ ಜಿಲ್ಲೆ ಯ ಹಲವೆಡೆ ನಡೆಯಿತು. ಮೊದಲ ದಿನವಿದ್ದ ಆರ್ಭಟ ಎರಡನೇ ದಿನ ಇರ್ಲಿಲ್ಲ. ಆದ್ರೆ, ನಿನ್ನೆ ತುಮಕೂರಿನ ದಲಿತರ ಮನೆಯ ಭೋಜನ ಸಖತ್ ಸದ್ದು ಮಾಡಿದೆ. ಹೋಟೆಲ್​ನಿಂದ ತಂದಿದ್ದ ಇಡ್ಲಿಯನ್ನ ದಲಿತರ ಮನೆಯಲ್ಲಿ ಸೇವಿಸಿ ಕಮಲಪಡೆ ಮೋಸ ಮಾಡಿದೆ ಅನ್ನೋ ಆರೋಪ ಕೇಳಿ ಬಂದಿದೆ.

ತುಮಕೂರಿಲ್ಲಿ ನಿನ್ನೆ 30ಕ್ಕೂ ಹೆಚ್ಚು ಬಿಜೆಪಿ ನಾಯಕರ ದಂಡು ಇವತ್ತು ಚಿತ್ರದುರ್ಗದಲ್ಲಿ ಕೇವಲ ಮೂರ್ನಾಲ್ಕಕ್ಕೆ ಇಳಿದಿತ್ತು. ನಿನ್ನೆ ದಲಿತರ ಮನೆಯಲ್ಲಿ  ಹೊಟೇಲ್​ನಿಂದ ತರಿಸಿ ಯಡಿಯೂರಪ್ಪ ಟಿಫಿನ್ ಸೇವನೆ ಆರೋಪ ಗಂಭೀರ ಸ್ವರೂಪಕ್ಕೆ ತಿರುಗಿದೆ. ಆದರೆ, ಬಿಜೆಪಿ ಮುಖಂಡರು ಮಾತ್ರ ದಲಿತರ ಮನೆಯಲ್ಲೇ ಉಪಹಾರ ಮಾಡಲಾಗಿದೆ ಅಂತ ಹೇಳಿಕೊಂಡ್ರು.

ಮಾಗಡಿಯಲ್ಲಿ ಮಾತಾಡಿದ ಎಚ್​.ಡಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರು ಇಂತಹ ಕೀಳು ಅಭಿರುಚಿ ಕೈಬಿಡಬೇಕು ಅಂತ ಮನವಿ ಮಾಡಿದರು. ಇತ್ತ ಕಾಂಗ್ರೆಸ್ ಪಕ್ಷದ SC-ST ಸೆಲ್​​ ಅಧ್ಯಕ್ಷ ಎಚ್ ಅಂಜಿನಪ್ಪ ಕೂಡಾ ದಲಿತರ ಮನೆಯಲ್ಲಿ ಹೋಟೆಲ್ ತಿಂಡಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೆ ಈಗಿನಿಂದಲೇ ಬಿಜೆಪಿ ಕಸರತ್ತು ಮಾಡಿದೆ. ಆದರೆ, ಬರ ಅಧ್ಯಯನ ಜನಸಂಪರ್ಕ ಹೆಸರಲ್ಲಿ ದಲಿತರ ಓಲೈಕೆಗೆ ಮುಂದಾಗಿ ಎಡವಟ್ಟು ಮಾಡಕೊಂಡಿದೆ.

Show Full Article